Site icon Vistara News

Paris Fashion Week: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಬಾಲಿವುಡ್‌ ನಟಿ ಖುಷಿ ಕಪೂರ್‌

Paris Fashion Week

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿಷ್ಠಿತ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ (Paris Fashion Week) ಬಾಲಿವುಡ್‌ ನಟಿ ಖುಷಿ ಕಪೂರ್‌ ಪಾಲ್ಗೊಂಡಿದ್ದಾರೆ. ಜಾಗತೀಕ ಮಟ್ಟದಲ್ಲಿ ಅತ್ಯಂತ ಪ್ರತಿಷ್ಠಿತ ಎಂದೆನಿಸಿಕೊಂಡಿರುವ ಪ್ಯಾರಿಸ್‌ ಫ್ಯಾಷನ್‌ ವೀಕ್‌ನ ಈ ಸೀಸನ್‌ ಈಗಾಗಲೇ ಆರಂಭವಾಗಿದ್ದು ಅಕ್ಟೋಬರ್‌ 3ರವರೆಗೆ ಮುಂದುವರಿಯಲಿದೆ. ಈ ಸಾಲಿನಲ್ಲಿ ಇದು ಎರಡನೇ ಬಾರಿ ನಡೆಯುತ್ತಿದ್ದು, ಸಮ್ಮರ್‌ ಸ್ಪ್ರಿಂಗ್‌ 2024ರ ಸೀಸನ್‌ ಇದಾಗಿದೆ. ಎಂದಿನಂತೆ ನಾನಾ ಹಾಲಿವುಡ್‌ ತಾರೆಯರು ಹಾಜರಿದ್ದು, ಇವರೊಂದಿಗೆ ಬಾಲಿವುಡ್‌ನ ನಟಿ ಖುಷಿ ಕಪೂರ್‌ ಕೂಡ ಪಾಲ್ಗೊಂಡಿದ್ದಾರೆ.

ಫ್ಯಾಷನ್‌ ರಾಜಧಾನಿಯಲ್ಲಿ ಖುಷಿ ಕಪೂರ್‌

ಅಂದಹಾಗೆ, ನಟಿ ಖುಷಿ ಕಪೂರ್‌, ಡಿಯೋರ್‌ ಬ್ರಾಂಡನ್ನು ಪ್ರತಿನಿಧಿಸಿದ್ದಾರೆ. ಈ ಸೀಸನ್‌ನ ಆರಂಭದಲ್ಲೆ ಹಾಲಿವುಡ್‌ ತಾರೆಯರಾದ ಅನ್ಯಾ ಟಯ್ಲರ್‌, ಜಾಯ್‌, ಯಾರಾ ಶಹಿದಿ, ಚಾರ್ಲಿ ಟೆರೆನ್‌, ರಾಬರ್ಟ್ ಪಾಟಿನ್‌ಸನ್‌ ಹಾಗೂ ಎಮ್ಮಾ ಅವರು ಕೂಡ ಭಾಗವಹಿಸಿದರು. ಇನ್ನು, ರೆಡ್‌ ಕಾರ್ಪೆಟ್‌ನಲ್ಲಿ ಖ್ಯಾತ ಗಾಯಕರಾದ ರೋಸಾಲಿಯಾ ಮತ್ತು ಜೀಸು ಅವರೊಂದಿಗೆ ಖುಷಿ ಹೆಜ್ಜೆ ಹಾಕಿದರು.

