Site icon Vistara News

Puff sleeve Fashion: ಮಾನಿನಿಯರ ಫ್ಯಾಷನ್‌ಗೆ ಮರಳಿದ ಪಫ್‌ ಸ್ಲೀವ್‌ ಸೀರೆ ಬ್ಲೌಸ್‌ ಡಿಸೈನ್ಸ್

Puff sleeve Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪಫ್‌ ಸ್ಲೀವ್‌ ಸೀರೆ ಬ್ಲೌಸ್‌ ಡಿಸೈನ್‌ (Puff sleeve Fashion) ಫ್ಯಾಷನ್‌ಲೋಕದಲ್ಲಿ ರೀಎಂಟ್ರಿ ನೀಡಿದೆ. ದಶಕಗಳ ಹಿಂದೆ ಹಿಟ್‌ ಲಿಸ್ಟ್‌ ಸೇರಿದ್ದ ಪಫ್‌ ಸ್ಲೀವ್‌ ಬ್ಲೌಸ್‌ ಇದೀಗ ಹೊಸ ವಿನ್ಯಾಸದಲ್ಲಿ ಹಾಗೂ ನಾನಾ ರೂಪದಲ್ಲಿ ಮರಳಿದ್ದು, ಪ್ರಯೋಗಾತ್ಮಕ ವಿನ್ಯಾಸಗಳು ಈ ಜನರೇಷನ್‌ನ ನಾರಿಯರನ್ನು ಆಕರ್ಷಿಸತೊಡಗಿವೆ.

ನಾನಾ ಬಗೆಯ ಪಫ್‌ ಸ್ಲೀವ್‌ ಬ್ಲೌಸ್‌

ಲಾಂಗ್‌ ಪಫ್, ಹಾಫ್‌ ಪಫ್‌, ಗ್ಯಾದರಿಂಗ್‌ ಪಫ್‌, ಕೌಲ್‌ ಎಫೆಕ್ಟ್‌, ಎರಡೂ ಕಡೆ ಪಫ್‌ ಗ್ಯಾದರಿಂಗ್‌, ಮಿಕ್ಸ್‌ ಮ್ಯಾಚ್‌ ಪಫ್‌ ಸ್ಲೀವ್‌, ಎಂಬ್ರಾಯ್ಡರಿ ಪಫ್‌ ಸ್ಲೀವ್‌ ಹೀಗೆ ನಾನಾ ವಿನ್ಯಾಸದಲ್ಲಿ ಸೀರೆಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಮರುಕಳಿಸಿವೆ. ಇವುಗಳಲ್ಲಿ ಇದೀಗ ಟ್ರೆಡಿಷನಲ್‌ ಸೀರೆಗಳಿಗೆ ಮಾತ್ರವಲ್ಲ, ಕ್ಯಾಶುವಲ್‌ ಆಗಿ ಉಡಬಹುದಾದ ಸಾಮಾನ್ಯ ಸೀರೆಗಳೊಂದಿಗೆ ಮ್ಯಾಚ್‌ ಮಾಡಬಹುದಾದ ವಿನ್ಯಾಸದವು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಡಿಸೈನರ್‌ ರಿಯಾ. ಅವರ ಪ್ರಕಾರ, ಪಫ್‌ ಸ್ಲೀವ್‌ಗಳು ಇಂದು ಹೆಚ್ಚಾಗಿ ಮಿಕ್ಸ್‌ ಮ್ಯಾಚ್‌ ಡಿಸೈನ್‌ನಲ್ಲಿ ಕಾಣಬಹುದು ಎನ್ನುತ್ತಾರೆ.

