Site icon Vistara News

New Year Beauty Trends | ಹೊಸ ವರ್ಷದಲ್ಲಿ ಬ್ಯೂಟಿ ಪ್ರಿಯರನ್ನು ಸೆಳೆಯಲಿರುವ 5 ಬ್ಯೂಟಿ ಟ್ರೆಂಡ್‌ಗಳಿವು

New year beauty trends

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೊಸ ವರ್ಷ ಆಗಮಿಸುತ್ತಿದ್ದಂತೆ ಜಾಗತಿಕ ಮಟ್ಟದ ಬ್ಯೂಟಿ ಲೋಕದಲ್ಲೂ ನಾನಾ ಬದಲಾವಣೆಗಳು ಆಗುತ್ತವೆ. ಕೆಲವು ಬ್ಯೂಟಿ ಕಾನ್ಸೆಪ್ಟ್‌ಗಳು (New year beauty trends) ಲಗ್ಗೆ ಇಟ್ಟು ಟ್ರೆಂಡಿಯಾದರೆ, ಇನ್ನು ಕೆಲವು ಹೊಸದಾಗಿ ಪರಿಚಯಗೊಳ್ಳುತ್ತವೆ. ಮತ್ತೆ ಕೆಲವು ಬ್ಯೂಟಿ ಪ್ರಿಯರ ಮನಗೆದ್ದು ಟ್ರೆಂಡಿಯಾಗುತ್ತವೆ.

೧. ಮಿನಿಮಲಿಸ್ಟಿಕ್‌ ಸ್ಕಿನ್‌ಕೇರ್‌

ಇಂದಿನ ಬಿಜಿ ಲೈಫ್‌ಸ್ಟೈಲ್‌ನಲ್ಲಿ ಜನರಿಗೆ ತಮ್ಮ ಸೌಂದರ್ಯದ ಆರೈಕೆಗೆಂದು ದಿನಗಟ್ಟಲೇ ಸಮಯವಿಡಲು ಸಾಧ್ಯವಾಗದು. ಬಹಳ ಸಮಯ ತೆಗೆದುಕೊಳ್ಳುವ ಸೌಂದರ್ಯ ಚಿಕಿತ್ಸೆಯಾಗಲಿ ಅಥವಾ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುವ ವ್ಯವಧಾನವಾಗಲಿ ಇರದು. ಈಗಿನ ಜನರೇಷನ್‌ನವರು ಹೆಚ್ಚೆಂದರೇ ಇದಕ್ಕಾಗಿ ಕೇವಲ ೨-೩ ತಾಸು ವ್ಯಯಿಸಲು ಸಿದ್ಧರಿರುತ್ತಾರಷ್ಟೆ! ಅಂತಹವರನ್ನು ಗಮನದಲ್ಲಿಟ್ಟುಕೊಂಡ ಕಂಪನಿಗಳು, ನಾನಾ ಬಗೆಯ ಮಿನಿಮಲಿಸ್ಟಿಕ್‌ ಸ್ಕಿನ್‌ ಕೇರ್‌ ಪ್ರಾಡಕ್ಟ್‌ಗಳನ್ನು ಬಿಡುಗಡೆಗೊಳಿಸಿವೆ. ಇವು ಈ ಸಾಲಿನಲ್ಲಿ ಟ್ರೆಂಡಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

೨. ಕೆಮಿಕಲ್‌ ರಹಿತ ಬ್ಯೂಟಿ ಪ್ರಾಡಕ್ಟ್‌ಗಳು

ಸಾಕಷ್ಟು ಮಂದಿಗೆ ತಾವು ಬಳಸುವ ಬ್ಯೂಟಿ ಪ್ರಾಡಕ್ಟ್‌ಗಳು ಯಾವ್ಯಾವ ಕೆಮಿಕಲ್‌ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ ಎಂಬುದೂ ಕೂಡ ತಿಳಿದಿರುವುದಿಲ್ಲ! ಬಹಳಷ್ಟು ಬ್ಯೂಟಿ ಪ್ರಾಡಕ್ಟ್‌ಗಳಲ್ಲಿ ನಾನಾ ಬಗೆಯ ಕೆಮಿಕಲ್‌ಗಳು ಒಳಗೊಂಡಿರುತ್ತದೆ. ಇವು ತಕ್ಷಣಕ್ಕೆ ತ್ವಚೆಯನ್ನು ಆಕರ್ಷಕವಾಗಿಸಿದರೂ ನಂತರ ಇವುಗಳಿಂದ ಸಮಸ್ಯೆ ಎದುರಾಗಬಹುದು. ಇದನ್ನರಿತ ಬಹಳಷ್ಟು ಮಂದಿ ಈ ವರ್ಷ ಕೆಮಿಕಲ್‌ ರಹಿತ ಕ್ಲೀನ್‌ ಬ್ಯೂಟಿ ಪ್ರಾಡಕ್ಟ್ಸ್‌ಗೆ ಮೊರೆ ಹೋಗುತ್ತಿದ್ದಾರೆ. ಪರಿಣಾಮ ಇಂತಹ ಉತ್ಪನ್ನಗಳು ಟ್ರೆಂಡಿಯಾಗಬಹುದು.

