Site icon Vistara News

Non wearable Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ನತಾಶಾ ಪ್ಯಾರಾಚೂಟ್‌ ಲುಕ್‌

Non wearable Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಲಂಡನ್‌ನಲ್ಲಿ ಭಾರತೀಯ ಮೂಲದ ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಗಳಿಸಿರುವ ಸೂಪರ್‌ ಮಾಡೆಲ್‌ ನತಾಶಾ ಪೂನಾವಾಲ, ಫ್ಯಾಷನ್‌ ಇವೆಂಟ್‌ನಲ್ಲಿ ಧರಿಸಿದ್ದ ಪ್ಯಾರಾಚೂಟ್‌ ಹಾಗೂ ಕಚೈನಾ ಡಾಲ್‌ನಂತೆ ಕಾಣುವ ಕಾಸ್ಟ್ಯೂಮ್‌ನಲ್ಲಿನ ಲುಕ್‌ ಇದೀಗ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ. ಲಂಡನ್‌ ಒಲಂಪಿಯಾನಲ್ಲಿ ತೆಗೆದಿರುವ ಈ ಫ್ಯಾಷೆನಬಲ್‌ ಫೋಟೋಗಳು ಫ್ಯಾಷನ್‌ ಪ್ರಿಯ ನೆಟ್ಟಿಗರನ್ನು ಸೆಳೆದಿವೆ.

ಯಾರಿದು ನತಾಶಾ ಪೂನಾವಾಲ?

ಮೂಲತಃ ಭಾರತೀಯಳಾಗಿರುವ ನತಾಶಾ ಪೂನಾವಾಲ ಲಂಡನ್‌ನಲ್ಲಿ ಉದ್ಯಮಿಯಾಗಿದ್ದಾರೆ. ಸೆರಮ್‌ ಇನ್ಸಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆಯ ಡೈರೆಕ್ಟರ್‌ಗಳಲ್ಲೊಬ್ಬರಾಗಿದ್ದಾರೆ. ವಿವಾಹಿತೆಯರಾಗಿರುವ ನತಾಶಾ ಅವರ ಹವ್ಯಾಸ ಮಾಡೆಲಿಂಗ್‌ ಆಗಿದ್ದು, ಲಂಡನ್‌ ಫ್ಯಾಷನ್‌ ವಿಂಗ್‌ವೊಂದರ ಸಕ್ರಿಯ ಸದಸ್ಯೆ ಕೂಡ. ಆಗಾಗ್ಗೆ ಲಂಡನ್‌ನಲ್ಲಿ ನಡೆಯುವ ಫ್ಯಾಷನ್‌ಗೆ ಸಂಬಂಧಿಸಿದ ಶೋಗಳಲ್ಲಿ ತೀರ್ಪುಗಾರರಾಗಿ, ಅತಿಥಿಯಾಗಿ ಹಾಗೂ ಸೆಲೆಬ್ರಿಟಿ ಶೋ ಸ್ಟಾಪರ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪೇಜ್‌ ೩ ಕಾರ್ಯಕ್ರಮಗಳಲ್ಲಿ ಸದಾ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ. ಉದ್ಯಮಿಯಾದರೂ ಮಾಡೆಲ್‌ ಆಗಿ ಯಶಸ್ವಿಯಾಗಬಹುದು ಎಂಬುದಕ್ಕೆ ಇವರು ಉದಾಹರಣೆ ಎನ್ನಬಹುದು. ತಮ್ಮ ವೃತ್ತಿ ಬದುಕಿನ ಜತೆಜತೆಗೆ ಆಗಾಗ್ಗೆ ಫ್ಯಾಷನ್‌ ಇವೆಂಟ್‌ಗಳಲ್ಲಿ ಭಿನ್ನ-ವಿಭಿನ್ನ ಅಥವಾ ಚಿತ್ರ-ವಿಚಿತ್ರ ಕಾಸ್ಟ್ಯೂಮ್‌ಗಳಿಂದಲೇ ಜಾಗತಿಕ ಮಟ್ಟದಲ್ಲಿ ಫ್ಯಾಷನ್‌ ಪ್ರೇಮಿಗಳನ್ನು ಸೆಳೆಯುತ್ತಿರುತ್ತಾರೆ. ಬಾಲಿವುಡ್‌ನ ಕರೀನಾ, ಮಲೈಕಾ, ಕರಣ್‌ ಜೋಹರ್ ಸೇರಿದಂತೆ ಸಾಕಷ್ಟು ತಾರೆಯರು ಇವರ ಸ್ನೇಹಿತರು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಪ್ಯಾರಾಚೂಟ್‌/ಚೈನಾ ಡಾಲ್‌ನಂತೆ ಕಾಣುವ ಕಾಸ್ಟ್ಯೂಮ್‌

