Site icon Vistara News

Online Trend: ಬ್ಯೂಟಿಪ್ರಿಯರ ಹುಬ್ಬೇರಿಸಿದ ಗಾರ್ಡನ್‌ ಐಬ್ರೋ!

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗಾರ್ಡನ್‌ ಐಬ್ರೋ ಕಾನ್ಸೆಪ್ಟ್‌ ಆನ್‌ಲೈನ್‌ ಬ್ಯೂಟಿ ಟ್ರೆಂಡ್‌ನಲ್ಲಿ ಹರಿದಾಡುತ್ತಿದೆ. ವಿಯರ್ಡ್‌ ಬ್ಯೂಟಿ ಟ್ರೆಂಡ್‌ಗೆ ಸೇರುವ ಈ ಗಾರ್ಡನ್‌ ಐಬ್ರೋ ಕಾನ್ಸೆಪ್ಟ್‌ ಸದ್ಯಕ್ಕೆ ಬ್ಯೂಟಿ ಬ್ಲಾಗರ್ಸ್‌-ವ್ಲಾಗರ್ಸ್ ಗಳ ಕೈಗಳಲ್ಲಿ ನಾನಾ ರೂಪ ಪಡೆಯುತ್ತಿದೆ.

ಏನಿದು ಗಾರ್ಡನ್‌ ಐಬ್ರೋ?

ಐಬ್ರೋಗಳನ್ನು ಮೈಕ್ರೋ ಹೂದೋಟದಂತೆ ಬಿಂಬಿಸುವುದೇ ಗಾರ್ಡನ್‌ ಐಬ್ರೋ ಕಾನ್ಸೆಪ್ಟ್. ಮೊದಲೆಲ್ಲಾ ಟ್ರಾಪಿಕಲ್‌ ಇಲ್ಲವೇ ಫಾರೆಸ್ಟ್‌ ಕಾನ್ಸೆಪ್ಟ್‌ಗೆ ಸಂಬಂಧಪಟ್ಟ ಅಂತರಾಷ್ಟ್ರೀಯ ಮಟ್ಟದ ರ್ಯಾಂಪ್‌ ವಾಕ್‌ಗಳಲ್ಲಿ ಈ ರೀತಿ ಐಬ್ರೋಗಳಿಗೆ ಮೇಕಪ್‌ ಮಾಡಲಾಗುತ್ತಿತ್ತು. ಥೀಮ್‌ಗೆ ಸೂಟ್‌ ಆಗುವಂತೆ ತಿದ್ದಿ ತೀಡಲಾಗುತ್ತಿತ್ತು. ಪ್ಯಾರೀಸ್‌, ಮಿಲಾನ್‌ ಹಾಗೂ ನ್ಯೂಯಾರ್ಕ್ ಫ್ಯಾಷನ್‌ ಶೋಗಳಲ್ಲಿ ಇದು ಕಾಮನ್‌ ಕೂಡ ಆಗಿತ್ತು. ಇದನ್ನು ನೋಡಿ ಬೆರಗಾದ ಬ್ಯೂಟಿ ಪ್ರೇಮಿಗಳು ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಾಗೂ ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಗಾರ್ಡನ್‌ ಐಬ್ರೋ ಕಾನ್ಸೆಪ್ಟ್‌ ಅನ್ನು ಪ್ರಯೋಗಿಸತೊಡಗಿದ್ದಾರೆ. ಒಂದಕ್ಕಿಂತ ಒಂದನ್ನು ವಿಭಿನ್ನವಾಗಿ ಬಿಂಬಿಸತೊಡಗಿದ್ದಾರೆ.

ನಾನ್ ವೇರಬಲ್‌ ಬ್ಯೂಟಿ ಟ್ರೆಂಡ್‌

ಈ ಕಾನ್ಸೆಪ್ಟ್‌ ಏನಿದ್ದರೂ ರ್ಯಾಂಪ್‌ ಹಾಗೂ ಬ್ಯೂಟಿ ಫೋಟೋಶೂಟ್‌ಗಾಗಿ ಮಾತ್ರ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಯಾಕೆಂದರೆ, ಈ ಐಬ್ರೋ ಕಾನ್ಸೆಪ್ಟನ್ನು ಸಾಮಾನ್ಯರು ಅಳವಡಿಸಿಕೊಳ್ಳುವುದು ಕಷ್ಟವೇ ಸರಿ. ಥೀಮ್‌ ಆಧಾರಿತ ಇದ್ದಾಗ ಇವನ್ನು ಫೋಟೋಶೂಟ್‌ಗಾಗಿ ಅಳವಡಿಸಿಕೊಳ್ಳಬಹುದು. ಹಾಗಾಗಿ ಇದನ್ನು ನಾನ್‌ ವೇರಬಲ್‌ ಬ್ಯೂಟಿ ಟ್ರೆಂಡ್‌ಗೆ ಸೇರಿಸಲಾಗಿದೆ ಎನ್ನುತ್ತಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಟ್ಯುಟೋರಿಯಲ್‌

