Site icon Vistara News

Relationship Tips: ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ ಈ 10 ಕಾರಣಗಳು!

Relationship Tips

ಮದುವೆಯಾದ (Relationship) ಕೆಲವು ಸಮಯದವರೆಗೆ ಜೀವನ ಸುಂದರವಾಗಿ (life) ಇರುತ್ತದೆ. ಆದರೆ ಬಳಿಕ ಹೆಚ್ಚುವ ಜವಾಬ್ದಾರಿಗಳ ನಡುವೆ ಸಂಗಾತಿಗಳು (husband and wife) ದೈಹಿಕ, ಮಾನಸಿಕವಾಗಿ ದೂರವಾಗುತ್ತಾರೆ. ಇದನ್ನು ನಿರ್ವಹಿಸುವುದು ಕೆಲವೊಮ್ಮೆ ಸವಾಲಾಗಿ ಪರಿಣಮಿಸುತ್ತದೆ. ಇದು ಎಲ್ಲ ಮನೆಯಲ್ಲೂ ಸರ್ವೇ ಸಾಮಾನ್ಯ ವಿಚಾರವಾದರೂ ಸಮಯಕ್ಕೆ ಸರಿಯಾಗಿ ಸಂಬಂಧವನ್ನು (Relationship Tips) ಸರಿಪಡಿಸಿಕೊಳ್ಳದೇ ಇದ್ದರೆ ಪತಿ ಪತ್ನಿಯರ ನಡುವಿನ ಪ್ರೀತಿ, ಸ್ನೇಹ, ಬಾಂಧವ್ಯ ಮುರಿದು ಬೀಳುವ ಹಂತಕ್ಕೂ ಹೋದರೆ ಅಚ್ಚರಿಯಿಲ್ಲ.

ಹೀಗಾಗಿ ಕಾಲಾನಂತರದಲ್ಲಿ ಪತಿ ಪತ್ನಿಯರ ನಡುವೆ ಉಂಟಾಗುವ ಭಿನ್ನಾಭಿಪ್ರಾಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವುದು ಸಂಬಂಧವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಾಹಿಕ ಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಗಂಡ ಹೆಂಡತಿಯಲ್ಲಿ ಅಥವಾ ಹೆಂಡತಿ ಗಂಡನಲ್ಲಿ ಆಸಕ್ತಿ ಕಳೆದುಕೊಳ್ಳಲು 10 ಸಾಮಾನ್ಯ ಕಾರಣಗಳಿವೆ. ಇದನ್ನು ಪತ್ತೆ ಹಚ್ಚಿ ಪರಿಹರಿಸಲು ಪ್ರಯತ್ನಿಸಿದರೆ ಸಂಬಂಧದಲ್ಲಿ ಪ್ರೀತಿಯನ್ನು ಮತ್ತೆ ಹೊಸದಾಗಿ ಚಿಗುರಿಸಬಹುದು.

Relationship Tips


ಸಂವಹನದ ಕೊರತೆ

ಪರಿಣಾಮಕಾರಿ ಸಂವಹನವು ಪ್ರತಿಯೊಂದು ಸಂಬಂಧದ ಅಡಿಪಾಯವಾಗಿದೆ. ಸಂವಹನವು ಮುರಿದುಹೋದಾಗ ತಪ್ಪು ತಿಳುವಳಿಕೆ ಮತ್ತು ಅಸಮಾಧಾನಗಳು ಕಾಣಿಸಿಕೊಳ್ಳುತ್ತದೆ. ಇದು ಒಬ್ಬರ ಮೇಲೆ ಇನ್ನೊಬ್ಬರು ಆಸಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದನ್ನು ಪರಿಹರಿಸಲು, ದಂಪತಿ ತಮ್ಮ ಭಾವನೆ, ಆಲೋಚನೆ ಮತ್ತು ಕಾಳಜಿಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಮಯವನ್ನು ನೀಡಬೇಕು. ಇದಕ್ಕಾಗಿ ನಿಯಮಿತ ಸಮಯವನ್ನು ನಿಗದಿಪಡಿಸುವುದು ಒಳ್ಳೆಯದು.

