ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಣ್ಣರಳಿಸಿ ನೋಡುವಂತಹ ಚಿತ್ರ-ವಿಚಿತ್ರ ಮೆನ್ಸ್ ಪ್ಯಾಂಟ್ ಸೂಟ್ ಸೆಟ್‌ಗಳು ಈ ಬಾರಿಯ ಗೋಲ್ಡನ್ ಗ್ಲೋಬ್ ಆವಾರ್ಡ್ ರೆಡ್ ಕಾರ್ಪೆಟ್ ಸಮಾರಂಭದ ಆಕರ್ಷಣೀಯ ಕ್ರೇಂದ್ರಬಿಂದುವಾಗಿತ್ತು. ಜಾಗತಿಕ ಮಟ್ಟದಲ್ಲಿ ಟ್ರೆಂಡಿಯಾಗಬಹುದಾದ ನಾನಾ ಶೈಲಿಯ ಡಿಸೈನರ್ ಪ್ಯಾಂಟ್ ಸೂಟ್‌ಗಳು ಈ ರೆಡ್‌ಕಾರ್ಪೆಟ್‌ನಲ್ಲಿ ಸೆಲೆಬ್ರಿಟಿಗಳ ಮೂಲಕ ಫ್ಯಾಷನ್ ಪ್ರಿಯರ ಗಮನ ಸೆಳೆದವು.
ಪರಿಣಾಮವಾಗಿ ಇದೀಗ ಪುರುಷರ ಪ್ಯಾಂಟ್ ಸೂಟ್ ಡಿಸೈನಿಂಗ್ ಕ್ಷೇತ್ರದಲ್ಲಿ ಪ್ರಯೋಗಾತ್ಮಕ ಡಿಸೈನ್‌ಗಳನ್ನು ನೋಡುವ ಸಾಧ್ಯತೆಗಳು ಹೆಚ್ಚಾಗಿದೆ. ಒಂದೇ ಬಗೆಯ ಡಿಸೈನ್‌ಗಳಿಗೆ ಸದ್ಯಕ್ಕೆ ಈ ಹೊಸ ಟ್ರೆಂಡ್ ಇತಿ ಶ್ರೀ ಬಿದ್ದಿದೆ. ಹೊಸ ಡಿಸೈನ್‌ಗಳಿಗೆ ಹಾಲಿವುಡ್ ಸೆಲೆಬ್ರಿಟಿಗಳ ಈ ಡಿಸೈನರ್ ಸೂಟ್‌ಗಳು ಮುನ್ನುಡಿ ಬರೆದಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ವಿದ್ಯಾ.
ಹುಬ್ಬೇರಿಸಿದ ಬಿಲ್ಲಿ ಪೊರ್ಟರ್ ವೆಲ್ವೆಟ್ ಗೌನ್ ಸೂಟ್
ಅಂದಹಾಗೆ, ಇಡೀ ರೆಡ್‌ಕಾರ್ಪೆಟ್ ಸಮಾರಂಭದಲ್ಲಿ ನೆರೆದಿದ್ದ ಸೆಲೆಬ್ರಿಟಿಗಳ ಹುಬ್ಬೇರಿಸಿದ ಸೂಟ್ ಎಂದರೇ ಅದು ಬೆಲ್ಲಿ ಪೊರ್ಟರ್ ಉಡುಗೆ. ಇತ್ತ ಸೂಟ್ ಅಲ್ಲ, ಅತ್ತ ಗೌನು ಅಲ್ಲ ಎಂಬಂತಿದ್ದ ಈ ವಿಚಿತ್ರ ಡಿಸೈನರ್‌ವೇರ್ ಎರಡರ ಸಮ್ಮಿಶ್ರಣದಂತಿತ್ತು. ಪಿಂಕ್ ವೆಲ್ವೆಟ್‌ನ ಸೂಟ್ ಗೌನ್‌ನಲ್ಲಿ ಕಾಣಿಸಿಕೊಂಡ ನಟ ಬೆಲ್ಲಿ, ಈ ಮೂಲಕ ಜಾಗತೀಕ ಮಟ್ಟದ ಫ್ಯಾಷನ್ ಪ್ರಿಯರ ಗಮನಸೆಳೆದು, ಅಚ್ಚರಿ ಮೂಡಿಸಿದ್ದಾರೆ.
