Infertility Problem: ಇನ್ನೂ ಮಕ್ಕಳಾಗಿಲ್ಲವೆ? ಈ ಸರಳ ಸಲಹೆಗಳನ್ನು ಪಾಲಿಸಿ - Vistara News

ಲೈಫ್‌ಸ್ಟೈಲ್

Infertility Problem: ಇನ್ನೂ ಮಕ್ಕಳಾಗಿಲ್ಲವೆ? ಈ ಸರಳ ಸಲಹೆಗಳನ್ನು ಪಾಲಿಸಿ

Infertility Problem: ಸಂತಾನಕ್ಕೆ ಸಂಬಂಧಪಟ್ಟ ಪ್ರಶ್ನೆ ಬಂದಾಗ ಮೊದಲು ತಲೆಬಾಗಿಸುವುದೇ ಹೆಣ್ಣುಮಕ್ಕಳು. ಅಲ್ಲಿ ಗಂಡುಮಕ್ಕಳ ಸಮಸ್ಯೆ ಇದ್ದರೂ ಸಮಾಜ ಕೈ ತೋರಿಸುವುದು, ಬಂಜೆ ಎಂದು ಆಡಿಕೊಳ್ಳುವುದು ಹೆಣ್ಣನ್ನೇ. ಈ ಸಮಸ್ಯೆಗೆ ಕಾರಣ ಹಾಗೂ ಪಾಲಿಸಬೇಕಾದ ಕಾಳಜಿಯ ಬಗ್ಗೆ ತಜ್ಞರು ಇಲ್ಲಿ ತಿಳಿಸಿದ್ದಾರೆ. ಈ ಸರಳ ಸಲಹೆಗಳನ್ನು ಪಾಲಿಸಿ, ಮಕ್ಕಳಾಗದ ಸಮಸ್ಯೆಯಿಂದ ಪಾರಾಗಿ.

VISTARANEWS.COM


on

Reproductive Issues
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆಣ್ಣುಮಕ್ಕಳು ಮದುವೆಯಾದ ಕೆಲ ತಿಂಗಳ ಬಳಿಕ ಪ್ರತಿಯೊಬ್ಬರೂ ಗುಡ್ ನ್ಯೂಸ್ ಇಲ್ಲವೇ ಎಂದು ಕೇಳುತ್ತಾರೆ. ಈ ಸವಾಲನ್ನು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಎದುರಿಸುತ್ತಾರೆ. ಮದುವೆಯಾದ ಮೂರು ತಿಂಗಳೊಳಗೆ ಸಿಹಿ ಸುದ್ದಿ ನೀಡಿದರೆ ಎಲ್ಲರಿಗೂ ಸಂತೋಷ. ಆದರೆ ಮದುವೆಯಾಗಿ ವರುಷವಾದರೂ ಗರ್ಭ ಧರಿಸದಿದ್ದರೆ (Infertility Problem) ಜನರು ಆಕೆಯನ್ನು ತುಂಬಾ ತಾತ್ಸಾರದಿಂದ ನೋಡುತ್ತಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ ಆಕೆಯನ್ನು ಮುಂದಕ್ಕೆ ಬರಲು ಬಿಡುವುದಿಲ್ಲ. ಬಂಜೆ ಎಂಬ ಪಟ್ಟವನ್ನು ಕಟ್ಟುತ್ತಾರೆ. ಹಾಗಾಗಿ ಸಂತಾನ ಹೆಣ್ಣುಮಕ್ಕಳ ಜೀವನದಲ್ಲಿ ಅತಿ ಮುಖ್ಯ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಬಂಜೆತನದ ಸಮಸ್ಯೆಯಿಂದ ನರಳುತ್ತಿದ್ದಾರೆ. ಮಹಿಳೆಯ ಸಂತಾನೋತ್ಪತ್ತಿ (Reproductive Issues) ವ್ಯವಸ್ಥೆಯಲ್ಲಿ ಕಂಡುಬರುವಂತಹ ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ, ಗರ್ಭಕೋಶದಲ್ಲಿ ಗಡ್ಡೆಗಳ ಬೆಳವಣಿಗೆ, ಹಾರ್ಮೋನ್ ಅಸಮತೋಲನ ಮುಂತಾದವುಗಳಿಂದ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು ತಜ್ಞರು ತಿಳಿಸಿದ ಈ ಸಲಹೆಗಳನ್ನು ಪಾಲಿಸಿ.