ರೆಡಿಮೇಡ್‌ ಪಫ್‌ ಸ್ಲೀವ್‌ ಬ್ಲೌಸ್‌

ಮೊದಲೆಲ್ಲಾ ಪಫ್‌ ಸ್ಲೀವನ್ನು ಟೈಲರ್‌ ಬಳಿ ಅಳತೆ ಕೊಟ್ಟು ಸೀರೆ ತೋರಿಸಿ ಹೊಲೆಸಬೇಕಾಗಿತ್ತು. ಆದರೆ, ಇದೀಗ ಕಾಲ ಕಂಪ್ಲೀಟ್‌ ಬದಲಾಗಿದೆ. ಆನ್‌ಲೈನ್‌ನಲ್ಲಿ ಧರಿಸುವ ಮಹಿಳೆಯ ಬ್ಲೌಸ್‌ ಅಳತೆಗೆ ತಕ್ಕಂತೆ ಕೊಳ್ಳಬಹುದು. ಬೇಕಾದ ಡಿಸೈನ್‌ಗಳನ್ನು ಆನ್‌ಸ್ಕ್ರೀನ್‌ನಲ್ಲೆ ನೋಡಿ ಖರೀದಿಸಬಹುದು. ಎಕ್ಸ್‌ಚೇಂಜ್‌ ಆಫರ್‌ಗಳು ಕೂಡ ಲಭ್ಯ. ಹಾಗಾಗಿ ಇಂದು ಬಹಳಷ್ಟು ಯುವತಿಯರು ಟೈಲರ್‌ ಬಳಿ ಹೋಗದೇ ರೆಡಿಮೇಡ್‌ ಪಫ್‌ ಸ್ಲೀವ್‌ ಬ್ಲೌಸ್‌ಗಳನ್ನು ಖರೀದಿಸತೊಡಗಿದ್ದಾರೆ ಎನ್ನುತ್ತಾರೆ ಆನ್‌ಲೈನ್‌ ಬ್ಲೌಸ್‌ ಡಿಸೈನರ್ಸ್‌.

ಇಂಡೋ-ವೆಸ್ಟರ್ನ್ ಪಫ್‌ ಸ್ಲೀವ್‌ ಬ್ಲೌಸ್‌

ಕಾಲರ್‌ ಬ್ಲೌಸ್‌ಗೆ ಪಫ್‌ ಸ್ಲೀವ್‌, ಕ್ರಾಪ್‌ ಟಾಪ್ನಂತಹ ಬ್ಲೌಸ್‌ಗೆ ಪಫ್‌ ವಿನ್ಯಾಸ, ಲಾಂಗ್‌ ಸ್ಲೀವ್‌ಗೂ ಪಫ್‌ ಡಿಸೈನ್‌, ಬೋಟ್‌ ನೆಕ್‌ ಇರುವಂತಹ ಬ್ಲೌಸ್‌ಗೂ ಪಫ್‌ ವಿನ್ಯಾಸ ಹೀಗೆ ಮಿಕ್ಸ್‌ ಮ್ಯಾಚ್‌ ಮಾಡುವಂತಹ ಸ್ಲೀವ್‌ ಡಿಸೈನ್‌ಗಳು ಇಂದು ಈ ಜನರೇಷನ್‌ ಕಾರ್ಪೋರೇಟ್‌ ನಾರಿಯರನ್ನು ತಮ್ಮತ್ತ ಸೆಳೆದಿವೆ.

ರೇಷ್ಮೆ ಸೀರೆಯಿಂದಿಡಿದು , ಸ್ಯಾಟಿನ್‌, ಕಾಟನ್‌, ಸಿಂಥೆಟಿಕ್‌ ಸೀರೆಗೂ ಪಫ್ ಸ್ಲೀವ್‌ ವಿನ್ಯಾಸದ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ರೇಷ್ಮೆ ಸೀರೆಗಳಿಗೆ ಬೋಟಿಕ್‌ ಡಿಸೈನರ್‌ಗಳು ವಿನ್ಯಾಸಗೊಳಿಸಿದರೇ, ಕ್ಯಾಶುವಲ್‌ ವೇರ್‌ ಸೀರೆಗೆ ಆನ್‌ಲೈನ್‌ ಬೋಟಿಕ್‌ಗಳು ಸಹಾಯಮಾಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌.

ಪಫ್‌ ಸ್ಲೀವ್‌ ಡಿಸೈನ್‌ ಪ್ರಿಯರ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್‌ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?

Exit mobile version