ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೊರಿಯನ್ನರ ಗ್ಲಾಸ್ ಸ್ಕಿನ್ (korean glass skin) ಹಾಗೂ ಇತರೇ ಬ್ಯೂಟಿ ಆರೈಕೆಗಳನ್ನು ನೋಡಿದಾಗ ವಾವ್ಹ್ ಎನ್ನುವ ನೀವು ಉತ್ತರ ಕೊರಿಯಾದಲ್ಲಿ ಕೆಲವು ಬ್ಯೂಟಿ ಸ್ಟೇಟ್‌ಮೆಂಟ್ಸ್ ಫಾಲೋ ಮಾಡುವ ಹಾಗಿಲ್ಲ! ಎಂಬುದನ್ನು ತಿಳಿದಲ್ಲಿ ದಂಗಾಗುತ್ತೀರಾ! ಹೌದು.
ಅಲ್ಲಿನ ಹುಡುಗಿಯರು ಸರ್ಕಾರ ಹೇರಿರುವ ಕೆಲವು ನಿರ್ಬಂಧಿತ ಬ್ಯೂಟಿ ಸ್ಟೇಟ್‌ಮೆಂಟ್‌ಗಳನ್ನು ತಮ್ಮ ಲೈಫ್‌ಸ್ಟೈಲ್‌ನಲ್ಲಿ ಯಾವತ್ತಿಗೂ ಬಳಸುವಂತಿಲ್ಲ. ಸಾಕಷ್ಟು ಬ್ಯೂಟಿ ಹಾಗೂ ಮೇಕಪ್ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು (beauty style statement) ನಾರ್ತ್ ಕೊರಿಯಾ ಬ್ಯಾನ್ ಮಾಡಿದೆ. ಅವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ವಿವರಿಸಲಾಗಿದೆ.
ರೆಡ್ ಲಿಪ್‌ಸ್ಟಿಕ್ ಹಚ್ಚುವಂತಿಲ್ಲ!
ಯಾವುದೇ ಕಾರಣಕ್ಕೂ ಇಲ್ಲಿನ ಹೆಣ್ಣು ಮಕ್ಕಳು ರೆಡ್ ಲಿಪ್‌ಸ್ಟಿಕ್ (korean red lipstick) ಹಚ್ಚುವಂತಿಲ್ಲ! ಇದಕ್ಕೆ ಇಲ್ಲಿ ನಿರ್ಬಂಧವಿದೆ. ಕಿಮ್ ಜಾಂಗ್ ಉನ್‌ರ ಡಿಕ್ಟೆಟರ್‌ಶಿಪ್‌ನಲ್ಲಿ (kim jong un leadership style) ನಡೆಯುತ್ತಿರುವ ಸರ್ಕಾರವು ಈ ನಿರ್ಬಂದ ಹೇರಿದೆ. ಈ ಕಲರ್ ಕ್ಯಾಪಿಟಾಲಿಸಂ ಅನ್ನು ಎತ್ತಿಹಿಡಿಯುತ್ತದೆ ಎಂಬ ಊಹೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಬ್ಯೂಟಿ ವಿಮರ್ಶಕರು.
ಹೆವಿ ಮೇಕಪ್ ಮಾಡುವಂತಿಲ್ಲ!
ಹೌದು. ಎದ್ದು ಕಾಣುವಂತಹ ಹೆವಿ ಮೇಕಪ್ (heavy makeup look) ಮಾಡುವುದು ಕೂಡ ಇಲ್ಲಿ ಬ್ಯಾನ್ ಮಾಡಲಾಗಿದೆ. ಅಪ್ಪಿ ತಪ್ಪಿ ಹೆವಿ ಮೇಕಪ್ ಮಾಡಿದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ! ಲೈಟಾಗಿ ಕಾಣುವ ಲಿಪ್‌ಸ್ಟಿಕ್ ಹಾಗೂ ಗ್ಲೋಸಿ ಲಿಪ್‌ಶೇಡ್‌ಗಳನ್ನು (korean glass skin) ಬಳಸಬಹುದು. ಹಾಗಾಗಿ ಈ ರಾಷ್ಟ್ರದಲ್ಲಿ ಬಹಳಷ್ಟು ಖ್ಯಾತಿಗಳಿಸಿದ ಲಿಪ್ ಹಾಗೂ ಬ್ಯೂಟಿ ಬ್ರಾಂಡ್‌ಗಳು ಇನ್ನೂ ಎಂಟ್ರಿ ಕೊಡಲು ಸಾಧ್ಯವಾಗಿಲ್ಲ.
ಮೇಕಪ್ ಪರಿಶೀಲನೆಗೂ ಚೆಕ್ಕಿಂಗ್
ರಸ್ತೆಯಲ್ಲಿ ಓಡಾಡುವ ಮಹಿಳೆಯರು, ಹುಡುಗಿಯರು ಹಾಗೂ ನಾನಾ ಕಡೆ ಕಾರ್ಯ ನಿರ್ವಹಿಸುವ ಮಹಿಳೆಯರು ಕೂಡ ಲೌಡ್ ಅಂದರೇ ಎದ್ದು ಕಾಣುವ ಮೇಕಪ್ ಮಾಡುವಂತಿಲ್ಲ. ಇದನ್ನು ಪರಿಶೀಲಿಸಲು ವುಮೆನ್ ತಂಡವು ಕಾರ್ಯನಿರ್ವಹಿಸುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ನಿಜ.
ವೈಬ್ರೆಂಟ್ ಹೇರ್ ಕಲರ್ ಮಾಡುವಂತಿಲ್ಲ
ಅಷ್ಟೇಕೇ! ವೈಬ್ರೆಂಟ್ ಹೇರ್ ಕಲರ್‌ಗಳನ್ನು (vibrant hair color) ಡೈ ಮಾಡುವಂತಿಲ್ಲ. ಇದು ಸರಕಾರದ ವಿರುದ್ಧ ಮಾಡುತ್ತಿರುವ ಸಂಚು ಎಂದು ಪರಿಗಣಿಸಲಾಗುತ್ತದಂತೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Calender launch | ಬಿಡುಗಡೆಯಾಯ್ತು ಮಿಸೆಸ್ ಇಂಡಿಯಾ ಕರ್ನಾಟಕ ಟೀಮ್‌ನ ಗ್ಲಾಮರಸ್ ಕ್ಯಾಲೆಂಡರ್