  1. – ಮಹಿಳೆಯರು ನಿಯಮಿತವಾಗಿ ಸ್ಕ್ಯಾನಿಂಗ್ ಮತ್ತು ವೈದ್ಯರ ಬಳಿ ಚೆಕ್ ಅಪ್ ಗಳನ್ನು ಮಾಡಿಸುವುದು. ಇದರಿಂದ ರೋಗಗಳನ್ನು ಗುರುತಿಸಿ ಚಿಕಿತ್ಸೆ ಪಡೆಯಬಹುದು.
  2. – ಮಹಿಳೆಯರು ಆರೋಗ್ಯಕರವಾದ ಜೀವನಶೈಲಿಯನ್ನು ಹೊಂದಬೇಕು. ಅದಕ್ಕಾಗಿ ಪೌಷ್ಟಿಕ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ, ಆರೋಗ್ಯಕರವಾದ ನಿದ್ರೆಯ ದಿನಚರಿಯನ್ನು ಹೊಂದಬೇಕು. ಇದರಿಂದ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಉತ್ತಮವಾಗಿರುತ್ತದೆಯಂತೆ.
  3. – ಸಂತಾನೋತ್ಪತ್ತಿ ಭಾಗದಲ್ಲಿ ಯಾವುದೇ ರೀತಿಯ ಅಸ್ವಸ್ಥತೆ, ನೋವು, ಅಸಮಾನ್ಯ ವಿಸರ್ಜನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
  4. – ಧೂಮಪಾನ ಮತ್ತು ಮದ್ಯಪಾನ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಇವುಗಳನ್ನು ತ್ಯಜಿಸಿ.
  5. – ಸಂಗಾತಿಯೊಂದಿಗೆ ಉತ್ತಮ ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದಿ. ಇದರಿಂದ ಲೈಂಗಿಕವಾಗಿ ಹರಡುವಂತಹ ರೋಗಗಳಿಂದ ರಕ್ಷಿಸಿಕೊಳ್ಳಬಹುದು.
  6. – ಸಂತಾನೋತ್ಪತ್ತಿ ವ್ಯವಸ್ಥೆಯ ತೊಂದರೆಗಳನ್ನು ತಡೆಯುವಂತಹ ಲಸಿಕೆಗಳನ್ನು ವೈದ್ಯರ ಸಲಹೆಯಿಂದ ಪಡೆಯಿರಿ.
  7. – ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ, ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿ. ಅವುಗಳನ್ನು 6 ಗಂಟೆಯೊಳಗೆ ಬದಲಾಯಿಸುತ್ತೀರಿ.

ಸಂತಾನೋತ್ಪತ್ತಿ ಸಮಸ್ಯೆಗೆ ಪ್ರಮುಖ ಕಾರಣಗಳು:

