Site icon Vistara News

Infertility Problem: ಇನ್ನೂ ಮಕ್ಕಳಾಗಿಲ್ಲವೆ? ಈ ಸರಳ ಸಲಹೆಗಳನ್ನು ಪಾಲಿಸಿ

Reproductive Issues

ಹೆಣ್ಣುಮಕ್ಕಳು ಮದುವೆಯಾದ ಕೆಲ ತಿಂಗಳ ಬಳಿಕ ಪ್ರತಿಯೊಬ್ಬರೂ ಗುಡ್ ನ್ಯೂಸ್ ಇಲ್ಲವೇ ಎಂದು ಕೇಳುತ್ತಾರೆ. ಈ ಸವಾಲನ್ನು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಎದುರಿಸುತ್ತಾರೆ. ಮದುವೆಯಾದ ಮೂರು ತಿಂಗಳೊಳಗೆ ಸಿಹಿ ಸುದ್ದಿ ನೀಡಿದರೆ ಎಲ್ಲರಿಗೂ ಸಂತೋಷ. ಆದರೆ ಮದುವೆಯಾಗಿ ವರುಷವಾದರೂ ಗರ್ಭ ಧರಿಸದಿದ್ದರೆ (Infertility Problem) ಜನರು ಆಕೆಯನ್ನು ತುಂಬಾ ತಾತ್ಸಾರದಿಂದ ನೋಡುತ್ತಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ ಆಕೆಯನ್ನು ಮುಂದಕ್ಕೆ ಬರಲು ಬಿಡುವುದಿಲ್ಲ. ಬಂಜೆ ಎಂಬ ಪಟ್ಟವನ್ನು ಕಟ್ಟುತ್ತಾರೆ. ಹಾಗಾಗಿ ಸಂತಾನ ಹೆಣ್ಣುಮಕ್ಕಳ ಜೀವನದಲ್ಲಿ ಅತಿ ಮುಖ್ಯ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಬಂಜೆತನದ ಸಮಸ್ಯೆಯಿಂದ ನರಳುತ್ತಿದ್ದಾರೆ. ಮಹಿಳೆಯ ಸಂತಾನೋತ್ಪತ್ತಿ (Reproductive Issues) ವ್ಯವಸ್ಥೆಯಲ್ಲಿ ಕಂಡುಬರುವಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಗರ್ಭಕೋಶದಲ್ಲಿ ಗಡ್ಡೆಗಳ ಬೆಳವಣಿಗೆ, ಹಾರ್ಮೋನ್ ಅಸಮತೋಲನ ಮುಂತಾದವುಗಳಿಂದ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ತಜ್ಞರು ತಿಳಿಸಿದ ಈ ಸಲಹೆಗಳನ್ನು ಪಾಲಿಸಿ.

  1. – ಮಹಿಳೆಯರು ನಿಯಮಿತವಾಗಿ ಸ್ಕ್ಯಾನಿಂಗ್ ಮತ್ತು ವೈದ್ಯರ ಬಳಿ ಚೆಕ್ ಅಪ್ ಗಳನ್ನು ಮಾಡಿಸುವುದು. ಇದರಿಂದ ರೋಗಗಳನ್ನು ಗುರುತಿಸಿ ಚಿಕಿತ್ಸೆ ಪಡೆಯಬಹುದು.
  2. – ಮಹಿಳೆಯರು ಆರೋಗ್ಯಕರವಾದ ಜೀವನಶೈಲಿಯನ್ನು ಹೊಂದಬೇಕು. ಅದಕ್ಕಾಗಿ ಪೌಷ್ಟಿಕ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ, ಆರೋಗ್ಯಕರವಾದ ನಿದ್ರೆಯ ದಿನಚರಿಯನ್ನು ಹೊಂದಬೇಕು. ಇದರಿಂದ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಉತ್ತಮವಾಗಿರುತ್ತದೆಯಂತೆ.
  3. – ಸಂತಾನೋತ್ಪತ್ತಿ ಭಾಗದಲ್ಲಿ ಯಾವುದೇ ರೀತಿಯ ಅಸ್ವಸ್ಥತೆ, ನೋವು, ಅಸಮಾನ್ಯ ವಿಸರ್ಜನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
  4. – ಧೂಮಪಾನ ಮತ್ತು ಮದ್ಯಪಾನ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಇವುಗಳನ್ನು ತ್ಯಜಿಸಿ.
  5. – ಸಂಗಾತಿಯೊಂದಿಗೆ ಉತ್ತಮ ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದಿ. ಇದರಿಂದ ಲೈಂಗಿಕವಾಗಿ ಹರಡುವಂತಹ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
  6. – ಸಂತಾನೋತ್ಪತ್ತಿ ವ್ಯವಸ್ಥೆಯ ತೊಂದರೆಗಳನ್ನು ತಡೆಯುವಂತಹ ಲಸಿಕೆಗಳನ್ನು ವೈದ್ಯರ ಸಲಹೆಯಿಂದ ಪಡೆಯಿರಿ.
  7. – ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ, ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿ. ಅವುಗಳನ್ನು 6 ಗಂಟೆಯೊಳಗೆ ಬದಲಾಯಿಸುತ್ತೀರಿ.

ಸಂತಾನೋತ್ಪತ್ತಿ ಸಮಸ್ಯೆಗೆ ಪ್ರಮುಖ ಕಾರಣಗಳು:

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Exit mobile version