Site icon Vistara News

Ram Mandir Celebration In Desi Look: ಎಲ್ಲಿ ನೋಡಿದರೂ ದೇಸಿ ಲುಕ್‌ನದ್ದೇ ಕಾರುಬಾರು!

Ram Mandir Celebration In Desi Look

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆಯಲ್ಲಿ,ಎಥ್ನಿಕ್‌ ಹಾಗೂ ದೇಸಿ ಔಟ್‌ಫಿಟ್‌ ಧರಿಸಿ (Ram Mandir Celebration In Desi Look) ಸಂಭ್ರಮಿಸಿದವರ ಕಾರುಬಾರು ಹೆಚ್ಚಾಗಿದೆ. ಸಿನಿಮಾ, ಕಿರುತೆರೆ ತಾರೆಯರು ಹಾಗೂ ಸೆಲೆಬ್ರೆಟಿಗಳು ಮಾತ್ರವಲ್ಲ, ಶ್ರೀ ಸಾಮಾನ್ಯರು ಕೂಡ ದೇಸಿ ಉಡುಗೆ-ತೊಡುಗೆಗಳಲ್ಲಿ ಹಾಗೂ ಎಥ್ನಿಕ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ಈ ದಿನವನ್ನು ಸಂಭ್ರಮಿಸಿದ್ದಾರೆ.

Kids Celebration at Bangalore

“ಆಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುವುದರೊಂದಿಗೆ, ಇದ್ದಲ್ಲಿಯೇ ಸಂಭ್ರಮಚಾರಣೆ ಮಾಡುವುದು ಹೆಚ್ಚಾಗಿತ್ತು. ಅಷ್ಟು ಮಾತ್ರವಲ್ಲದೇ, ಪಕ್ಕಾ ದೇಸಿ ಔಟ್‌ಫಿಟ್‌ ಧರಿಸಿ ಖುಷಿ ಪಟ್ಟಿದ್ದು, ಹಾಗೂ ಸ್ಥಳೀಯ ದೇವಾಲಯಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು. ಇನ್ನು ತಾರೆಯರು ಕೂಡ ಎಥ್ನಿಕ್‌ ಉಡುಗೆಗಳಲ್ಲಿ ಕಾಣಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಆಯಾ ಏರಿಯಾಗಳಲ್ಲಿ ಸಂಘ-ಸಂಸ್ಥೆ ಸದಸ್ಯರೂ ಕೂಡ ಕೇಸರಿ, ಕ್ರೀಮ್‌ ಹಾಗೂ ಗೋಲ್ಡನ್‌ ಶೇಡ್‌ನ ಉಡುಗೆ-ತೊಡುಗೆಗಳನ್ನು ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಇದು ನೋಡಲು ಯೂನಿಫಾರ್ಮಿಟಿ ನೀಡುವುದರೊಂದಿಗೆ ನಮ್ಮ ನೆಲದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಕನ್ನಡಿ ಹಿಡಿದಂತಿತ್ತು” ಎನ್ನುತ್ತಾರೆ ನಟಿಯರಾದ ಇತಿ ಆಚಾರ್ಯ, ಸುಷ್ಮಾ ಹಾಗೂ ಶಂಕರ್‌.

ಸೋಷಿಯಲ್‌ ಮೀಡಿಯಾದಲ್ಲಿ ತಾರೆಯರ ಸಂಭ್ರಮ

ಇನ್ನು ಬೆಳ್ಳಿತೆರೆ ಹಾಗೂ ಕಿರುತೆರೆಯ ತಾರೆಯರು, ಪಕ್ಷ ಭೇಧ-ಭಾವ ಮರೆತು, ಎಥ್ನಿಕ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ಶುಭಾಶಯ ಕೋರಿದರು. ಕೆಲವರು ತಮ್ಮದೇ ಆದ ಶೈಲಿಯಲ್ಲಿ ರಾಮನನ್ನು ಧ್ಯಾನಿಸಿದರೇ, ಇನ್ನು ಕೆಲವರು ರಾಮನ ಹಾಡಿಗೆ ನರ್ತಿಸುವ ಮೂಲಕ ಧ್ಯಾನಿಸಿದ್ದಾರೆ.

ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್ಸ್

ಸೋಷಿಯಲ್‌ ಮೀಡಿಯಾದಲ್ಲಿ ಇನ್‌ಪ್ಲೂಯೆನ್ಸರ್ಸ್ ಕೂಡ ಎಥ್ನಿಕ್‌ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಂತಮ್ಮ ರೀಲ್ಸ್‌ ಮೂಲಕ ಫಾಲೋವರ್ಸ್ ಗಳನ್ನು ಸೆಳೆದಿದ್ದಾರೆ. ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡು ರಾಮನನ್ನು ಹಾಡಿ ಹೊಗಳಿದ್ದಾರೆ. ಶಬರಿಯಂತೆ ಪೂಜಿಸಿದ್ದಾರೆ.

ಸಾಮಾನ್ಯ ಜನರ ದೇಸಿ ಲುಕ್‌

ಸಾಮಾನ್ಯ ಜನರು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಹಬ್ಬದಂತೆ ಸಂಭ್ರಮಿಸಿದ್ದಾರೆ. ಇದಕ್ಕಾಗಿ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಥ್ನಿಕ್‌ ಉಡುಗೆ-ತೊಡುಗೆಗಳಲ್ಲಿ ಪಾಲ್ಗೊಂಡಿದ್ದಾರೆ. ಅಯೋಧ್ಯೆ ಮಂದಿರದ ಪ್ರಿಂಟ್ಸ್ ಇರುವ ಕೇಸರಿ ಶಾಲಿನಲ್ಲಿ ಮಿಂಚಿದ್ದಾರೆ.

ಒಟ್ನಲ್ಲಿ, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮ ಮನೆ ಮನೆಯ ಹಬ್ಬದಂತಾಗಿದ್ದು, ಎಥ್ನಿಕ್‌ ಲುಕ್ಕನ್ನು ಪ್ರೋತ್ಸಾಹಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Lehenga Fashion: ನಟಿ ಮೌನಿ ರಾಯ್ ಗ್ರ್ಯಾಂಡ್ ಕೇಸರಿ ಲೆಹೆಂಗಾ ಜಾದೂ

Exit mobile version