  • ಹಾರ್ಮೋನ್ ಗಳ ಅಸಮತೋಲನ : ಹಾರ್ಮೋನ್ ಅಸಮತೋಲನದಿಂದ ಪಿಸಿಓಎಸ್ ಸಮಸ್ಯೆ ಉಂಟಾಗುತ್ತದೆ. ಇದು ಅನಿಯಮಿತ ಮುಟ್ಟಿನ ಸಮಸ್ಯೆ ಮತ್ತು ಫಲವತ್ತೆತಯ ಮೇಲೆ ಪರಿಣಾಮ ಬೀರುತ್ತದೆ.
  • ಸೋಂಕುಗಳು : ಲೈಂಗಿಕವಾಗಿ ಹರಡುವಂತಹ ಸೋಂಕುಗಳಾದ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಸೋಂಕುಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದರಿಂದ ಬಂಜೆತನದ ಸಮಸ್ಯೆ ಕಾಡುತ್ತದೆ.
  • ಅಸಹಜ ರಚನೆಗಳು : ಗರ್ಭಾಶಯದ ಒಳಗೆ ಹಾಗೂ ಹೊರಗಿನ ಭಾಗದಲ್ಲಿ ಗಡ್ಡೆಗಳು, ಫೈಬ್ರಾಯ್ಡ್ ಗಳು, ಮತ್ತು ಹಾನಿಕಾರಕ ಬೆಳವಣಿಗೆಗಳು, ಭಾರೀ ರಕ್ತಸ್ರಾವ ಫಲವತ್ತತೆ ಸಮಸ್ಯೆಗೆ ಕಾರಣವಾಗುತ್ತದೆ.
  • ಜೀವನಶೈಲಿಯ ಅಂಶಗಳು : ನೀವು ಧೂಮಪಾನ, ಮದ್ಯಪಾನ, ಒತ್ತಡ, ಮಾಲಿನ್ಯಕಾರಕ ಪರಿಸರವನ್ನುಹೊಂದಿದ್ದರೆ ಅದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

  • ಅನುವಂಶಿಕ ಪ್ರವೃತ್ತಿ : ಹೆಚ್ಚಿನ ಮಹಿಳೆಯರು ಅನುವಂಶಿಕವಾಗಿ ಬಂಜೆತನದ ಸಮಸ್ಯೆಗೆ ಒಳಗಾಗುತ್ತಾರೆ. ಮಹಿಳೆಯ ಕುಟುಂಬದಲ್ಲಿ ಪಿಸಿಓಎಸ್ ಸಮಸ್ಯೆ ಇದ್ದರೆ ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mobile Side Effect: ಅತಿಯಾದ ಮೊಬೈಲ್ ಬಳಕೆ; ಮಕ್ಕಳು ಕಿವುಡರಾಗುತ್ತಿದ್ದಾರೆ!

ಮೊಬೈಲ್ ಫೋನ್‌ಗಳು, ಟ್ಯಾಬ್‌ಗಳು, ಗೇಮಿಂಗ್ ಸಾಧನಗಳು ಮತ್ತು ಪರದೆಯ ಬಳಕೆಯಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಮಕ್ಕಳಲ್ಲಿ ವಿಳಂಬ ಚಟುವಟಿಕೆಗಳು ಮಾತ್ರವಲ್ಲದೇ 15 ರಿಂದ 30 ವರ್ಷದೊಳಗಿನವರಲ್ಲಿ ಶ್ರವಣ ದೋಷ ಹೆಚ್ಚಾಗಿ ಕಂಡು ಬರುತ್ತಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಈ ಕುರಿತು ನಡೆದ ಸಂಶೋಧನೆಯ ಮಾಹಿತಿ (Mobile Side Effect)ಇಲ್ಲಿದೆ.

VISTARANEWS.COM


on

By

Mobile Side Effect
Koo

ಕೋವಿಡ್ (covid) ಬಳಿಕ ಕಳೆದ ಮೂರು ನಾಲ್ಕು ವರ್ಷಗಳಿಂದ ಮಕ್ಕಳು (Mobile Side Effect) ತಡವಾಗಿ ಮಾತನಾಡುವ ಪ್ರಕರಣಗಳು, ಸೀಮಿತ ಭಾಷೆಯೊಂದಿಗೆ ಮತ್ತು ಸ್ವಲೀನತೆಯ (autism) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಮೊಬೈಲ್ ಫೋನ್ ಗಳ (phone) ಸುದೀರ್ಘ ಬಳಕೆಯಿಂದ ಶ್ರವಣ ದೋಷ (Hearing Disorder) ಉಂಟಾಗುತ್ತದೆ ಎಂದು ಚಂಡೀಗಢ (Chandigarh) ಪಿಜಿಐನ (PGI) ಓಟೋಲರಿಂಗೋಲಜಿ ವಿಭಾಗದ ಪ್ರೊ. ಸಂಜಯ್ ಮುಂಜಾಲ್ ತಿಳಿಸಿದ್ದಾರೆ.