ಸೋಷಿಯಲ್‌ ಮೀಡಿಯಾದ ಬ್ಯೂಟಿ ವ್ಲಾಗರ್‌ಗಳು ಈ ಬಗ್ಗೆ ಟ್ಯೂಷನ್‌ ನೀಡುವ ರೀಲ್ಸ್‌ ಹಾಗೂ ವಿಡಿಯೋ ಕ್ಲಿಪ್‌ಗಳನ್ನು ಹರಿಬಿಡುತ್ತಿದ್ದಾರೆ. ಹಾಗಾಗಿ ಇದು ಜಾಗತೀಕ ಮಟ್ಟದ ಬ್ಯೂಟಿ ಟ್ರೆಂಡ್‌ ಲಿಸ್ಟ್‌ನಲ್ಲಿ ಸೌಂದರ್ಯ ಪ್ರೇಮಿಗಳನ್ನು ಸೆಳೆಯುತ್ತಿದೆ. ಪ್ರಯೋಗಿಸಲು ಉತ್ತೇಜಿಸುತ್ತಿದೆ. ಅಂದಹಾಗೆ, ಯೂಟ್ಯೂಬರ್‌ ಫರಿನಾ ಈ ಗಾರ್ಡನ್‌ ಐಬ್ರೋ ಮೇಕಪ್‌ ಮಾಡಿ ಹರಿ ಬಿಟ್ಟ ವಿಡಿಯೋ ಕ್ಲಿಪ್‌ಗಳ ನಂತರ ಸಾಕಷ್ಟು ಬ್ಯೂಟಿ ಬ್ಲಾಗ್‌ರ್ಸ್ ಕೂಡ ಇದರತ್ತ ವಾಲಿ, ನಾನಾ ರೀತಿಯಲ್ಲಿ ಪ್ರಯೋಗ ಮಾಡಿದ್ದರು.

ನೀವೂ ಟ್ರೈ ಮಾಡಿ ನೋಡಿ

ನಿಮಗೆ ಬೇಕಾದ ಯಾವುದೇ ವರ್ಣದ ಲಿಪ್‌ಸ್ಟಿಕ್‌ ಅಥವಾ ಯಾವುದೇ ಲಿಪ್‌ ಕ್ರಯಾನ್‌ ಇಲ್ಲವೇ ಐ ಶ್ಯಾಡೋ ಬಣ್ಣವನ್ನು ಚಿಕ್ಕ ಬ್ರಶ್‌ನಿಂದ ಐಬ್ರೋಗೆ ಹಚ್ಚಿ, ನಂತರ ಮೈಕ್ರೋ ಫ್ಲವರ್‌ ಅಥವಾ ಎಲೆಯಂತವನ್ನು ಸ್ಟಿಕ್ಕರ್‌ ಅಥವಾ ಐ ಲ್ಯಾಶಸ್‌ ಗ್ಲ್ಯೂನಿಂದ ಪೊರ್ಸೆಪ್‌ ಸಹಾಯದಿಂದ ಅಂಟಿಸಿ. ತೆಗೆಯುವಾಗ ಮೇಕಪ್‌ ರಿಮೂವರ್‌ನಿಂದ ಹತ್ತಿ ಬಳಸಿ ತೆಗೆಯಬಹುದು ಎನ್ನುತ್ತಾರೆ ಮೇಕಪ್‌ ಆರ್ಟಿಸ್ಟ್‌ ರೋಮಿ.

ಇಲ್ಲಿದೆ ಗಾರ್ಡನ್‌ ಐಬ್ರೋ ಟಿಪ್ಸ್‌

( ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Beauty Care: ಹೀಗಿರಲಿ ಮೇಕಪ್‌ ಬ್ರಷ್‌ ನಿರ್ವಹಣೆ

Exit mobile version