ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಥ್ನಿಕ್ ಲುಕ್ ನೀಡುವ ಪಫ್ ಹೇರ್‌ಸ್ಟೈಲ್ (Puff hairstyle trend ) ಇದೀಗ ಟ್ರೆಂಡಿಯಾಗಿದೆ. ಹೌದು. ಮೊದಲೆಲ್ಲಾ ಕ್ಯಾಶುವಲ್ ಔಟ್‌ಫಿಟ್‌ಗಳೊಂದಿಗೆ ಜೊತೆಯಾಗುತ್ತಿದ್ದ, ಪಫ್ ಹೇರ್ ಸ್ಟೈಲ್, ಇದೀಗ ಎಥ್ನಿಕ್ ಲುಕ್‌ಗೆ ಜೊತೆಯಾಗಿ, ಟ್ರೆಡಿಷನಲ್ ಲುಕ್ ನೀಡುತ್ತಿದೆ. ಈ ಸೀಸನ್‌ನ ಟ್ರೆಂಡಿ ಹೇರ್‌ಸ್ಟೈಲ್‌ನಲ್ಲಿ ಸೇರಿದೆ.
ಏನಿದು ಪಫ್ ಹೇರ್‌ಸ್ಟೈಲ್ ?
ಮುಂಭಾಗದ ಕೂದಲನ್ನು ನಮಗೆ ಬೇಕಾದ ಎತ್ತರಕ್ಕೆ ಏರಿಸಿ, ಸುರುಳಿ ಸುತ್ತಿ ಅಥವಾ ಆಕ್ಸೆಸರೀಸ್ ಬಳಸಿ ಪಫ್‌ನಂತೆ ಮಾಡಿ, ಕ್ಲಿಪ್ ಹಾಕುವುದು ಎನ್ನಬಹುದು. ಮುಂಭಾಗದ ಕೂದಲನ್ನು ಎಷ್ಟು ಭಾಗವಾದರೂ ಮಾಡಬಹುದು. ಮುಖದ ಅಂದ ಹೆಚ್ಚಿಸಲು ಹಾಗೂ ಕೊಂಚ ಎತ್ತರವಾಗಿ ಕಾಣಿಸಲು ಬಯಸುವ ಹುಡುಗಿಯರು ಈ ಹೇರ್ ಸ್ಟೈಲ್ ಮೊರೆ ಹೋಗುತ್ತಾರೆ.
ಪಫ್ ಹೇರ್‌ಸ್ಟೈಲ್ ಆಕ್ಸೆಸರೀಸ್ ಲಭ್ಯ
ಫ್ಯಾನ್ಸಿ ಶಾಪ್‌ಗಳಲ್ಲಿ ನಾನಾ ಆಕಾರದ ಪಫ್ ಹೇರ್‌ಸ್ಟೈಲ್ ಆಕ್ಸೆಸರೀಸ್‌ಗಳು ದೊರೆಯುತ್ತವೆ. ಒಂದಿಂಚಿನಿಂದಿಡಿದು ಅಂಗೈ ಅಗಲದವರೆಗೂ ಇವು ಸಿಗುತ್ತವೆ. ಅವರವರ ಕೂದಲಿನ ಅಳತೆಗೆ ತಕ್ಕಂತೆ ಬಳಸಬಹುದು ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.
ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್‌ನಲ್ಲಿ ಪಫ್ ಹೇರ್‌ಸ್ಟೈಲ್
ಟ್ರೆಡಿಷನಲ್ ಲುಕ್ ನೀಡುವ ಜಡೆ, ಬನ್ ಹೀಗೆ ನಾನಾ ಟ್ರೆಡಿಷನಲ್ ಲುಕ್ ನೀಡುವ ಹೇರ್ ಸ್ಟೈಲ್‌ನಲ್ಲಿ ಈ ಪಫ್ ಹೇರ್‌ಸ್ಟೈಲ್ ಸೇರಿಸಲಾಗುತ್ತದೆ. ಇದು ನೋಡಲು ಡಿಫರೆಂಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಟ್ರೈ ಮಾಡಿ ನೋಡಿ
ಸಿಂಪಲ್ ಆಗಿ ಪಫ್ ಹೇರ್‌ಸ್ಟೈಲ್ ಮಾಡಲು ಮುಂದಲೆಯಲ್ಲಿರುವ ಅರ್ಧ ಚಂದ್ರಾಕಾರದಲ್ಲಿ ಬರುವಂತೆ ಕೂದಲನ್ನು ಬಾಚಿ ಕೊಳ್ಳಿ. ಅದನ್ನು ಅರ್ಧ ಭಾಗದಿಂದ ಸುರಳಿಯಂತೆ ಸುತ್ತಿ. ಕೊಂಚ ಮುಂದಕ್ಕೆ ತಂದು ಹೇರ್‌ಪಿನ್ ಹಾಕಿ. ನಿಮಗೆ ಯಾವ ಮಟ್ಟಿಗೆ ಪಫ್ ಬೇಕೋ ಅಷ್ಟು ಹಿಂದೆ ಮುಂದೆ ತಂದು ಹೇರ್‌ಪಿನ್ ಹಾಕಿ. ಕೀರಿಟಾಕಾರದಲ್ಲೂಹಾಕಬಹುದು. ಅಷ್ಟೇಕೆ ಹೆಚ್ಚು ಸುರಳಿ ಮಾಡದೇ ಸಿಂಪಲ್ ಪಫ್ ಆಕ್ಸೆಸರೀಸ್ ಬಳಸಿಯೂ ಪಿನ್ ಹಾಕಬಹುದು. ಇದು ಸುಲಭ.ಈ ಹೇರ್ ಸ್ಟೈಲ್‌ಗೆ ಆಕ್ಸೆಸರೀಸ್ ಹೆಚ್ಚು ಬಳಸುವುದು ಬೇಡ. ಹೆಡ್ ಬ್ಯಾಂಡ್ ಕೂಡದು. ಉಡುಪಿನ ಬಣ್ಣಕ್ಕೆ ಹೇರ್‌ಪಿನ್ ಧರಿಸಬಹುದು. ಇಲ್ಲವಾದಲ್ಲಿ ಬ್ಲಾಕ್ ಹೇರ್‌ಪಿನ್ ಉತ್ತಮ.
ಮುಖದ ಆಕಾರಕ್ಕೆ ತಕ್ಕಂತಿರಲಿ ಪಫ್ ಹೇರ್ ಸ್ಟೈಲ್
- ನಿಮ್ಮ ಮುಖ ಅಗಲವಾಗಿದ್ದಲ್ಲಿ ನೀವು ಪಫ್ ಹೇರ್‌ಸ್ಟೈಲ್ ಮಾಡಿದಾಗ ಮುಂಭಾಗದಲ್ಲಿಎರಡು ಕಡೆ ಸೈಡ್ ಲಾಕ್ಸ್ ಬೀಡುವುದು ಉತ್ತಮ. ಇಲ್ಲವಾದಲ್ಲಿ ಮತ್ತಷ್ಟು ಅಗಲವಾಗಿ ಕಾಣುವ ಸಾಧ್ಯತೆಗಳಿವೆ.
- ಒವಲ್ ಶೇಪ್ ಇದ್ದಲ್ಲಿ ಪಫ್ ಹೇರ್ಸ್ಟೈಲನ್ನು ತೀರಾ ಎತ್ತರಿಸುವುದು ಬೇಡ. ಕೋಲು ಮುಖದಂತೆ ಕಾಣಬಹುದು. ಮುಖ ಚಿಕ್ಕದಿದ್ದಲ್ಲಿ ಆಕರ್ಷಕವಾಗಿ ಕಾಣುವುದು ಖಚಿತ.
- ಪ್ಲಂಪಿಯಾಗಿರುವವರು ಆದಷ್ಟೂ ಈ ಹೇರ್‌ಸ್ಟೈಲ್ ಆವಾಯ್ಡ್ ಮಾಡಬೇಕು. ಇಲ್ಲವಾದಲ್ಲಿ ಮತ್ತಷ್ಟು ದಪ್ಪಗೆ ಕಾಣುವ ಚಾನ್ಸ್ ಇದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Colour Shoes Fashion: ಬಣ್ಣ ಬಣ್ಣದ ಮಿಸ್ ಮ್ಯಾಚಿಂಗ್ ಶೂಗಳ ಹೊಸ ಟ್ರೆಂಡ್!