ಪಿಜಿಐನ ಓಟೋಲರಿಂಗೋಲಜಿ (ಇಎನ್‌ಟಿ) ವಿಭಾಗವು ಐಸಿಎಂಆರ್‌ಗೆ ಸಲ್ಲಿಸಿದ ಹೊಸ ಸಂಶೋಧನೆ ವರದಿಯಲ್ಲಿ ಮೊಬೈಲ್ ಫೋನ್‌ಗಳು, ಟ್ಯಾಬ್‌ಗಳು, ಗೇಮಿಂಗ್ ಸಾಧನಗಳು ಮತ್ತು ಪರದೆಯ ಬಳಕೆಯಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಮಕ್ಕಳಲ್ಲಿ ವಿಳಂಬ ಚಟುವಟಿಕೆಗಳು ಮಾತ್ರವಲ್ಲದೇ 15 ರಿಂದ 30 ವರ್ಷದೊಳಗಿನವರಲ್ಲಿ ಶ್ರವಣ ದೋಷ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೇಳಿದೆ. ಕೋವಿಡ್ ಅನಂತರ ಮಕ್ಕಳಲ್ಲಿ ಏಕಮುಖ ಸಂವಹನ ಹೆಚ್ಚಾಗಿದೆ. ಮೊಬೈಲ್ ನಲ್ಲಿ ಆಟಗಳನ್ನು ಆಡುವುದು, ಫೋನ್‌ ಪರದೆಯನ್ನು ವೀಕ್ಷಿಸುವುದು, ಟ್ಯಾಬ್‌ಗಳಲ್ಲಿ ಏಕಮುಖ ಸಂವಹನ ನಡೆಸುವುದು ಅತ್ಯಧಿಕವಾಗಿದೆ. ಮಾತು ದ್ವಿಮುಖವಾಗಿರುತ್ತದೆ. ಇದನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸುತ್ತಿಲ್ಲ ಎಂದು ತಿಳಿಸಿದರು.

ಮಕ್ಕಳಿಗೆ ಪ್ರಾರಂಭದ ಎರಡು ವರ್ಷಗಳಲ್ಲಿ ಸಾಕಷ್ಟು ಸಾಮಾಜಿಕ ಸಂವಹನದ ಅವಶ್ಯಕವಿರುತ್ತದೆ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮದೇ ಆದ ಜಗತ್ತಿನಲ್ಲಿ ವಾಸಿಸುವುದು, ಕೇವಲ ನೋಡುವುದು ಮತ್ತು ಆಲಿಸುವುದನ್ನು ಮಾಡುತ್ತಾರೆ. ಆದರೆ ಗ್ಯಾಜೆಟ್ ಗಳು ಮೊದಲ ಎರಡು ವರ್ಷಗಳಲ್ಲಿ ಅಗತ್ಯವಿರುವ ಸಾಕಷ್ಟು ಪ್ರಚೋದನೆಯನ್ನು ಒದಗಿಸುವುದಿಲ್ಲ. ಅಂತಹ ಚಿಕ್ಕ ಮಕ್ಕಳು ಗಂಟೆಗಟ್ಟಲೆ ಗ್ಯಾಜೆಟ್‌ಗಳನ್ನು ಬಳಸುವುದರಿಂದ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಕಳೆದ ಒಂದು ತಿಂಗಳಲ್ಲಿ ಆಟಿಸಂ ನ ಅನೇಕ ಪ್ರಕರಣಗಳು ಕಂಡು ಬರುತ್ತಿದೆ. ಮಕ್ಕಳ ಮತ್ತು ಮನೋವೈದ್ಯಕೀಯ ವಿಭಾಗಗಳಿಂದ ಪ್ರಾಥಮಿಕ ರೋಗನಿರ್ಣಯದ ಅನಂತರ ಮಕ್ಕಳನ್ನು ಆಟಿಸಂ ನ ವಿಭಾಗಕ್ಕೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಡಾ. ಮುಂಜಾಲ್ ಹೇಳಿದ್ದಾರೆ.


ಆಟಿಸಂನ ಚಿಹ್ನೆಗಳು ಹೆಚ್ಚುತ್ತಿರುವುದು ಯಾಕೆ?


