ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ವಾ, ಪರ್ಪಲ್, ಶೈನಿಂಗ್ ಕ್ರೀಮ್, ಬ್ಲೀಚ್ ಬ್ಲ್ಯೂ …ಇವೆಲ್ಲಾ ಇದೀಗ ಆನ್‌ಲೈನ್‌ನಲ್ಲಿ ಟ್ರೆಂಡಿಯಾಗಿ ಹರಿದಾಡುತ್ತಿರುವ ಹೇರ್ ಕಲರ್‌ಗಳ ಸ್ಯಾಂಪಲ್. ಹೌದು, ಊಹೆಗೂ ಮೀರಿದ ವೆರೈಟಿ ಹೇರ್ ಕಲರ್‌ನ್ನೊಳಗೊಂಡ ಫೋಟೋಗಳು ಈ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಬ್ಯೂಟಿ ಬ್ಲಾಗರ್ಸ್ ಗಳ ಪ್ರಕಾರ: ತಿಂಗಳಿಗೊಮ್ಮೆ ಹೇರ್ ಕಲರ್ಸ್‌ನ ಟ್ರೆಂಡ್‌ನಲ್ಲಿ ಬದಲಾವಣೆಯಾಗುತ್ತಿರುತ್ತದೆ. ಇದು ಆಯಾ ರಾಷ್ಟ್ರಗಳಿಗೆ ಸೂಟ್ ಆಗುವಂತೆ ನಂತರ ಬದಲಾಗಿ ಕಲರ್ಸ್ ಹಾಗೂ ಶೇಡ್‌ಗಳು ಸಲೂನ್‌ಗಳಲ್ಲಿ ಬಿಡುಗಡೆಗೊಳ್ಳುತ್ತವೆ.
ಒಂದಕ್ಕಿಂತ ಒಂದು ವಿಭಿನ್ನ ಶೇಡ್‌ಗಳ ಊಹೆಗೂ ಮೀರಿದ ಹೇರ್ ಶೇಡ್‌ಗಳು, ಹೇರ್ ಸ್ಟ್ರೀಕ್ಸ್‌ನ ಝಲಕ್ ಇರುವಂತಹ ಮಾಡೆಲ್‌ಗಳ ಊಹೆಗೂ ಮೀರಿದ ಕಲರ್ ಕಾಂಬಿನೇಷನ್‌ಗಳು ಬ್ಯೂಟಿ ಪ್ರಿಯರ ಹುಬ್ಬೇರಿಸಿವೆ.
ಕಲ್ಪನೆಗೂ ಮೀರಿದ ಶೇಡ್ಸ್
ಪಾಶ್ವಿಮಾತ್ಯ ಶೈಲಿಯ ಅಕ್ವಾ ಶೇಡ್‌ಗಳು ಇಂಟರ್‌ನ್ಯಾಷನಲ್ ಬ್ಯೂಟಿ ಬ್ಲಾಗ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಸದ್ಯಕ್ಕೆ ಅಂತರಾಷ್ಟ್ರೀಯ ರ್ಯಾಂಪ್‌ಗಳಿಗೆ ಮಾತ್ರ ಸೀಮಿತವಾಗಿವೆ. ಇನ್ನು ಆರ್ಟಿಫಿಶಿಯಲ್ ಹೇರ್ ಕಲರ್‌ಗಳು ಊಹೆಗೂ ಮೀರಿದ ಮಿಕ್ಸ್ ಮ್ಯಾಚ್ ಶೇಡ್ಸ್ನಲ್ಲಿ ಕಂಡು ಬರುತ್ತಿವೆ.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇರ್ ಕಲರ್‌ನ ಟ್ರೆಂಡಿ ಫೋಟೋಗಳು ಹರಿದಾಡಿದಾಗಲೇ ಇವುಗಳಿಗೆ ಮಾರುಕಟ್ಟೆ ಕಲ್ಪಿಸಲು ಸಾಧ್ಯವಾಗುವುದು. ಹಾಗಾಗಿ ಬ್ರಾಂಡೆಡ್ ಹೇರ್ ಕಲರಿಂಗ್ ಕಂಪನಿಗಳು ತಮ್ಮದೇ ಆದ ಮಾಡೆಲ್‌ಗಳನ್ನು ಈ ಶೇಡ್ಸ್‌ನಲ್ಲಿ ಕಾಣಿಸುವ ಮಾಡೆಲ್‌ಗಳನ್ನು ಬಳಸಿಕೊಂಡು ಚಿತ್ರ-ವಿಚಿತ್ರ ಹೇರ್ ಕಲರ್‌ಗಳ ಅನಾವರಣ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಾರೆ. ಇದು ಸಾಮಾನ್ಯ ಎನ್ನುತ್ತಾರೆ’ ಹೇರ್‌ಸ್ಟೈಲಿಸ್ಟ್ ರೋಸಿ.
ಅವರ ಪ್ರಕಾರ: ಇಂತಹ ಟ್ರೆಂಡ್‌ಗಳು(Beauty Trend) ನಮ್ಮತನಕ್ಕೆ ಸೂಟ್ ಆಗುವುದು ಕಡಿಮೆ. ಇವು ನೋಡಲು ಮಾತ್ರ ಆಕರ್ಷಣೀಯ ಎನಿಸುತ್ತವೆ. ಎಲ್ಲವನ್ನೂ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಂದುವಂತದ್ದನ್ನು ಮಾತ್ರ ಸ್ವಾಗತಿಸಲು ಸಾಧ್ಯವಾಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Season Trend: ವೈವಿಧ್ಯಮಯ ವಿನ್ಯಾಸಗಳಲ್ಲಿ ಬಂತು ಬೆಲ್ಟ್ ಡ್ರೆಸ್
………