ಫ್ಯಾಷನ್‌ ವೀಕ್‌ನಲ್ಲಿ ಖುಷಿ ಸ್ಟೈಲ್‌ ಸ್ಟೇಟ್‌ಮೆಂಟ್‌

ಮೊಟ್ಟ ಮೊದಲ ಬಾರಿಗೆ ಪ್ರತಿಷ್ಠಿತ ಫ್ಯಾಷನ್‌ ವೀಕ್‌ವೊಂದರಲ್ಲಿ ಫ್ಯಾಷನ್ ದಿವಾರಂತೆ ಕಾಣಿಸಿಕೊಂಡ ನಟಿ ಖುಷಿ ಕಪೂರ್‌, ಶ್ವೇತ ವರ್ಣದ ಡ್ರೆಸ್‌ ಹಾಗೂ ಡಿಯೋರ್‌ನ ಕ್ಯೂಟ್‌ ಮಿನಿ ಬ್ಯಾಗ್‌ ಹಿಡಿದು ತಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಿಂಬಿಸಿದರು. ಸ್ಟೈಲಿಶ್‌ ನಿಖಿಲ್‌ ಮಾನ್ಸತಾ ಅವರ ಸ್ಟೈಲಿಂಗ್‌ ಇವರಿಗಿತ್ತು. “ನನಗಂತೂ ಮೊದಲ ಬಾರಿಗೆ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಸಂತೋಷವಿದೆ. ಇದಕ್ಕಾಗಿ ನಾನು ಬಹಳಷ್ಟು ವರ್ಷಗಳಿಂದ ಕನಸು ಕಂಡಿದ್ದೆ. ಅದು ಇದೀಗ ಈಡೇರಿದೆ” ಎಂದು ಹೇಳಿಕೊಂಡಿರುವ ಖುಷಿ ಕಪೂರ್‌, ಭಾಗವಹಿಸುವ ಮುನ್ನ ಕ್ಲಿಕ್ಕಿಸಿದ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಡಿಸೈನರ್‌ಗಳ ಕಲೆಕ್ಷನ್ಸ್‌ ಪ್ರದರ್ಶನ

ಮೊದಲನೇ ದಿನವೇ ಪಿಯರ್‌ ಕಾಬರ್ವಿನ್‌, ವಾಕ್ವೆರಾ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಡಿಸೈನರ್‌ಗಳಾದ ಸೇಂಟ್‌ ಲ್ಯೂರೆಂಟ್‌, ಪೀಟರ್‌ ಡ್ಯೂ, ಕ್ರಿಶ್ಚಿಯನ್‌ ಡಿಯೋರ್‌ ಅವರ ಕಲೆಕ್ಷನ್‌ಗಳು ಅನಾವರಣಗೊಂಡಿವೆ. ಮುಂಬರುವ ಸಾಲಿನ ಅಂದರೆ 2024ರ ಸಮ್ಮರ್‌ ಸ್ಪ್ರಿಂಗ್‌ ರೆಡಿ ಟು ವೇರ್‌ ಡಿಸೈನರ್‌ಗಳು ಪ್ರಮುಖವಾಗಿ ಇಲ್ಲಿ ಪ್ರದರ್ಶನಗೊಂಡಿವೆ. ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸುತ್ತಿರುವ ಸುಮಾರು 107 ಬ್ರಾಂಡ್‌ಗಳಲ್ಲಿ 67 ರ‍್ಯಾಂಪ್‌ನಲ್ಲಿ ಮಾಡೆಲ್‌ಗಳನ್ನು ಸವಾರಿ ಮಾಡುವ ಮೂಲಕ ಪ್ರದರ್ಶನಗೊಳ್ಳುತ್ತಿವೆ. ಇನ್ನು ಎರಡನೇ ದಿನ ಡಿಯೋರ್‌, ಜರ್ಮನೈರ್‌ ಹಾಗೂ ಸೇಂಟ್‌ ಲ್ಯೂರೆಂಟ್‌ ಡಿಸೈನರ್‌ವೇರ್‌ಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: South India Fashion Week News: ಸೌತ್‌ ಇಂಡಿಯಾ ಫ್ಯಾಷನ್‌ ವೀಕ್‌ಗೆ ಡಾ. ಸಂಜಯ್‌ ನೀಲನ್‌ ಚೇರಿ ಕೊರಿಯಾಗ್ರಫಿ

Exit mobile version