ಪೋಷಕರು ಆಟಿಸಂನ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಮಕ್ಕಳಿಗೆ ಒಂದರಿಂದ ಆರು ವರ್ಷಗಳ ನಡುವಿನ ವಯಸ್ಸು ಅತ್ಯಂತ ಮುಖ್ಯವಾಗಿದೆ.‌ ಈ ವಯಸ್ಸಿನ ಮಕ್ಕಳು ಸಂವಾದಿಸಲು ಹೆಚ್ಚು ಸನ್ನೆ ಮತ್ತು ಚಿಹ್ನೆಗಳನ್ನು ಬಳಸುತ್ತಿದ್ದಾರೆ. ಅವರ ಭಾವನೆಗಳನ್ನು ವ್ಯಕ್ತಪಡಿಸಲು ಮೂಲಭೂತ ಅಗತ್ಯಗಳನ್ನು ಸನ್ನೆಗಳ ಮೂಲಕ ಪ್ರಯತ್ನಿಸುತ್ತಾರೆ. ಇವರಲ್ಲಿ ಭಾಷೆಯ ಬಳಕೆಯ ಕೊರತೆಯಿದೆ ಎಂದರು.

ಕಡಿಮೆ ಮಾನವ ಸಂವಹನ, ಅವಿಭಕ್ತ ಕುಟುಂಬ ವ್ಯವಸ್ಥೆಯ ವಿಘಟನೆ ಹೀಗೆ ಈಗಿನ ಸಮಸ್ಯೆಗಳು ಹಲವಾರು ಮಕ್ಕಳ ಸರಿಯಾದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮಕ್ಕಳು ಯಾವುದೇ ಗ್ಯಾಜೆಟ್‌ಗೆ ಒಂದು ಗಂಟೆಗಿಂತ ಹೆಚ್ಚು ಅಥವಾ ಕಡಿಮೆ ಕಾಲ ಒಡ್ಡಿಕೊಳ್ಳಬಾರದು ಎಂದು ನಮಗೆ ತಿಳಿದಿದೆ ಆದರೂ ಮಕ್ಕಳ ಮೇಲೆ ಅವುಗಳ ಪರಿಣಾಮವನ್ನು ಉಂಟು ಮಾಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ವಾಕ್ ಪ್ರಚೋದನೆ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ನೀಡುತ್ತೇವೆ. ಇದಕ್ಕಾಗಿ ಪೂರ್ಣ ಪ್ರಮಾಣದ ಅಧ್ಯಯನವನ್ನು ಮಾಡಲು ಯೋಜಿಸುತ್ತಿದ್ದೇವೆ. ಈ ಕುರಿತು ಯೋಜನೆಯನ್ನು ಐಸಿಎಂಆರ್ ಗೆ ಸಲ್ಲಿಸಿದ್ದೇವೆ ಎಂದರು.

ಯಾರಲ್ಲಿ ಹೆಚ್ಚು?

ಇಲಾಖೆಯಲ್ಲಿ ಪ್ರತಿದಿನ ಎರಡು ಅಥವಾ ಮೂರು ಶ್ರವಣ ದೋಷದ ಪ್ರಕರಣಗಳು ಕಂಡುಬರುತ್ತಿವೆ. ಇವರಲ್ಲ 15ರಿಂದ 30 ವರ್ಷ ವಯಸ್ಸಿನವರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಗಂಟೆಗಳ ಕಾಲ ಮಾತನಾಡುವುದು, ಹೆಡ್‌ಫೋನ್‌ಗಳ ಅತಿಯಾದ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದರು.
ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವುದರಿಂದ ಶ್ರವಣದೋಷವು ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಶ್ರವಣ ಸಾಧನಗಳ ಮೇಲೆ ಅತಿಯಾದ ಅವಲಂಬನೆಯನ್ನು ತಡೆಯಬೇಕು ಎಂದು ಡಾ. ಮುಂಜಾಲ್ ವಿವರಿಸುತ್ತಾರೆ.


