Site icon Vistara News

Navaratri Jewel Trend: ನವರಾತ್ರಿ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ 3 ಶೈಲಿಯ ಜ್ಯುವೆಲರಿ

Navaratri Jewel Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ ಎಥ್ನಿಕ್‌ವೇರ್‌ಗೆ ಸಾಥ್‌ ನೀಡುವ ಗ್ರ್ಯಾಂಡ್‌ ಜ್ಯುವೆಲರಿಗಳು (Navaratri Jewel Trend) ಈ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ದಾಂಡಿಯಾ, ಗರ್ಬಾ ಡಾನ್ಸ್‌ಗೆ ಧರಿಸುವ ಭಾರಿ ಹಾಗೂ ಹೆವ್ವಿ ಡಿಸೈನ್‌ನ ಆಭರಣಗಳು ಬೇಡಿಕೆ ಹೆಚ್ಚಿಸಿಕೊಂಡಿದ್ದು, ಸದ್ಯಕ್ಕೆ ಜಂಕ್‌ ಜ್ಯುವೆಲರಿ, ಆಕ್ಸಿಡೈಸ್ಡ್ ಮತ್ತು ಇಮಿಟೇಷನ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು ಅತಿ ಹೆಚ್ಚು ಮಾನಿನಿಯರನ್ನು ಸೆಳೆದಿವೆ.

“ನವರಾತ್ರಿಯಲ್ಲಿ ಧರಿಸುವ ಗ್ರ್ಯಾಂಡ್‌ ಲೆಹೆಂಗಾ, ಗಾಗ್ರಾ ಹಾಗೂ ಇನ್ನಿತರೇ ಔಟ್‌ಫಿಟ್‌ಗಳಿಗೆ ಬಂಗಾರದ ಅಭರಣಗಳನ್ನು ಧರಿಸುವುದು ಕಡಿಮೆ. ಜಂಕ್‌ ಜ್ಯುವೆಲರಿ, ಆಕ್ಸಿಡೈಸ್ಟ್, ಸ್ಟೇಟ್‌ಮೆಂಟ್‌ ಜ್ಯುವೆಲರಿಗಳನ್ನು ಹೆಚ್ಚಾಗಿ ಮಾನಿನಿಯರು ಪ್ರಿಫರ್‌ ಮಾಡುತ್ತಾರೆ. ಇದು ಭಾರಿ ಡಿಸೈನ್‌ನ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುತ್ತವೆ. ಅಲ್ಲದೇ ಫೆಸ್ಟಿವ್‌ ಸೀಸನ್‌ ಲುಕ್‌ ನೀಡುತ್ತವೆ. ದಾಂಡಿಯಾದಂತಹ ಡಾನ್ಸ್ ಕಾರ್ಯಕ್ರಮಗಳಲ್ಲಿ ಬಿದ್ದು ಹೋದರೂ, ಕಳೆದು ಹೋದರೂ ತಲೆ ಬಿಸಿಯಿಲ್ಲ. ಅತಿ ಹೆಚ್ಚು ಬೆಲೆ ಬಾಳುವುದು ಇಲ್ಲ! ನಿರಾಂತಕವಾಗಿ ಧರಿಸಿ ಡಾನ್ಸ್‌ ಮಾಡಬಹುದು. ಎಲ್ಲೆಂದರಲ್ಲಿ ಧರಿಸಿ ಓಡಾಡಬಹುದು” ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ರಿಯಾ. ಅವರ ಪ್ರಕಾರ, ಈ ಫೆಸ್ಟಿವ್‌ ಸೀಸನ್‌ನಲ್ಲಿ ಅತಿ ಹೆಚ್ಚು ಮಹಿಳೆಯರು ಧರಿಸುವ ಬಂಗಾರರಹಿತ ಜ್ಯುವೆಲ್‌ಗಳಿವು ಎನ್ನುತ್ತಾರೆ.

