ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ಪುರುಷರ ಫ್ಯಾಷನ್‌ನಲ್ಲಿ ವಿಭಿನ್ನ ವಿನ್ಯಾಸದ(New Trend)ಪ್ರಿಂಟೆಡ್ ಶರ್ಟ್‌ಗಳು ಟ್ರೆಂಡಿಯಾಗಿವೆ.
ಅದರಲ್ಲೂ ವೃತ್ತಿಪರರು ಧರಿಸಬಹುದಾದಂತಹ ಕಲೆಕ್ಷನ್‌ಗಳಲ್ಲಿ ವಿಭಿನ್ನ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಕಾಂಟ್ರಸ್ಟ್ ವರ್ಣದಲ್ಲಿ ಜೆಮೆಟ್ರಿಕ್, ಟ್ರಾಪಿಕಲ್, ಪಾಮ್, ಪೇಂಟ್ ಬ್ರಶ್, ಚಿಕ್ಕ ಫ್ಲೋರಲ್ ವಿನ್ಯಾಸದ ಪ್ರಿಂಟ್ಸ್ ಸೇರಿದಂತೆ ನಾನಾ ಬ್ರಾಂಡ್‌ನಲ್ಲಿ ಇವು ಬಿಡುಗಡೆಗೊಂಡಿವೆ.
ಮೊದಮೊದಲು ಕೇವಲ ರ್ಯಾಂಪ್ ಹಾಗೂ ಹಾಲಿಡೇ ಫ್ಯಾಷನ್‌ನಲ್ಲಿದ್ದ ಇವು ಇದೀಗ ಕೊಂಚ ವಿನ್ಯಾಸ ಬದಲಿಸಿಕೊಂಡು ಮರು ಎಂಟ್ರಿ ನೀಡಿವೆ.
ಯೂರೋಪಿಯನ್ ಶರ್ಟ್ ಮಾದರಿ:
ಅಂದ ಹಾಗೆ ಕಾಲೇಜು ಹುಡುಗರು, ಮಾಡೆಲ್‌ಗಳು ಧರಿಸುತ್ತಿದ್ದ ಫಂಕಿ ಲುಕ್ ನೀಡುತ್ತಿದ್ದ ಬಟನ್‌ಲೆಸ್ ಪ್ರಿಂಟೆಡ್ ಶರ್ಟ್‌ಗಳು ಇವಲ್ಲ. ಸ್ಟಿಚ್ಚಿಂಗ್ ಕಾನ್ಸೆಪ್ಟ್ ಕೂಡ ಡಿಫರೆಂಟ್ ಶೈಲಿಯಲ್ಲಿದೆ. ಯೂರೋಪಿಯನ್ ಶೈಲಿಯ ಫಾರ್ಮಲ್ ಶರ್ಟ್‌ಗಳ ವಿನ್ಯಾಸದಲ್ಲಿ ಇವು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎನ್ನುತ್ತಾರೆ ಮಾಡೆಲ್ ಕಮ್ ನಟ ವಿನಯ್ ಸಿಂಧ್ಯಾ. ಅವರು ಹೇಳುವಂತೆ: ಒಂದೇ ಶೇಡ್‌ನ ಸೀದಾ ಸಾದಾ ಇಲ್ಲವೇ ಚೆಕ್ಸ್ ಇರುವಂತಹ ಶರ್ಟ್‌ಗಳನ್ನು ಧರಿಸಿ ಬೋರಾಗಿರುವವರಿಗೆ ಇವು ಹೇಳಿ ಮಾಡಿಸಿದಂತಿವೆ. ಕೊಂಚ ಡಿಫರೆಂಟ್ ಲುಕ್ ನೀಡುವುದರೊಂದಿಗೆ ಮ್ಯಾನ್ಲಿ ಫೀಲ್ ನೀಡುತ್ತಿವೆ.