ಶ್ರವಣ ದೋಷಕ್ಕೆ ಕಾರಣ

ಹೆಡ್‌ಫೋನ್‌ಗಳ ಅತಿಯಾದ ದೈನಂದಿನ ಬಳಕೆಯು ಶ್ರವಣ ನಷ್ಟದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಏಕೆಂದರೆ ಇದು ನೇರವಾದ ಧ್ವನಿಯಾಗಿದೆ ಮತ್ತು ನಮ್ಮ ಕಿವಿಗಳು 85 ಡೆಸಿಬಲ್‌ಗಳ (dB) ವರೆಗಿನ ಶಬ್ದಗಳನ್ನು ಮಾತ್ರ ಕೇಳಲು ವಿನ್ಯಾಸಗೊಳಿಸಲಾಗಿದೆ, ಆದರೆ ಇಯರ್‌ಫೋನ್‌ಗಳು ಅಥವಾ ಹೆಡ್‌ಫೋನ್‌ಗಳು ಇದಕ್ಕಿಂತ ಹೆಚ್ಚಿನ ಶಬ್ದಗಳನ್ನು ಹೊರಸೂಸುತ್ತವೆ.

ಇದನ್ನೂ ಓದಿ; Tips For Healthy Skin: ಕಡಲೆಹಿಟ್ಟೆಂಬ ಶತಮಾನಗಳ ಹಳೆಯ ಸೌಂದರ್ಯವರ್ಧಕ!

ಏನು ಮಾಡಬಹುದು ?

ಡೆಸಿಬಲ್ ಹೆಚ್ಚಾದರೆ, ಬಳಕೆಯನ್ನು ಕಡಿಮೆ ಮಾಡಬೇಕು. ಅಂದರೆ 90 ಡಿಬಿ ನಾಲ್ಕು ಗಂಟೆಗಳಿಗಿಂತ ಹೆಚ್ಚಿರಬಾರದು. ಎರಡು ಗಂಟೆಗೆ 95 ಡಿಬಿ ಮತ್ತು ಒಂದು ಗಂಟೆಗೆ 100 ಡಿಬಿ ಇರಬಾರದು. ಈಗಿನ ಪೀಳಿಗೆಯು ಚಿಕ್ಕ ವಯಸ್ಸಿನಿಂದಲೇ ಗ್ಯಾಜೆಟ್‌ಗಳಿಗೆ ಒಡ್ಡಿಕೊಳ್ಳುವುದರಿಂದ ಹಾನಿಯು ಆರಂಭಿಕ ಹಂತದಲ್ಲಿ ಕಂಡುಬರುತ್ತದೆ ಮತ್ತು ಮೊದಲ ಲಕ್ಷಣವೆಂದರೆ ಕಿವಿ ಅಥವಾ ಟಿನ್ನಿಟಸ್‌ನಲ್ಲಿ ರಿಂಗಿಂಗ್ ಶಬ್ದ. ದೀರ್ಘ ಕರೆಗಳನ್ನು ತಪ್ಪಿಸಿ, ಸ್ಪೀಕರ್ ಫೋನ್ ಬಳಸಿ. ದೀರ್ಘಾವಧಿಯವರೆಗೆ ಜೋರಾಗಿ ಧ್ವನಿಯಲ್ಲಿ ಸಂಗೀತವನ್ನು ಕೇಳಬೇಡಿ ಮತ್ತು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ, ಯಾವುದೇ ರೋಗಲಕ್ಷಣದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ ಡಾ. ಮುಂಜಾಲ್ ತಿಳಿಸಿದ್ದಾರೆ.

