ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆನ್‌ಲೈನ್ ಸೀರೆ ಲೋಕದಲ್ಲಿ ಇದೀಗ 1 ಮಿನಿಟ್ ಸೀರೆಗಳು (One Minute Saree Trend) ಹಂಗಾಮ ಎಬ್ಬಿಸುತ್ತಿವೆ. ಬೇಕಾದಾಗಲೆಲ್ಲಾ ಧಿಡೀರ್ ಎಂದು ಉಡಬಹುದಾದ ಈ ಸೀರೆಗಳು ಯುವತಿರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ಸೀರೆಗಳ ಲೋಕದಲ್ಲಿ, ನಾನಾ ಬಗೆಯ ವೆರೈಟಿ 1 ಮಿನಿಟ್ ಸೀರೆಗಳು ಬಿಡುಗಡೆಗೊಂಡಿವೆ. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತಿರುವ ಇವು ಆಯಾ ಫ್ಯಾಬ್ರಿಕ್ ಹಾಗೂ ಸೀರೆಯ ಕ್ವಾಲಿಟಿಗೆ ತಕ್ಕಂತೆ ಬೆಲೆಯನ್ನು ಹೊಂದಿವೆ.
ರೆಡಿ ಸೀರೆಗೆ ಮತ್ತೊಂದು ಹೆಸರು 1 ಮಿನಟ್ ಸೀರೆ
ಅಂದಹಾಗೆ, ಈ ಮೊದಲು ರೆಡಿ ಸೀರೆಗಳೆಂದು ಕರೆಯಲ್ಪಡುತ್ತಿದ್ದ, ಸೀರೆಗಳೇ ಇಂದಿನ 1 ಮಿನಿಟ್ ಸೀರೆಗಳು. ಕಾಲಕ್ಕೆ ತಕ್ಕಂತೆ ಹೆಸರು ಬದಲಾಯಿಸಿಕೊಂಡಿವೆ ಅಷ್ಟೇ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರೇಷ್ಮಾ, ಅವರ ಪ್ರಕಾರ, ಈ ರೆಡಿ ಸೀರೆ ಕಾನ್ಸೆಪ್ಟ್ ಅತಿ ಅಪರೂಪವಾಗಿ ಉಡುವ ಯುವತಿಯರು ಹಾಗೂ ಮಹಿಳೆಯರಿಗೆಂದೇ ಸೃಷ್ಟಿಸಲಾಗಿತ್ತು. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಬಗೆಯ ಸೀರೆಗಳನ್ನು ಆನ್‌ಲೈನ್ ಸೀರೆ ಶಾಪ್‌ಗಳು ಪರಿಚಯಿಚಯಿಸಿದ್ದವು. ಇದೀಗ ಈ ಕಾನ್ಸೆಪ್ಟ್‌ನ ಮುಂದುವರಿದ ಭಾಗದಂತೆ ಜೆನ್ ಜಿ ಹಾಗೂ ಕಾಲೇಜು ಹುಡುಗಿಯರನ್ನು ಗಮನದಲ್ಲಿಟ್ಟುಕೊಂಡು ಅವರವರ ಅಭಿರುಚಿಗೆ ತಕ್ಕಂತೆ 1 ಮಿನಟ್ ಸೀರೆಗಳ ಆಯ್ಕೆ ಮಾಡಿ, ಸಿದ್ಧಪಡಿಸಿ ಮಾರಾಟಮಾಡಲಾಗುತ್ತಿದೆ ಎನ್ನುತ್ತಾರೆ.
ರೆಡಿ ಸೀರೆಗಳ ಕಸ್ಟಮೈಸ್ ಕಾರ್ಯ
ಕೆಲವರು , ತೆಳ್ಳಗಿರುತ್ತಾರೆ, ದಪ್ಪನಾಗಿರುತ್ತಾರೆ. ಒಬ್ಬೊಬ್ಬರದು ಒಂದೊಂದು ಬಗೆಯ ಬಾಡಿ ಟೈಪ್ ಇರುತ್ತದೆ. ಅಂತಹವರು ಆನ್ಲೈನ್ ಜಾಹೀರಾತಿನಲ್ಲಿ ತೋರಿಸುವ ತೆಳ್ಳಗಿರುವ ಹುಡುಗಿ ಉಡುವ ಸೀರೆಯನ್ನು ಉಡುವುದಾದರೂ ಹೇಗೆ ಎಂದು ಯೋಚಿಸಿದಲ್ಲಿ, ಅದಕ್ಕೂ ಯೋಚನೆ ಬೇಡ, ಸೇಮ್ ಟು ಸೇಮ್ ಸೀರೆಯನ್ನು ನಮಗೆ ಬೇಕಾದ ಹಾಗೆ ರೆಡಿ ಮಾಡಿಬಹುದು. ಕಸ್ಟಮೈಸ್ ಮಾಡಿಸಬಹುದು ಎನ್ನುತ್ತಾರೆ. ಇದಕ್ಕಾಗಿ ಯಾವುದೇ ಹುಡುಗಿ ಅಥವಾ ಮಹಿಳೆಯ ಸೊಂಟದ ಅಳತೆಯನ್ನು ತೆಗೆದುಕೊಳ್ಳಲಾಗುತ್ತದೆ. ನಂತರ ಅವರ ಸೊಂಟದ ಸುತ್ತಳತೆಗೆ ತಕ್ಕಂತೆ ರೆಡಿ ಸೀರೆ ಸಿದ್ಧಪಡಿಸಲಾಗುತ್ತದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.
1 ಮಿನಿಟ್ ಸೀರೆ ಖರೀದಿಸುವ ಮುನ್ನ ಗಮನದಲ್ಲಿಡಿ
- ಸೀರೆಯ ಫ್ಯಾಬ್ರಿಕ್ ಹಾಗೂ ದರವನ್ನು ತಿಳಿದುಕೊಳ್ಳಿ.
- ನಿಮ್ಮ ಸೊಂಟದ ಅಳತೆಗೆ ತಕ್ಕಂತೆ ಕಸ್ಟಮೈಸ್ ಮಾಡಿಸಿ.
- ಜಾಹೀರಾತು ನೋಡಿ ಮರುಳಾಗಬೇಡಿ.
- ರಿಟರ್ನ್ ಪಾಲಿಸಿ ಬಗ್ಗೆಯೂ ತಿಳಿದಿರಲಿ.
- ಆನ್ಲೈನ್ನಲ್ಲಿಯೂ ನೋಡುವ ಸೀರೆ ಕೈಗೆ ಸಿಕ್ಕಾಗ ಬೇರೆ ರೀತಿ ಇರುವ ಸಾಧ್ಯತೆಗಳಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Guru Desi Style: ಯೂನಿಕ್ ದೇಸಿ ಸ್ಟೈಲ್‌ನಲ್ಲಿ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