ನತಾಶಾ ಅವರ ಈ ನಾನ್‌ವೇರಬಲ್‌ ಕಾಸ್ಟ್ಯೂಮ್‌ ತಕ್ಷಣಕ್ಕೆ ನೋಡಲು ಚಿಕ್ಕ ಪ್ಯಾರಾಚೂಟ್‌ನಂತೆ ಒಮ್ಮೆ ಕಂಡರೇ, ಕಚೈನಾ ಡಾಲ್‌ನಂತೆಯೂ ಕಾಣುತ್ತದೆ. ಹಾಗೆಂದು ಖುದ್ದು ನತಾಶಾರೇ ಹೇಳಿಕೊಂಡಿದ್ದಾರೆ. ನನ್ನ ಪ್ರತಿ ಫ್ಯಾಷನ್‌ ಇವೆಂಟ್‌ನ ಕಾಸ್ಟ್ಯೂಮ್‌ ಎಲ್ಲರಿಗಿಂತ ಭಿನ್ನವಾಗಿರಬೇಕು. ಎಲ್ಲರನ್ನು ಸೆಳೆಯಬೇಕು. ಅಚ್ಚರಿ ಮೂಡಿಸುವಂತಿರಬೇಕು. ಹಾಗಾಗಿ ನಾನಾ ಸದಾ ಭಿನ್ನವಾಗಿರುವ ಉಡುಪಿನಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ ಎಂದು ನತಾಶಾ ಸಾಕಷ್ಟು ಬಾರಿ ಮಾಧ್ಯಮವೊಂದರ ಸಂದರ್ಶನದಲ್ಲೂ ಹೇಳಿಕೊಂಡಿದ್ದಾರೆ.

ಇನ್ನು ನತಾಶಾರ ಈ ಉಡುಪಿಗೆ ಫ್ಯಾಷನ್‌ ಪ್ರಿಯರು ಕೂಡ ನಾನಾ ಹೆಸರು ನೀಡಿದ್ದಾರೆ. ಅವುಗಳಲ್ಲಿ ಕ್ಯಾಂಡಿ, ಲಾಲಿಪಾಪ್‌, ಮಿನಿ ಪ್ಯಾರಾಚೂಟ್‌, ಡಾಲ್‌ ಎಂದೆಲ್ಲಾ ಚಿತ್ರ-ವಿಚಿತ್ರವಾಗಿ ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಒಟ್ಟಿನಲ್ಲಿ ನತಾಶಾ ಆಗಾಗ್ಗೆ ಒಂದಲ್ಲ ಒಂದು ಊಹೆಗೂ ಮೀರಿದ ಡಿಸೈನರ್ವೇರ್‌ಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿರುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Celebrity Fashion Corner: ಫ್ಯಾಷನ್‌ ಗ್ರೂಮಿಂಗ್‌ ಕಾನ್ಸೆಪ್ಟ್‌ಗೆ ಹೊಸ ರೂಪ ಕಲ್ಪಿಸಿದ ಗೀತಾ ಶೆಟ್ಟಿ

Exit mobile version