ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಕ್ಯೂಟ್ ಎನಿಸುವ ಮನಮೋಹಕ ಪೆಟ್ ಅನಿಮಲ್‌ಗಳ ಸ್ಟೈಲಿಂಗ್ (Pet Animals Fashion) ಕಿಟ್ ಹಾಗೂ ಪೆಟ್ ಆಕ್ಸೆಸರೀಸ್ ಮಾರುಕಟ್ಟೆಗೆ ಆಗಮಿಸಿದ್ದು, ನಾಯಿ, ಬೆಕ್ಕು ಸೇರಿದಂತೆ ನಾನಾ ಬಗೆಯ ಪೆಟ್ ಅನಿಮಲ್‌ಗಳನ್ನು ಮುದ್ದುಮುದ್ದಾಗಿ ಬಿಂಬಿಸಲು ರೆಡಿಯಾಗಿವೆ.
ವೆರೈಟಿ ಕ್ಯೂಟ್ ಪೆಟ್‌ಆಕ್ಸೆಸರೀಸ್
ಶ್ವಾನಗಳು, ಬೆಕ್ಕಿನ ಮರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಸಿಂಗರಿಸಬಹುದಾದ ಕ್ಯೂಟ್ ಲುಕ್ ನೀಡುವ ಕತ್ತಿನ ಬೆಲ್ಟ್, ಬೆಲ್, ಡ್ರೆಸ್ ಸೇರಿದಂತೆ ಬಣ್ಣಬಣ್ಣದ ನಾನಾ ಬಗೆಯ ಸ್ಟೈಲಿಂಗ್ ಆಕ್ಸೆಸರೀಸ್ ಈಗಾಗಲೇ ಪೆಟ್ ಆಕ್ಸೆಸರೀಸ್ ದೊರೆಯುವ ಶಾಪ್‌ಗಳಲ್ಲಿ ಬಿಡುಗಡೆಗೊಂಡಿವೆ. ಕತ್ತಿಗೆ ಹಾಕುವ ಚಿಕ್ಕ ಆಕಷಕ ಬೆಲ್ಟ್‌ನಿಂದಿಡಿದು ತಲೆಯ ಮೇಲಿನ ಆಕರ್ಷಕ ಹೇರ್‌ಬೋಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಸಾಕು ಪ್ರಾಣಿಗಳನ್ನು ಬೆಚ್ಚಗಿಡುವ ಕಾರ್ಸೆಟ್, ಅಂಗಿಯಂತೆ ಕಾಣುವ ಶರ್ಟ್, ಕತ್ತನ್ನು ಸುತ್ತುವರೆದ ಸ್ಕಾರ್ಫ್, ಬೆಲ್ಟ್‌ಗಳು ಸೀಸನ್‌ಗೆ ಹೊಂದುವಂತೆ ವೆಲ್ಟೆಟ್, ಸಾಟೀನ್ ಹಾಗೂ ಕಾಟನ್‌ನಲ್ಲಿ ದೊರೆಯುತ್ತಿವೆ. ಕಲರ್‌ಫುಲ್ ಹೇರ್‌ಬೋ ಕ್ಲಿಪ್‌ಗಳು ಫರ್‌ಇರುವ ಸಾಕು ಪ್ರಾಣಿಗಳಿಗೆಂದೇ ಬಂದಿವೆ. ಇನ್ನು ಪಮೋರಿಯನ್ ಸೇರಿ ಕ್ಯೂಟ್ ಆಗಿರುವ ಮುದ್ದು ನಾಯಿ ಮರಿಗಳಿಗೆ ಸೂಟ್ ಆಗುವಂತಹ ನಾನಾ ವಿನ್ಯಾಸದ ಬೋಗಳು ಕೂಡ ಟ್ರೆಂಡಿಯಾಗಿವೆ. ಆನ್‌ಲೈನ್‌ನ ಪೆಟ್ ವೆಬ್‌ಸೈಟ್‌ಗಳಲ್ಲಿ ಆಕ್ಸೆಸರೀಸ್ ಊಹೆಗೂ ಮೀರಿದ ಡಿಸೈನ್‌ನಲ್ಲಿ ಲಭ್ಯವಿದೆ ಎನ್ನುತ್ತಾರೆ ಪೆಟ್ ಪ್ರೇಮಿಗಳು.