ದಿನಚರಿ

ಪ್ರತಿಯೊಬ್ಬರ ದಿನಚರಿಯು ಏಕತಾನತೆಯಿಂದ ಕೂಡಿರುತ್ತದೆ. ಇದು ಸಂಬಂಧವು ಹಳಸಿದ ಭಾವನೆಯನ್ನು ಉಂಟು ಮಾಡುತ್ತದೆ. ಇದನ್ನು ನಿರ್ವಹಿಸಲು ದಂಪತಿ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಒಟ್ಟಿಗೆ ಸಮಯ ಕಳೆಯಲು ವಿಶೇಷ ಯೋಜನೆ ಹಾಕಿಕೊಳ್ಳುವುದು, ಹೊಸ ಹವ್ಯಾಸಗಳನ್ನು ಒಟ್ಟಿಗೆ ಪ್ರಯತ್ನಿಸುವುದು ಅಥವಾ ಪ್ರಯಾಣ ಮಾಡುವುದು ಸಹ ಸಂಬಂಧದಲ್ಲಿ ಉತ್ಸಾಹ ಮತ್ತು ನವೀನತೆಯನ್ನು ತುಂಬುತ್ತದೆ.

ನಿರ್ಲಕ್ಷ್ಯ

ಪತಿ ಪತ್ನಿಯರಲ್ಲಿ ದೈಹಿಕ ಅನ್ಯೋನ್ಯತೆ ವೈವಾಹಿಕ ಸಂಬಂಧದ ನಿರ್ಣಾಯಕ ಅಂಶವಾಗಿದೆ. ಅದು ಕಡಿಮೆಯಾದಾಗ ನಿರ್ಲಿಪ್ತತೆಯ ಭಾವನೆಗೆ ಕಾರಣವಾಗಬಹುದು. ದಂಪತಿ ದೈಹಿಕ ನಿಕಟತೆಗೆ ಆದ್ಯತೆ ನೀಡಬೇಕು. ಈ ಮೂಲಕ ನಿಯಮಿತವಾಗಿ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಇದು ಅವರ ಸಂಬಂಧದ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಕೈಗಳನ್ನು ಹಿಡಿಯುವುದು, ತಬ್ಬಿಕೊಳ್ಳುವುದು ಇತ್ಯಾದಿ.

Relationship Tips


ಭಾವನಾತ್ಮಕ ಸಂಪರ್ಕ

ಆರೋಗ್ಯಕರ ದಾಂಪತ್ಯಕ್ಕೆ ಭಾವನಾತ್ಮಕ ಸಂಪರ್ಕ ಅತ್ಯಗತ್ಯ. ಭಾವನಾತ್ಮಕ ಅಂತರವನ್ನು ಕಡಿಮೆ ಮಾಡಲು ದಂಪತಿ ಭಾವನಾತ್ಮಕವಾಗಿ ಬೆಂಬಲ ನೀಡುವಲ್ಲಿ ಕೆಲಸ ಮಾಡಬೇಕು. ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವುದು, ಸಹಾನುಭೂತಿ ಮತ್ತು ಮೆಚ್ಚುಗೆಯನ್ನು ತೋರಿಸುವುದು ಭಾವನಾತ್ಮಕ ಅನ್ಯೋನ್ಯತೆ ಮತ್ತು ನಿಕಟತೆಯನ್ನು ಪುನರ್ ನಿರ್ಮಿಸಲು ಸಹಾಯ ಮಾಡುತ್ತದೆ.

ಒತ್ತಡಗಳು

ಕೆಲಸ ಅಥವಾ ಆರ್ಥಿಕ ಒತ್ತಡಗಳಂತಹ ಬಾಹ್ಯ ಒತ್ತಡಗಳು ದಾಂಪತ್ಯದ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಒತ್ತಡಗಳು ಕಿರಿಕಿರಿ ಮತ್ತು ಬೇರ್ಪಡುವಿಕೆಗೆ ಕಾರಣವಾಗಬಹುದು. ಇದನ್ನು ನಿರ್ವಹಿಸಲು ದಂಪತಿ ಒತ್ತಡ ನಿವಾರಣೆ ತಂತ್ರಗಳನ್ನು ಒಟ್ಟಿಗೆ ಅಭ್ಯಾಸ ಮಾಡಬೇಕು. ಉದಾಹರಣೆಗೆ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು ಅಥವಾ ಅಗತ್ಯವಿದ್ದರೆ ವೃತ್ತಿಪರ ಸಲಹೆಯನ್ನು ಪಡೆಯುವುದು, ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದು ವೈವಾಹಿಕ ಬಂಧವನ್ನು ಬಲಪಡಿಸುತ್ತದೆ.

