ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಮನೆಯ ಸಾಕು ಪ್ರಾಣಿಗಳಾದ ಶ್ವಾನಗಳು ಫ್ಯಾಷೆನಬಲ್ (Pets Fashion) ಆಗುತ್ತಿವೆ. ಹೌದು, ನಿಮ್ಮ ಮನೆಯ ಮುದ್ದು ಶ್ವಾನವನ್ನು ಮತ್ತಷ್ಟು ಕ್ಯೂಟ್ ಆಗಿ ಬಿಂಬಿಸುವ ಸಲುವಾಗಿ ಇದೀಗ ಪೆಟ್ ಶಾಪ್‌ಗಳಲ್ಲಿ ನಾನಾ ಬಗೆಯ ಫ್ಯಾಷೆನಬಲ್ ಆಕ್ಸೆಸರೀಸ್‌ಗಳು ಎಂಟ್ರಿ ನೀಡಿವೆ. ಅವುಗಳಲ್ಲಿ ಡಾಗ್ ಬಂದನಾ ಅಥವಾ ಸ್ಕಾರ್ಫ್, ಕಾಲರ್ ಬೆಲ್ಟ್ ಮತ್ತು ನೆಕ್ ಬೆಲ್ಟ್‌ಗಳು ಟ್ರೆಂಡಿಯಾಗಿವೆ. ನಾಯಿ ಮರಿಗಳಿಗೆ ಇವನ್ನು ಹಾಕಿದಾಗ ಕ್ಯೂಟ್ ಆಗಿ ಕಾಣುವ ಈ ಆಕ್ಸೆಸರೀಸ್‌ಗಳು ನಾನಾ ಡಿಸೈನ್ ಹಾಗೂ ಮೆಟಿರೀಯಲ್‌ನಲ್ಲಿ ದೊರೆಯುತ್ತಿವೆ.
ಕ್ಯೂಟ್ ಆಗಿ ಬಿಂಬಿಸುವ ಫ್ಯಾಷನ್ ಆಕ್ಸೆಸರೀಸ್
“ಮನೆಯ ಎಲ್ಲರ ನೆಚ್ಚಿನ ಮುದ್ದು ನಾಯಿ ಮರಿಗಳನ್ನು ಇದೀಗ ಸಿಂಗರಿಸುವುದು ಹೆಚ್ಚಾಗಿದೆ. ತಮ್ಮಂತೆ ಅವುಗಳನ್ನು ಅಲಂಕರಿಸುವ ರಿವಾಜು ಬೆಳೆಯುತ್ತಿದೆ. ಕೇವಲ ಸಾಕು ಪ್ರಾಣಿಯಾಗಿ ನೋಡದೇ ಮನೆಯ ಸದಸ್ಯರಂತೆ ಕಾಣುವುದು ಸಾಮಾನ್ಯವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ದೊಡ್ಡ ದೊಡ್ಡ ನಗರಗಳಲ್ಲಿ ಪೆಟ್ ಅನಿಮಲ್‌ಗಳಿಗೆ ಅಗತ್ಯವಿರುವ ಶಾಪ್‌ಗಳು ಹೆಚ್ಚಾಗುತ್ತಿವೆ. ಫುಡ್ ಜೊತೆಗೆ ಅವುಗಳನ್ನು ಮುದ್ದಾಗಿ ಕಾಣಿಸಬಲ್ಲ ಆಕ್ಸೆಸರೀಸ್‌ಗಳು ದೊರೆಯುತ್ತಿವೆ. ಇತ್ತೀಚೆಗಂತೂ ಯಂಗ್‌ಸ್ಟರ್ಸ್ ಇವುಗಳನ್ನು ಕೊಳ್ಳುವುದು ಸಾಮಾನ್ಯವಾಗಿದೆ” ಎನ್ನುತ್ತಾರೆ ಪೆಟ್ ಶಾಪ್‌ವೊಂದರ ಮ್ಯಾನೇಜರ್.
ಆನ್‌ಲೈನ್‌ನಲ್ಲಿ ಹೆಚ್ಚು
ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಡಿಸೈನ್‌ನ ಪೆಟ್ ಆಕ್ಸೆಸರೀಸ್‌ಗಳು ದೊರೆಯುತ್ತವೆ. ಅದರಲ್ಲೂ ಟ್ರೆಂಡಿ ಡಿಸೈನ್‌ನವು ಆಯಾ ಬ್ರೀಡ್‌ಗೆ ಮ್ಯಾಚ್ ಆಗುವಂತವು ಲಭ್ಯ ಎನ್ನುತ್ತಾರೆ ಪ್ರಾಣಿ ಪ್ರಿಯೆ ರೀಟಾ ಹಾಗೂ ರಿಯಾ.
ಡಾಗ್ ಬಂದನಾ
ಇನ್ನು ನಾಯಿ ಮರಿಗಳ ಕತ್ತಿಗೆ ಸ್ಕಾರ್ಫ್‌ನಂತೆ ಕಟ್ಟಬಹುದಾದಂತಹ ಡಾಗ್ ಬಂದನಾ ಲೆಕ್ಕಿವಲ್ಲದಷ್ಟು ಕಲರ್ ಹಾಗೂ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿವೆ. ಆಯಾ ಬ್ರೀಡ್‌ನ ಸೈಝ್‌ಗೆ ತಕ್ಕಂತೆ ವೆಲ್ಕ್ರಾನ್ ಹಾಗೂ ಬಟನ್ ಶೈಲಿಯಲ್ಲಿ ದೊರೆಯುತ್ತಿವೆ.
ಡಾಗ್ ನೇಮ್ ಪ್ಲೇಟ್ ಕಾಲರ್
ಇನ್ನು ಸಾಫ್ಟ್ ಮೆಟಿರಿಯಲ್ ಮಾತ್ರವಲ್ಲ, ರಫ್ ಫ್ಯಾಬ್ರಿಕ್‌ನಲ್ಲಿ ತಯಾರಾದ ಶ್ವಾನ ಮರಿಗಳ ಕತ್ತಿಗೆ ಹಾಕಬಹುದಾದ ನೇಮ್ ಪ್ಲೇಟ್ ಅಥವಾ ಲೈಸೆನ್ಸ್ ನಂಬರ್ ಇರುವಂತಹ ಡಾಗ್ ಕಾಲರ್‌ಗಳು ಕ್ಯೂಟ್ ಡಿಸೈನ್‌ನಲ್ಲಿ ಸಿಗುತ್ತಿವೆ.
ಆಕರ್ಷಕ ನೆಕ್ ಬೆಲ್ಟ್
ಇನ್ನು ಟ್ರಯಾಂಗಲರ್ ಅಥವಾ ನಾರ್ಮಲ್ ಡಿಸೈನ್‌ನ ವಾಕಿಂಗ್ ನೆಕ್ ಬೆಲ್ಟ್‌ಗಳು ನಾನಾ ಶೈಲಿಯಲ್ಲಿ ದೊರೆಯುತ್ತಿವೆ. ಅತಿ ಹೆಚ್ಚಾಗಿ ಮಾರಾಟವಾಗುವತ್ತಿರುವ ಆಕ್ಸೆಸರೀಸ್ ಇದು ಎನ್ನುತ್ತಾರೆ ಮಾರಾಟಗಾರರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Lakme Fashion Week: ಲ್ಯಾಕ್ಮೆ ಫ್ಯಾಷನ್ ವೀಕ್; ಏನು ಈ ಬಾರಿಯ ವಿಶೇಷ?