೩. ತ್ವಚೆಯ ಸಂರಕ್ಷಣೆಗೆ ಪಣ

ತ್ವಚೆಯನ್ನು ಹಾಳು ಮಾಡುವ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುವುದಕ್ಕಿಂತ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಲೇಸು ಎನ್ನುತ್ತಾರೆ ಎಕ್ಸ್‌ಪಟ್ರ್ಸ್. ಕ್ಷಣಿಕ ಸೌಂದರ್ಯಕ್ಕೊಸ್ಕರ ನಾನಾ ಬಗೆಯ ಬ್ಯೂಟಿ ಕ್ರೀಮ್‌ಗಳನ್ನು ಬಳಸಿ, ತ್ವಚೆಯ ಡೆಲಿಕೇಟ್‌ ಪದರವನ್ನು ಹಾಳು ಮಾಡಿಕೊಳ್ಳುವ ಬದಲು, ತ್ವಚೆಯ ಸಂರಕ್ಷಣೆಯ ಕಡೆ ಗಮನ ವಹಿಸುವುದು ಮುಖ್ಯ ಎನ್ನುತ್ತಾರೆ. ಇದು ನ್ಯಾಚುರಲ್‌ ಆರೈಕೆ. ಇದು ಕೂಡ ಈ ವರ್ಷದ ಬ್ಯೂಟಿ ಟ್ರೆಂಡಿ ಕೇರ್‌ ಲಿಸ್ಟ್‌ಗೆ ಸೇರಲಿದೆ ಎನ್ನುತ್ತಾರವರು.

೪. ಪರಿಸರಸ್ನೇಹಿ ಉತ್ಪನ್ನಗಳು

ಸಮೀಕ್ಷೆಯೊಂದರ ಪ್ರಕಾರ, ಪರಿಸರ ಸ್ನೇಹಿ ಬ್ಯೂಟಿ ಬ್ರಾಂಡ್‌ಗಳನ್ನು ಕೊಳ್ಳುವುದು ಬ್ಯೂಟಿ ಪ್ರೇಮಿಗಳ ಈ ಸಾಲಿನ ರೆಸಲ್ಯೂಷನ್‌ನಲ್ಲಿ ಸೇರಿದೆ. ಈಗಾಗಲೇ ಸಾಕಷ್ಟು ಖ್ಯಾತ ಬ್ರಾಂಡ್‌ಗಳು ಕೂಡ ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುವತ್ತ ಹೊರಳಿವೆ. ಯುವತಿಯರು ಕೂಡ ಇಂತಹ ಪ್ರಾಡಕ್ಟ್‌ಗಳತ್ತ ವಾಲತೊಡಗಿದ್ದಾರೆ. ಇದು ಈ ಸಾಲಿನ ಟ್ರೆಂಡಿ ಯೋಚನೆ ಜತೆಗೆ ಉತ್ತಮ ಬೆಳವಣಿಗೆ ಕೂಡ.

೫. ತ್ವಚೆಯ ಸ್ನೇಹಿಯಾಗಿರುವ ಮೇಕಪ್‌ ಪ್ರಾಡಕ್ಟ್ಸ್

ಮೇಕಪ್‌ನಲ್ಲಿ ಮಲಗಲು ಸಾಧ್ಯವೆ? ಖಂಡಿತ ಸಾಧ್ಯವಿಲ್ಲ. ಆದರೆ, ಈ ಸಾಲಿನಲ್ಲಿ ಇಂತಹ ಹಾನಿರಹಿತ ಮೇಕಪ್‌ ಸಾಮಗ್ರಿಗಳು ಪರಿಚಯಗೊಳ್ಳಲಿವೆಯಂತೆ. ಹಾಗೆಂದು ಎಕ್ಸ್‌ಪರ್ಟ್‌ಗಳು ಹೇಳುತ್ತಾರೆ. ಇಂತಹವು ನಿಜಕ್ಕೂ ಬಂದಲ್ಲಿ ಟ್ರೆಂಡ್‌ನಲ್ಲಿ ಟಾಪ್‌ ಲಿಸ್ಟ್‌ನಲ್ಲಿ ಸೇರುವುದು ಗ್ಯಾರಂಟಿ ಎನ್ನುತ್ತಾರೆ ಫ್ಯಾಷನ್‌ ಪರಿಣತರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Sankranti Fashion | ಸಂಕ್ರಾಂತಿ ಸಂಭ್ರಮಕ್ಕೆ ಲಗ್ಗೆ ಇಟ್ಟ ಡಿಸೈನರ್‌ ಗ್ರ್ಯಾಂಡ್‌ ಟ್ರೆಡಿಷನಲ್‌ ಲಂಗ-ದಾವಣಿ

Exit mobile version