ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ನಲ್ಲಿ ಆರಂಭಗೊಂದ ಈ ಬಾರಿಯ ಹಾಟ್ ಕೌಚರ್ ವೀಕ್‌ನಲ್ಲಿ (Paris Haute Couture Week) ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವು. ಮುಂಬರುವ ಸೀಸನ್‌ನ ಡಿಸೈನರ್‌ವೇರ್‌ಗಳ ಜೊತೆಗೆ ನಾನ್‌ವೇರಬಲ್ ಫ್ಯಾಷನ್‌ವೇರ್‌ಗಳು ಪ್ರದರ್ಶನಗೊಂಡು ಫ್ಯಾಷನ್‌ಪ್ರಿಯರ ಹುಬ್ಬೇರಿಸಿದವು.
ಭಾರತೀಯ ರಾಹುಲ್ ಮಿಶ್ರಾ ಡಿಸೈನರ್‌ವೇರ್ಸ್
ಈ ತಿಂಗಳ ಆರಂಭದಲ್ಲೆ ನಡೆದ ಈ ಫ್ಯಾಷನ್ ವೀಕ್‌ನಲ್ಲಿ ಭಾರತೀಯ ಡಿಸೈನರ್ ರಾಹುಲ್ ಮಿಶ್ರಾ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವು. “ವೀ ದ ಪೀಪಲ್” ಹೆಸರಿನ ಟೈಟಲ್‌ನಲ್ಲಿ ರಾಹುಲ್ ತಮ್ಮ ಕಲೆಕ್ಷನ್‌ಗಳನ್ನು ಬಿಡುಗಡೆಗೊಳಿಸಿದರು. ಎಂದಿನಂತೆ ಇಂಡಿಯನ್ ಡಿಸೈನರ್‌ನ ಡಿಸೈನರ್‌ವೇರ್‌ಗಳು ಹೊರ ರಾಷ್ಟ್ರದವರ ಡಿಸೈನ್‌ಗಿಂತ ಭಿನ್ನವಾಗಿದ್ದವು. ಎಷ್ಟೇ ಮಾಡರ್ನೈಸ್ ಆಗಿದ್ದರೂ ಕೂಡ ಇತರೇ ಡಿಸೈನರ್‌ವೇರ್‌ಗಳ ಮಧ್ಯೆ ತಮ್ಮ ಸ್ಥಾನ ಉಳಿಸಿಕೊಂಡವು ಎಂದು ಫ್ಯಾಷನಿಸ್ಟ್ ರಿಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆಲವರು, ಪ್ಯಾರಿಸ್‌ನಲ್ಲಿ ನಡೆಯುವ ಫ್ಯಾಷನ್ ಶೋಗಳೆಲ್ಲಾ ಫ್ಯಾಷನ್ ವೀಕ್ ಎಂದು ಅಂದುಕೊಂಡಿರುತ್ತಾರೆ. ಖಂಡಿತಾ ಅಲ್ಲ, ಪ್ಯಾರಿಸ್ ಹಾಟ್ ಕೌಚರ್ ಫ್ಯಾಷನ್ ವೀಕೇ ಬೇರೇ! ಕಾನ್ಸೆಪ್ಟ್ ಕೂಡ ಬೇರೇ ಎನ್ನುತ್ತಾರೆ ಸ್ಟೈಲಿಸ್ಟ್ ನಿಯತಿ.
ಅಚ್ಚರಿ ಮೂಡಿಸಿದ ಫ್ಯಾಷನ್‌ವೇರ್‌ಗಳು
ಡಿಸೈನರ್ ಡ್ಯಾನಿಯಲ್ ರೋಸ್‌ಬೆರ್ರಿಯವರ ಸ್ಕೈಪೆರಲಿಸ್ಟ್ ವುಮೆನ್ ವೇರ್‌ಗಳೊಂದಿಗೆ ಆರಂಭಗೊಂಡ ಈ ಫ್ಯಾಷನ್ ವೀಕ್‌ನಲ್ಲಿ ಮಹಿಳೆಯರ ಡಿಸೈನರ್‌ವೇರ್‌ಗಳನ್ನು ಹೈಲೈಟ್ ಮಾಡಲಾಯಿತು. ನಾನ್ ರಿಯಲಾಸ್ಟಿಕ್ ಉಡುಪುಗಳು ಪ್ರದರ್ಶನಗೊಂಡು ಅಚ್ಚರಿ ಮೂಡಿಸಿದವು.
ಥಾಮ್ ಬ್ರೌನ್ಸ್ ಲೆಬೆಲ್‌ನ ಉಡುಪುಗಳು ಕೂಡ ಹೊಸತನವನ್ನು ಮೈಗೂಡಿಸಿಕೊಂಡು ವಿಭಿನ್ನವಾಗಿ ಪ್ರದರ್ಶನಗೊಂಡವು. ಇದು ಈ ಲೆಬೆಲ್‌ನ 20ನೇ ವಾರ್ಷಿಕೋತ್ಸವವಾಗಿತ್ತು. ಆದರೆ, ಮೊತ್ತ ಮೊದಲ ಬಾರಿಗೆ ಈ ಶೋನಲ್ಲಿ ಭಾಗವಹಿಸಿತ್ತು. ಇನ್ನು ಕ್ರಿಶ್ಚಿಯನ್ ಡಿಯೊರ್ ಲೆಬೆಲ್‌ನ ಡಿಸೈನರ್‌ವೇರ್‌ಗಳು ಗ್ರೀಸ್-ರೋಮನ್ ದೇವತೆಗಳ ಡಿಸೈನರ್‌ವೇರ್‌ಗಳಿಂದ ಸ್ಪೂರ್ತಿ ಪಡೆದಂತೆ ಕಾಣುತ್ತಿತ್ತು. ಐರೀಸ್ ವ್ಯಾನ್ ಹೆರ್ಪನ್ ಲೆಬೆಲ್‌ನ ಫ್ಯಾಷನ್‌ವೇರ್‌ಗಳು ಬಯೋನಿಕ್ ಡಿಸೈನ್‌ಗಳನ್ನೊಳಗೊಂಡಿತ್ತು. ಮೊದಲ ದಿನವೇ ಫ್ಯಾಷನ್ ವೀಕ್ ಸಾಕಷ್ಟು ಥಳಕು-ಬಳುಕಿನ ಮಾಡೆಲ್‌ಗಳನ್ನು ಡಿಫರೆಂಟಾಗಿ ಅಲಂಕರಿಸಿತ್ತು ಎಂದು ರಿವ್ಯೂ ನೀಡುತ್ತಾರೆ ಫ್ಯಾಷನಿಸ್ಟಾ ವಿದ್ಯಾ ವಿವೇಕ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festive Fashion: ಈದ್ ಸಂಭ್ರಮಕ್ಕೆ ಜತೆಯಾದ 3 ಜಗಮಗಿಸುವ ಡಿಸೈನರ್‌ವೇರ್ಸ್