ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾರ್ಟಿವೇರ್ ಫ್ಯಾಷನ್‌ನಲ್ಲಿ (Partywear fashion) ಇದೀಗ ಬ್ಯಾಕ್‌ಲೆಸ್ ಗೌನ್‌ಗಳದ್ದೇ ಕಾರುಬಾರು. ನೋಡಲು ಬಿಂದಾಸ್ ಲುಕ್ ನೀಡುವ ಇವು ಗ್ಲಾಮರಸ್ ಫ್ಯಾಷನ್‌ಗೆ ಸಾಥ್ ನೀಡುತ್ತಿದ್ದು, ಬಿಂದಾಸ್ ಯುವತಿಯರ ಫೇವರೆಟ್ ಲಿಸ್ಟ್‌ಗೆ ಸೇರಿವೆ.
ಬಗೆಬಗೆಯ ಬ್ಯಾಕ್‌ಲೆಸ್ ಪಾರ್ಟಿವೇರ್ ಗೌನ್ಸ್
ಪಾರ್ಟಿವೇರ್‌ಗಳಲ್ಲಿ ನಾನಾ ಬಗೆಯ ಗೌನ್‌ಗಳಿದ್ದು, ಅವುಗಳಲ್ಲಿ ಇದೀಗ ಸ್ಟ್ರಾಪ್ ಟೈಯಿಂಗ್ ಬ್ಯಾಕ್‌ಲೆಸ್ ಗೌನ್, ಬ್ಯಾಕ್ ಕಟೌಟ್ ಡಿಸೈನ್ ಗೌನ್, ಹಾಲ್ಟರ್ ಬ್ಯಾಕ್ಲೆಸ್ ಗೌನ್, ಟ್ವಿಸ್ಟೆಡ್ ಬ್ಲೌಸ್ ಶೈಲಿಯಲ್ಲಿ ಬ್ಯಾಕ್‌ಲೆಸ್ ಗೌನ್, ಬ್ಯಾಕ್‌ಲೆಸ್ ಫ್ರಾಕ್ ಹಾಗೂ ಮ್ಯಾಕ್ಸಿ ಶೈಲಿಯವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಸೆಲೆಬ್ರೆಟಿ ಲುಕ್‌ಗಾಗಿ ಸಿಕ್ವಿನ್ಸ್ ಬ್ಯಾಕ್‌ಲೆಸ್ ಗೌನ್ ಹಾಗೂ ವೆಲ್ವೆಟ್ ಲಾಂಗ್ ಸ್ಲಿಟ್ ಬ್ಯಾಕ್‌ಲೆಸ್ ಗೌನ್, ಮೆರ್ಮರೈಡ್ ಗೌನ್‌ಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಇದರೊಂದಿಗೆ ನಾನಾ ಬಗೆಯ ಬ್ಯಾಕ್‌ಸೈಡ್‌ನಲ್ಲಿ ಟೈಯಿಂಗ್ ಅಪ್ಷನ್ ಇರುವಂತಹ ಗೌನ್‌ಗಳು ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್. ಅವರ ಪ್ರಕಾರ, ಬ್ಯಾಕ್‌ಲೆಸ್ ಗೌನ್‌ಗಳು ಈ ಸೀಸನ್‌ನ ಬ್ರಂಚ್-ಲಂಚ್ ಪಾರ್ಟಿ ಮಾತ್ರವಲ್ಲ, ನೈಟ್ ಪಾರ್ಟಿ, ಬೀಚ್ ಪಾರ್ಟಿ ಸೇರಿದಂತೆ ನಾನಾ ಕಡೆ ಡ್ರೆಸ್‌ಕೋಡ್‌ಗಳಂತೆ ಜಾರಿಯಾಗಿವೆ ಎನ್ನುತ್ತಾರೆ.
ಸೆಲೆಬ್ರೆಟಿ ಲುಕ್‌ಗಾಗಿ ಮಿಂಚುವ ಬ್ಯಾಕ್‌ಲೆಸ್ ಗೌನ್
ಸೆಲೆಬ್ರೆಟಿ ಲುಕ್‌ಗಾಗಿ ಇದೀಗ ಸಿಕ್ವಿನ್ಸ್, ಶೈನಿಂಗ್ ಹಾಗೂ ಶಿಮ್ಮರಿಂಗ್ ಫ್ಯಾಬ್ರಿಕ್‌ನ ಮಿಂಚುವ ಬ್ಯಾಕ್‌ಲೆಸ್ ಗೌನ್‌ಗಳನ್ನು ಧರಿಸುವವರು ಹೆಚ್ಚಾಗಿದ್ದಾರೆ. ಇವು ಯುವತಿಯರನ್ನು ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್. ಅವರು ಹೇಳುವಂತೆ, ಇವು ನೈಟ್ ಪಾರ್ಟಿವೇರ್‌ಗೆ ಗ್ಲಾಮರಸ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಪರ್ಸನಾಲಿಟಿಗೆ ತಕ್ಕಂತಿರಲಿ ಬ್ಯಾಕ್‌ಲೆಸ್ ಗೌನ್
ಧರಿಸುವವರು ಮೊದಲು ತಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಬ್ಯಾಕ್‌ಲೆಸ್ ಗೌನ್ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಮುಜುಗರಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಎತ್ತರವಿರುವವರಿಗೆ ಯಾವುದೇ ಬಗೆಯ ಬ್ಯಾಕ್‌ಲೆಸ್ ಗೌನ್‌ಗಳು ಮ್ಯಾಚ್ ಆಗುತ್ತವೆ. ಅದೇ ಪ್ಲಂಪಿಯಾಗಿರುವವರು ಆದಷ್ಟೂ ಇಂತಹ ಗೌನ್‌ಗಳನ್ನು ಧರಿಸುವಾಗ ಎಚ್ಚರವಹಿಸಬೇಕು. ದೇಹದ ಭಾಗಗಳು ಎದ್ದು ಕಾಣಬಹುದು ಅಥವಾ ಅಗತ್ಯಕ್ಕಿಂತ ಹೆಚ್ಚು ದೇಹ ಅಂಗಾಗಗಳು ಎಕ್ಸ್‌ಪೋಸ್ ಆಗಬಹುದು. ಹಾಗಾಗಿ ಟ್ರಯಲ್ ನೋಡಿ ಎಲಿಗೆಂಟ್ ಲುಕ್ ನೀಡಿದಲ್ಲಿ ಮಾತ್ರ ಖರೀದಿಸಬಹುದು ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸೀಸನ್‌ನಲ್ಲಿ ಟ್ರೆಂಡಿಯಾದ ಬಣ್ಣಬಣ್ಣದ ಕಾಟನ್ ಸೀರೆಗಳು