ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಭಾರತೀಯ ಸಿಟಿ ಮಾಲ್‌ನಲ್ಲಿ ನಡೆದ ವರ್ಣರಂಜಿತ ಫ್ಯಾಷನ್ ಶೋ ಈ ವಿಂಟರ್ ಸೀಸನ್‌ನ ಅತ್ಯುತ್ತಮ ರ್ಯಾಂಪ್ ಶೋಗಳ ಲಿಸ್ಟ್‌ಗೆ ಸೇರಿತು. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನೇತೃತ್ವದಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ ಮಾಡೆಲಿಂಗ್ ಪ್ರವೇಶಿಸಲು ಬಯಸುವವರು ಮಾತ್ರವಲ್ಲ, ಸೂಪರ್ ಮಾಡೆಲ್‌ಗಳು ಸುಮಾರು ೧೦ಕ್ಕೂ ಹೆಚ್ಚು ವಿವಿಧ ಬ್ರಾಂಡ್‌ಗಳ ಫ್ಯಾಷನ್‌ವೇರ್ ಧರಿಸಿ ರ್ಯಾಂಪ್ ವಾಕ್ ಮಾಡಿದರು.
ಚಳಿಗಾಲದಲ್ಲಿ ಔಟ್‌ಡೋರ್‌ನಲ್ಲಿ ನಡೆದ ಈ ಫ್ಯಾಷನ್ ಶೋ, ಈ ಸೀಸನ್‌ನ ಮೊದಲ ಔಟ್‌ಡೋರ್ ಫ್ಯಾಷನ್ ಶೋಗಳ ಸಾಲಿಗೆ ಸೇರಿತು. ಇದರ ಹಿಂದೆಯೇ ಇಲ್ಲಿಯೇ ನಡೆದಿದ್ದ ಭಾರತೀಯ ಮಾಲ್‌ನ ಟ್ಯಾಲೆಂಟ್ ಹಂಟ್ ಕೂಡ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಮಾತ್ರವಲ್ಲ, ಯುವಕ-ಯುವತಿಯರು ಸೇರಿದಂತೆ ನಾನಾ ವರ್ಗದ ಮಕ್ಕಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನೇತೃತ್ವ
ಈ ಫ್ಯಾಷನ್ ವೀಕ್ ಹಾಗೂ ಟ್ಯಾಲೆಂಟ್ ಶೋ ಮೂಲಕ ಭಾಗವಹಿಸಿದ್ದವರಿಗೆಲ್ಲ ಪ್ರಸಾದ್ ಬಿದ್ದಪ್ಪ ಅವರು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಫ್ಯಾಷನ್ ಹಾಗೂ ರ್ಯಾಂಪ್ ಕುರಿತಂತೆ ಮಾಡೆಲ್‌ಗಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಈ ಕ್ಷೇತ್ರದ ಕುರಿತಂತೆಯೂ ಮಾತನಾಡಿ ಹುರಿದುಂಬಿಸಿದರು. ಮಾಡೆಲ್‌ಗಳು ಹೇಗೆಲ್ಲಾ ಈ ಕ್ಷೇತ್ರದಲ್ಲಿ ಮುನ್ನುಗ್ಗಬೇಕು, ಗುರಿ ತಲುಪಬೇಕು ಎಂಬುದರ ಬಗ್ಗೆಯೂ ಒಂದಿಷ್ಟು ಕಿವಿಮಾತು ಹೇಳಿದರು.
ಮನಸೆಳೆದ ಮಕ್ಕಳ ಟ್ಯಾಲೆಂಟ್ ಹಂಟ್
ಟ್ಯಾಲೆಂಟ್ ಹಂಟ್ ಪ್ರದರ್ಶನದಲ್ಲಿ ಮಕ್ಕಳ ರ್ಯಾಂಪ್ ವಾಕ್ ನೆರೆದಿದ್ದ ಜನರ ಮನೆಸೆಳೆಯಿತು. ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಚಿಣ್ಣರಿಂದ ಹಿಡಿದು, ಯಂಗ್‌ಸ್ಟರ್ಸ್ ರ್ಯಾಂಪ್ ವಾಕ್ ಕೂಡ ಮೆಚ್ಚುಗೆಗೆ ಪಾತ್ರವಾಯಿತು.
ವಿಶೇಷಚೇತನರ ರ್ಯಾಂಪ್ ವಾಕ್
ಇವೆಲ್ಲದರ ನಡುವೆ ನಡೆದ ವಿಶೇಷಚೇತನರ ರ್ಯಾಂಪ್ ವಾಕ್ ಮನ ಮುಟ್ಟುವಂತಿತ್ತು. ಇದಕ್ಕೆ ಅವಕಾಶ ನೀಡಿದ ಪ್ರಸಾದ್ ಬಿದ್ದಪ್ಪ ಅವರಿಗೆ ರೂಬಿ ಸಿಂಗ್ ಅವರು ಮನಪೂರ್ವಕ ಅಭಿನಂದನೆ ಸಲ್ಲಿಸಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Bollywood Stars Fashion | ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ತಾರೆಯರ ಹೈ ಫ್ಯಾಷನ್