ನೇಮ್ ಪ್ಲೇಟ್ ಕಾಲರ್ ಆಕ್ಸೆಸರೀಸ್‌ಗೆ ಡಿಮ್ಯಾಂಡ್
ಡಾಗ್ ಬಂದಾನಾಸ್, ಕಾಲರ್ ಬಂದಾನಾಸ್, ವಿಂಟೇಜ್ ಬಂದಾನಾಸ್ ಇಂದು ಅತಿ ಹೆಚ್ಚು ಬೇಡಿಕೆಯಲ್ಲಿರುವ ಡಾಗ್ ಆಕ್ಸೆಸರೀಸ್. ಇನ್ನು ನೇಮ್ ಪ್ಲೇಟ್ ಇರುವ ಕಾಲರ್ ಬೆಲ್ಟ್‌ಗಳಿಗೂ ಇಂದಿಗೂ ಬೇಡಿಕೆ ಕುಂದಿಲ್ಲ. ಮೊದಲಿಗಿಂತ ಅತಿ ಹೆಚ್ಚು ಡಿಸೈನ್‌ಗಳಲ್ಲಿ ಲಭ್ಯವಿದೆ. ಶ್ವಾನಗಳ ಹಾಗೂ ಕ್ಯಾಟ್ ಪೆಂಡೆಂಟ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಲಭ್ಯ. ನೆಕ್‌ಸ್ಟ್ರಾಪ್, ಇನ್ಸೆಕ್ಟ್ ರಿಪಲೆಂಟ್‌ಸ್ಕಾರ್ಫ್ ಸೀಸನ್‌ಗೆ ಸೂಟ್ ಆಗುವಂತೆ ಬಿಡುಗಡೆಗೊಂಡಿವೆ ಎನ್ನುತ್ತಾರೆ ಪೆಟ್‌ಗ್ರೂಮಿಂಗ್ ಎಕ್ಸ್‌ಪರ್ಟ್ಸ್ ರಿಯಾ.
ಇದೀಗ ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಬಹುತೇಕ ಮಾಲ್‌ಗಳಲ್ಲೂ ಪೆಟ್ ಆಕ್ಸೆಸರೀಸ್ ಶಾಪಿಂಗ್ ಸೆಂಟರ್‌ಗಳಲ್ಲೂ ಲಭ್ಯವಿರುವುದರಿಂದ ಅತಿ ಹೆಚ್ಚು ಹುಡುಕಾಡುವ ಪ್ರಮೇಯವಿಲ್ಲ. ಅಷ್ಟೇ ಏಕೆ, ಸಾಕು ಪ್ರಾಣಿಗಳ ಪ್ರದರ್ಶನಗಳಲ್ಲೂ ಇವು ಲಭ್ಯ ಎನ್ನುತ್ತಾರೆ ಶ್ವಾನ ಪ್ರೇಮಿ ರಾಣಿ ಹಾಗೂ ರಂಜಿನಿ.
ಪೆಟ್ ಆಕ್ಸೆಸರೀಸ್ ಖರೀದಿಸುವಾಗ ಗಮನದಲ್ಲಿಡಿ
- ಹೆವಿ ಡಿಸೈನ್ನ ಪೆಟ್ ಆಕ್ಸೆಸರೀಸ್ ಖರೀದಿಸಬೇಡಿ.
- ಆದಷ್ಟೂ ಸೀಸನ್‌ಗೆ ಹೊಂದುವಂತಿರಲಿ.
- ಬೇಸಿಗೆಗೆ ತಕ್ಕಂತೆ ಲಭ್ಯವಿರುವ ಆಕ್ಸೆಸರೀಸ್‌ಗೆ ಆದ್ಯತೆ ನೀಡಿ.
- ನಿಮ್ಮ ಪೆಟ್ ಅನಿಮಲ್ನ ಆಕಾರಕ್ಕೆ ಮ್ಯಾಚ್ ಆಗುವಂತದ್ದನ್ನು ಕೊಳ್ಳಿ.
- ಸಾಕು ಪ್ರಾಣಿಗೆ ಅಲರ್ಜಿಯಾದಲ್ಲಿ ಹಾಕಬೇಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewellery Fashion: ಮದುವೆಯಲ್ಲಿ ಮದುಮಗಳ ಸೌಂದರ್ಯ ಹೆಚ್ಚಿಸುವ ಸೊಂಟಪಟ್ಟಿ