ಮೆಚ್ಚುಗೆಯ ಕೊರತೆ

ಮೆಚ್ಚುಗೆಯಿಲ್ಲದ ಭಾವನೆಯು ಅತೃಪ್ತಿ ಮತ್ತು ನಿರಾಸಕ್ತಿಗಳಿಗೆ ಕಾರಣವಾಗಬಹುದು. ಗಂಡ ಹೆಂಡತಿಯ, ಹೆಂಡತಿ ಗಂಡನ ಪ್ರಯತ್ನಗಳು ಮತ್ತು ಕೊಡುಗೆಗಳಿಗೆ ಮೆಚ್ಚುಗೆಯನ್ನು ತೋರಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡಬೇಕು. ಮೌಲ್ಯಯುತವಾದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ

ಸಂಘರ್ಷಗಳು

ದೀರ್ಘಕಾಲದ ಸಮಸ್ಯೆಗಳು ದಂಪತಿಯ ನಡುವೆ ಪರಸ್ಪರ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸುವುದು ಒಳ್ಳೆಯದು. ದಂಪತಿಯ ನಡುವೆ ಆರೋಗ್ಯಕರ ಸಂಘರ್ಷವಿರಬೇಕು. ಇದಕ್ಕಾಗಿ ಪರಿಹಾರ ತಂತ್ರಗಳನ್ನು ದಂಪತಿ ಅಭ್ಯಾಸ ಮಾಡಬೇಕು. ಅಗತ್ಯವಿದ್ದರೆ, ವೃತ್ತಿಪರ ಮಧ್ಯಸ್ಥಿಕೆ ಅಥವಾ ಸಮಾಲೋಚನೆಯನ್ನು ಪಡೆಯಬಹುದು.

ಆದ್ಯತೆಗಳ ಬಗ್ಗೆ ಕಾಳಜಿ ಇರಲಿ

ದಂಪತಿಯ ನಡುವೆ ಆದ್ಯತೆಗಳ ಬಗ್ಗೆ ಕಾಳಜಿ, ಗೌರವ ಇರಲಿ. ವೈಯಕ್ತಿಕ ಆದ್ಯತೆ, ಗುರಿಗಳು ಬದಲಾದಂತೆ ದಂಪತಿಯ ನಡುವೆ ಬಿರುಕು ಕಾಣಿಸಿಕೊಳ್ಳಬಹುದು. ಹೀಗಾಗಿ ಪರಸ್ಪರರ ವೈಯಕ್ತಿಕ ಆಕಾಂಕ್ಷೆಗಳನ್ನು ಗೌರವಿಸುವುದು ಸಂಬಂಧದಲ್ಲಿ ಬಹುಮುಖ್ಯವಾಗಿದೆ.

Relationship Tips


ಸ್ವಯಂ ಕಾಳಜಿ

ಸ್ವಯಂ ಆರೈಕೆಯನ್ನು ನಿರ್ಲಕ್ಷಿಸಿದಾಗ ಅದು ಸಂಬಂಧದಲ್ಲಿ ಅತೃಪ್ತಿ ಮತ್ತು ನಿರಾಸಕ್ತಿಯ ಭಾವನೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ಸಂಗಾತಿಗಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ಹವ್ಯಾಸಗಳನ್ನು ಮುಂದುವರಿಸಲು, ಆರೋಗ್ಯಕರ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು.

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

ನಗುವಿನ ಕೊರತೆ

ಹಾಸ್ಯವಿಲ್ಲದ ಬದುಕು ದಾಂಪತ್ಯದಲ್ಲಿ ಬೇಸರ ಮೂಡಿಸಬಹುದು. ಹೀಗಾಗಿ ದಂಪತಿ ತಮ್ಮ ದೈನಂದಿನ ಜೀವನದಲ್ಲಿ ವಿನೋದ ಮತ್ತು ನಗುವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ದಂಪತಿ ತಮ್ಮಲ್ಲಿ ಹಾಸ್ಯದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಮತ್ತು ಒಟ್ಟಿಗೆ ಮೋಜು ಮಾಡುವುದು ಸಂಬಂಧದಲ್ಲಿ ಉತ್ಸಾಹವನ್ನು ತುಂಬುತ್ತದೆ.

Exit mobile version