ಎಲ್ಲದಕ್ಕೂ ಮ್ಯಾಚ್‌ ಆಗುವ ಜಂಕ್‌ ಜ್ಯುವೆಲರಿ

ನಾನಾ ಬಗೆಯ ಮೆಟಲ್‌ಗಳಿಂದ ತಯಾರಿಸಲ್ಪಟ್ಟಿರುವ, ಮಿಕ್ಸ್‌ ಮ್ಯಾಚ್‌ ಡಿಸೈನ್‌ ಹೊಂದಿರುವ ಜಂಕ್‌ ಜ್ಯುವೆಲರಿಗಳು ದುಬಾರಿಯೇನಲ್ಲ! ಅಲ್ಲದೇ ಧರಿಸುವ ಯಾವುದೇ ಔಟ್‌ಫಿಟ್‌ಗೂ ಅತಿ ಸುಲಭವಾಗಿ ಮ್ಯಾಚ್‌ ಆಗುತ್ತವೆ. ಗ್ರ್ಯಾಂಡ್‌ ಲುಕ್‌ ನೀಡುತ್ತವೆ. ಇವುಗಳಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸ ಲಭ್ಯ. ಹಾಗಾಗಿ ಈ ಶೈಲಿಯ ಜ್ಯುವೆಲರಿಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಸ್ತ್ರೀಯರನ್ನು ಸೆಳೆದಿವೆ.

ಆಕರ್ಷಕ ಆಕ್ಸಿಡೈಸ್ಡ್‌ ಜ್ಯುವೆಲರಿ

ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರಕುವ ಈ ಜ್ಯುವೆಲರಿಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಸಿಗುತ್ತವೆ. ನೋಡಲು ಬ್ಲಾಕ್‌ ಹಾಗೂ ವೈಟ್‌ ಮೆಟಲ್‌ನಂತೆ ಕಾಣುವ ಈ ಆಭರಣಗಳು ನವರಾತ್ರಿಯ ಎಥ್ನಿಕ್‌ವೇರ್‌ಗಳಿಗೆ ಮ್ಯಾಚ್‌ ಆಗುವಂತಹ ಹೆವ್ವಿ ಡಿಸೈನ್‌ನಲ್ಲಿ ಬಂದಿವೆ. ಕಡ, ಕಡಗ, ಸೆಟ್‌ ಬ್ಯಾಂಗಲ್ಸ್‌, ಚೋಕರ್ಸ್, ಹ್ಯಾಂಗಿಂಗ್ಸ್‌, ಜುಮ್ಕಾ ಮಾತಾ ಪಟ್ಟಿ, ಮಾಂಗ್‌ ಟೀಕಾ, ಕಮರ್‌ಬಾಂದ್‌ ಹೀಗೆ ಎಲ್ಲಾ ಶೈಲಿಯಲ್ಲೂ ಕಾಣಿಸಿಕೊಂಡಿವೆ.

ಇಮಿಟೇಷನ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು

ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಭಾರಿ ಡಿಸೈನ್‌ನ ಇಮಿಟೇಷನ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು ಸೆಟ್‌ನಲ್ಲಿ ಲಭ್ಯ. ಧರಿಸುವ ಆಯಾ ಉಡುಪಿಗೆ ತಕ್ಕಂತೆ ಕಲರ್‌ ಮ್ಯಾಚ್‌ ಮಾಡಬಹುದಾದ ಆಭರಣಗಳಿವು. ಧರಿಸಿದಾಗ ನೋಡಲು ಸೆಲೆಬ್ರೆಟಿಯಂತೆ ಬಿಂಬಿಸುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Navaratri Green Colour Fashion Tips: 6ನೇ ದಿನ ಹಸಿರು ವರ್ಣದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಇಲ್ಲಿದೆ ಸ್ಟೈಲಿಂಗ್‌ ಟಿಪ್ಸ್

Exit mobile version