ಡಿಸೆಂಟ್ ಪ್ರಿಂಟ್ಸ್:
ಡಿಸೈನರ್‌ಗಳ ಪ್ರಕಾರ: ಈ ಹಿಂದೆ ಟ್ರೆಂಡ್‌ನಲ್ಲಿದ್ದ ಪ್ರಿಂಟೆಡ್ ಶರ್ಟ್‌ಗಳು ಎಲ್ಲರಿಗೂ ಸೂಟ್ ಆಗುತ್ತಿರಲಿಲ್ಲ. ಫಂಕಿ ಲುಕ್ ಇಲ್ಲವೇ ಹಾಲಿಡೇ ಲುಕ್ ನೀಡುತ್ತಿದ್ದವು. ಆದರೆ, ಈಗಿನವನ್ನು ಕಚೇರಿಗೂ ಧರಿಸಬಹುದು. ಇವುಗಳನ್ನು ಧರಿಸಿ ಸೆಮಿನಾರ್ ಹಾಗೂ ಮೀಟಿಂಗ್‌ಗಳನ್ನು ಅಟೆಂಡ್ ಮಾಡಬಹುದು. ನೋಡಲು ಡಿಸೆಂಟ್ ಆಗಿರುವುದರೊಂದಿಗೆ ಆಕರ್ಷಕವಾಗಿಯೂ ಕಾಣುತ್ತವೆ.
ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆ:
ವೃತ್ತಿಪರರು, ತಾವು ಕಾರ್ಯನಿರ್ವಹಿಸುವಾಗ, ಆರಾಮ ಎನಿಸುವ ಶರ್ಟ್ ಹಾಗೂ ಪ್ಯಾಂಟ್ ಧರಿಸಲು ಇಷ್ಟಪಡುತ್ತಾರೆ. ವಾಹನ ಚಾಲನೆ ಮಾಡುವಾಗ, ಯಾವುದೇ ಜಂಜಾಟವಿಲ್ಲದೆ ಕೈಗಳನ್ನು ಅತಿ ಸುಲಭವಾಗಿ ಬಳಸಲು ಅನುವಾಗುವಂತಹ ತುಂಬು ತೋಳಿನ ಶರ್ಟ್‌ಗಳನ್ನು ಬಳಸಲು ಇಚ್ಛಿಸುತ್ತಾರೆ. ಇದಕ್ಕೆ ಪೂರಕವಾಗುವಂತೆ ಈ ಸೀಸನ್ ಪ್ರಿಂಟ್ ಶರ್ಟ್‌ಗಳನ್ನು ನಾನಾ ಬ್ರಾಂಡ್‌ಗಳವರು ವಿಶೇಷವಾಗಿ ವೃತ್ತಿಪರರಿಗೆಂದೇ ಬಿಡುಗಡೆ ಮಾಡಿದ್ದಾರೆ.
ವ್ಯಕ್ತಿತ್ವಕ್ಕೆ ತಕ್ಕಂತಿರಲಿ:
ಈ ಪ್ರಿಂಟೆಡ್ ಶರ್ಟ್ ಹ್ಯಾಂಡ್ ಬಟನ್ ಶೈಲಿ ಹಾಗೂ ಕಾಲರ್ ವಿನ್ಯಾಸ ನೋಡಲು ಸರಳವಾಗಿ ಕಂಡರೂ ಸ್ಟಿಚ್ಚಿಂಗ್ ವಿಭಿನ್ನವಾಗಿರುತ್ತದೆ. ಇದು ಕ್ಲಾಸಿ ಲುಕ್ ನೀಡುತ್ತದೆ. ಇಂತಹ ವಿನ್ಯಾಸದ ಬ್ರಾಂಡ್‌ನದ್ದಕ್ಕೆ ಪ್ರಾಮುಖ್ಯತೆ ನೀಡಿ. ಇವು ಉದ್ಯಮಿಗಳು ಹಾಗೂ ವೃತ್ತಿಪರರಿಗೆ ಪರ್ಫೆಕ್ಟ್ ಎನ್ನಬಹುದು. ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಆದಷ್ಟು ಸರಳ ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇನ್ನೊಂದು ಅಂಶವೆಂದರೆ, ಶರ್ಟ್‌ಗೆ ಸೂಟ್ ಆಗುವಂತಹ ಪ್ಯಾಂಟ್ ಧರಿಸುವುದು ಅಗತ್ಯ. ಇನ್ನು ಟೈ ಧರಿಸುವುದಾದಲ್ಲಿ ಶರ್ಟ್‌ಗೆ ಕಾಂಟ್ರಸ್ಟ್ ಬಣ್ಣದ್ದಾಗಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Online Trend: ಮೇಕಪ್ ಕ್ಷೇತ್ರಕ್ಕೆ ಸೋಷಿಯಲ್ ಮೀಡಿಯಾ ಸಾಥ್