ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನ ಪೂಲ್‌ಸೈಟ್ ಪಾರ್ಟಿಗಳಲ್ಲಿ ಇದೀಗ 3 ಶೈಲಿಯ ವೆಸ್ಟರ್ನ್ ಗ್ಲಾಮರಸ್ ಔಟ್‌ಫಿಟ್‌ಗಳು (Poolside Party Fashion) ಟ್ರೆಂಡಿಯಾಗಿವೆ.
ಏನಿದು ಪೂಲ್‌ಸೈಡ್ ಪಾರ್ಟಿ ಡ್ರೆಸ್
ಬೇಸಿಗೆಯಲ್ಲಿ ಹೆಚ್ಚಾಗಿ ನಡೆಯುವ ಡೇ ಮತ್ತು ನೈಟ್ ಪೂಲ್‌ಸೈಡ್ ಪಾರ್ಟಿಗಳು ಇದೀಗ ಸಿನಿಮಾ ಹಾಗೂ ಫ್ಯಾಷನ್ ಕ್ಷೇತ್ರದವರು ಮಾತ್ರವಲ್ಲ, ಸಾಮಾನ್ಯ ಜನರನ್ನು ಆಕರ್ಷಿಸಿದೆ. ಮೊದಲೆಲ್ಲ ಹೈ ಪ್ರೊಫೈಲ್ ಹಾಗೂ ಕಾರ್ಪೊರೇಟ್ ಕ್ಷೇತ್ರದವರ ಕಾನ್ಸೆಪ್ಟ್ ಆಗಿದ್ದ ಈ ಪೂಲ್‌ಸೈಡ್ ಪಾರ್ಟಿಗಳು ಇದೀಗ ಬಾರ್ಡರ್ ದಾಟಿ, ಬರ್ತ್ ಡೇ ಪಾರ್ಟಿ, ಸಕ್ಸೆಸ್ ಪಾರ್ಟಿ ಹೀಗೆ ನಾನಾ ಹೆಸರಲ್ಲಿ ಸೇರಿಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ನಾನಾ ಬಗೆಯ ಡ್ರೆಸ್‌ಕೋಡ್‌ಗಳು ಈ ಪೂಲ್‌ಸೈಡ್ ಪಾರ್ಟಿಯಲ್ಲಿ ಟ್ರೆಂಡಿಯಾಗಿವೆ.
ಇನ್ನು, ಪ್ರಮುಖವಾಗಿ 2 ಬಗೆಯ ಪೂಲ್ ಪಾರ್ಟಿಗಳು ನಡೆಯುತ್ತವೆ. ಬೆಳಕಿರುವಾಗ ಹಾಗೂ ರಾತ್ರಿಯಾದ ನಂತರ ಕಾಕ್‌ಟೈಲ್ ಪಾರ್ಟಿಯೊಂದಿಗೆ ನಡೆಯುವುದು. ಆಯಾ ಪಾರ್ಟಿಗೆ ತಕ್ಕಂತೆ ಡ್ರೆಸ್‌ಕೋಡ್‌ಗಳು ಕೂಡ ನಿರ್ಧರಿತವಾಗುತ್ತವೆ. ಒಟ್ಟಾರೆ, ವೆಸ್ಟರ್ನ್ ಶೈಲಿಯ ಗ್ಲಾಮರಸ್ ಔಟ್‌ಫಿಟ್‌ಗಳು ಈ ಪಾರ್ಟಿಯ ಡ್ರೆಸ್‌ಕೋಡ್‌ಗಳಲ್ಲಿ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
ವೈಬ್ರೆಂಟ್ ರೆಸಾರ್ಟ್‌ವೇರ್
ಬೆಳಗ್ಗೆ ಸಮಯದಲ್ಲಿ ನಡೆಯುವ ಪೂಲ್ ಪಾರ್ಟಿಗಳಲ್ಲಿ ಇದೀಗ ರೆಸಾರ್ಟ್‌ವೇರ್ ಕೆಟಗರಿಯಲ್ಲಿ ಬರುವ ವೈಬ್ರೆಂಟ್ ವರ್ಣದ ಶಾರ್ಟ್ ಮ್ಯಾಕ್ಸಿ ಹಾಗೂ ಶೋಲ್ಡರ್‌ಲೆಸ್, ಸಿಂಗಲ್ ಶೋಲ್ಡರ್ ಬಾಡಿಕಾನ್ ಡ್ರೆಸ್‌ಗಳದ್ದೇ ಕಾರುಬಾರು. ಇನ್ನು ಲೈಮ್‌ಲೈಟ್‌ನಲ್ಲಿ ನಡೆಯುವಂತಕ್ಕೆ ಕೊಂಚ ಗ್ಲಿಟ್ಟರ್ ಹಾಗೂ ಶಿಮ್ಮರಿಂಗ್ ಇರುವಂತಹ ಆಫ್ ಶೋಲ್ಡರ್ ಗೌನ್, ಫ್ರಾಕ್, ಮ್ಯಾಕ್ಸಿಗಳು ಬೆಸ್ಟ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಟೌಟ್ ಮಿಡಿ-ಮಿನಿ ಡ್ರೆಸ್
ಪೂಲ್‌ಸೈಡ್ ಪಾರ್ಟಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಕಟೌಟ್ ಸ್ವಿಮ್‌ಸೂಟ್ ಫ್ರಾಕ್, ಮಿಡಿ-ಮಿನಿ ಡ್ರೆಸ್‌ಗಳು ನಾನಾ ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ನೋಡಲು ಹಾಟ್ ಲುಕ್ ನೀಡುವ ಇವು ಡೇ ಹಾಗೂ ನೈಟ್ ಎರಡೂ ಸಮಯದ ಪಾರ್ಟಿವೇರ್ ಡಿಸೈನ್‌ಗೂ ಹೊಂದುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಗಳು.
ಬ್ರಿತಬಲ್ ಶಾರ್ಟ್ ಡ್ರೆಸ್
ಪೂಲ್‌ಸೈಡ್ ಪಾರ್ಟಿಗೆ ಸಾಥ್ ನೀಡುವ ಶಾರ್ಟ್ ರಾಂಪರ್, ಸ್ಟ್ರಾಪ್, ಹಾಲ್ಟರ್ ನೆಕ್ ಶೈಲಿಯ ಶಾರ್ಟ್ ಡ್ರೆಸ್‌ಗಳು ನಾನಾ ಡಿಸೈನ್‌ಗಳಲ್ಲಿ ಲಗ್ಗೆ ಇಟ್ಟಿವೆ. ಇನ್ನು ಸ್ವಿಮ್ ಮಾಡುವಂತವರು ಹೊಸ ಶೈಲಿಯ ಫ್ರಾಕ್ ಸ್ವಿಮ್ ಸೂಟ್ ಧರಿಸಬಹುದು. ಇದಕ್ಕೆ ವೇಸ್ಟ್‌ಲೈನ್‌ನಲ್ಲಿ ಬಿಗ್ ಸ್ಕಾರ್ಫ್ ಕಟ್ಟಿ ಡಿಫರೆಂಟ್ ಲುಕ್ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion : ಸಮ್ಮರ್ ಫ್ಯಾಷನ್‌ನ ಗ್ಲಾಮರ್ ಲುಕ್‌ಗೆ ಕಾಲಿಟ್ಟ ಟೊರ್ನ್ ಶಾಟ್ರ್ಸ್