ಸೆಲೆಬ್ರಿಟಿಗಳ ಭಿನ್ನ-ವಿಭಿನ್ನ ಸೂಟ್ ಡಿಸೈನರ್‌ವೇರ್‌ಗಳು
ನಾನಾ ಹಾಲಿವುಡ್ ಸೆಲೆಬ್ರಿಟಿಗಳು ಧರಿಸಿದ್ದ ಸೂಟ್‌ಗಳು ತಕ್ಷಣಕ್ಕೆ ನೋಡಲು ಅಂತಹ ವಿಭಿನ್ನವಾಗಿ ಅನ್ನಿಸದಿದ್ದರೂ ಅವರು ಧರಿಸಿದ್ದ ಸೂಟ್‌ಗಳ ವರ್ಣ ಹಾಗೂ ಸ್ಟಿಚ್ಚಿಂಗ್ ಕಾನ್ಸೆಪ್ಟ್ ಕಂಪ್ಲೀಟ್ ಡಿಫರೆಂಟ್ ಆಗಿತ್ತು. ಉದಾಹರಣೆಗೆ ಕಾರ್ಯಕ್ರಮದ ನಿರೂಪಕ ಜೆರೊಡ್ ಧರಿಸಿದ ಪೀಚ್‌ವರ್ಣದ ಮಾನೋಕ್ರೊಮ್ ಸೂಟ್ ಶೇಡ್ ಧರಿಸುವವರು ತೀರಾ ಕಡಿಮೆ ಎನ್ನಬಹುದು. ಇನ್ನು ನಟ ಆಸ್ಟೀನ್ ಬಟ್ಲರ್‌ರ ಬ್ಲ್ಯಾಕ್ ಹಾಗೂ ವೈಟ್ ಸೂಟ್ ಮಲ್ಟಿ ಲೆಯರ್‌ನದ್ದಾಗಿತ್ತಲ್ಲದೇ ರೆಟ್ರೋ ಲುಕ್ ನೀಡಿತ್ತು. ನಟ ಕೊಲಮನ್ ಡಾಮಿಂಗೊರ ಎಂಬಾಲಿಶ್ಡ್ ಸೂಟ್ ಮಿನುಗುವ ಆಕಾಶ ನೆನಪಿಸಿತು. ನಟ ಡೋನಾಲ್ಡ್ ಗ್ಲೋವರ್‌ರ ಬಿಳಿ ಡ್ರೆಪಿಂಗ್ ಸೂಟ್ ಮೇಲೆ ಧರಿಸಿದ ಬ್ಲಾಕ್ ಬ್ಲೇಝರ್ ವಿಭಿನ್ನವಾಗಿತ್ತು. ನಟ ಜೆರೆಮಿ ಲೆದರ್ ಬ್ಲಾಕ್ ಸೂಟ್, ನಟ ಜೋಶ್ ರಿಚರ್ಡ್ರ ಮೆಶ್ ಕ್ರಾಪ್ ಟೀ ಶರ್ಟ್‌ಗೆ ಧರಿಸಿದ ಸ್ಟ್ರೈಪ್ಸ್ ಸೂಟ್ ಕಣ್ಣರಳಿಸಿ ನೋಡುವಂತಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಅಚ್ಕನ್ ಡಿಸೈನರ್‌ವೇರ್‌ನಲ್ಲಿ ರಾಮ್‌ಚರಣ್
ಇವರೆಲ್ಲರ ನಡುವೆ ನಟ ರಾಮ್‌ಚರಣ್ ಧರಿಸಿದ್ದ, ಡಿಸೈನರ್ ತರುಣ್ ತೆಹ್ಲಿಯಾನಿ ಡಿಸೈನ್‌ನ ಅಚ್ಕನ್ ಫಾರ್ಮಲ್ ಡಿಸೈನರ್‌ವೇರ್ ಆಕರ್ಷಣೀಯವಾಗಿತ್ತಲ್ಲದೇ, ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿತ್ತು ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ನಟ ಹೃತಿಕ್ ರೋಷನ್ ಗ್ರೀಕ್ ಗಾಡ್ ಆಫ್ ಬಾಲಿವುಡ್ ಆಗಿದ್ದು ಹೇಗೆ?