Continue Reading

ಫ್ಯಾಷನ್

Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ನಾನಾ ಬಗೆಯ ಆರ್ಟಿಫೀಶಿಯಲ್‌ ಹೇರ್‌ (Wedding Season Hair Fashion) ಎಕ್ಸ್‌ಟೆನ್ಷನ್‌ಗಳು ಹೇರ್‌ ಸ್ಟೈಲಿಂಗ್‌ಗೆ ಎಂಟ್ರಿ ನೀಡಿವೆ. ಕೂದಲ ವಿನ್ಯಾಸಕ್ಕೆ ಸಾಥ್‌ ನೀಡುವ ಇವು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಆಗಮಿಸಿವೆ. ಅವು ಯಾವ್ಯುವು? ಹೇಗೆಲ್ಲಾ ಸಿಂಗರಿಸಿಕೊಳ್ಳಲು ಸಹಕಾರಿಯಾಗಿವೆ ಎಂಬುದರ ಬಗ್ಗೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Wedding Season Hair Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ, ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್‌ ಸೀಸನ್‌ನಲ್ಲಿ ನಾನಾ ಬಗೆಯ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್‌ಗಳು (Wedding Season Hair Fashion) ಗ್ರ್ಯಾಂಡ್‌ ಹೇರ್‌ ಸ್ಟೈಲಿಂಗ್‌ಗೆ ಎಂಟ್ರಿ ನೀಡಿವೆ. ಬ್ರೈಡಲ್‌ ಹೇರ್‌ಸ್ಟೈಲ್‌ಗೆ ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರ ಬಗೆಬಗೆಯ ಕೂದಲ ವಿನ್ಯಾಸಕ್ಕೆ ಸಾಥ್‌ ನೀಡುವ ಇವು, ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಆಗಮಿಸಿವೆ. ವೆಡ್ಡಿಂಗ್‌ ಸೀಸನ್‌ನ ಹೇರ್‌ಸ್ಟೈಲ್‌ ಟ್ರೆಂಡ್‌ನೊಳಗೆ ಸೇರಿಕೊಂಡಿವೆ. ಇದರೊಂದಿಗೆ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗೆ ನಾಂದಿ ಹಾಡಿವೆ. ಕ್ಯಾಶುವಲ್‌ ಹೇರ್‌ಸ್ಟೈಲ್‌ಗಳಿಗಿಂತ ಎಥ್ನಿಕ್‌ ಲುಕ್‌ ನೀಡುವ ಕೂದಲ ವಿನ್ಯಾಸದೊಳಗೆ ಸೇರಿಕೊಂಡಿವೆ.

Wedding Season Hair Fashion

ಎಥ್ನಿಕ್‌ ಹೇರ್‌ಸ್ಟೈಲ್‌ಗೆ ಸಾಥ್‌

“ಕೇವಲ ವೆಡ್ಡಿಂಗ್‌ ಸಮಾರಂಭಗಳಲ್ಲಿ ಮಾತ್ರವಲ್ಲ, ಯಾವುದೇ ಎಥ್ನಿಕ್‌ ಲುಕ್‌ ನೀಡುವಂತಹ ಶುಭ-ಸಮಾರಂಭಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಈ ಹೇರ್‌ ಎಕ್ಸ್‌ಟೆನ್ಷನ್‌ಗಳು ತಮ್ಮ ಜಾದೂ ಮೂಡಿಸಿವೆ. ನೋಡಲು ಸೆಲೆಬ್ರೆಟಿ ಲುಕ್‌ ನೀಡುವ ಇವು ಎಂತಹದ್ದೇ ಕೂದಲಿಗೂ ಮ್ಯಾಚ್‌ ಆಗುತ್ತವೆ. ಅದರಲ್ಲೂ ಟ್ರೆಡಿಷನಲ್‌ ಲುಕ್‌ ನೀಡುವಂತವು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ” ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಕೃತಕವಾದರೂ ನೈಜವಾಗಿ ಕಾಣುವಂತಹ ಮೆಟಿರಿಯಲ್‌ನಲ್ಲಿ ಬಂದಿವೆ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಹೇರ್‌ ಎಕ್ಸ್‌ ಟೆನ್ಷನ್ಸ್‌

ಶಾರ್ಟ್‌ ಕರ್ಲಿ, ಲಾಂಗ್‌ ಕರ್ಲಿ, ಸ್ಟ್ರೇಟ್‌, ಮೆಸ್ಸಿ ರಿಂಕಲ್ಸ್‌ ಹೇರ್‌, ರಿಂಗ್ಲೇಟ್ಸ್‌, ಬ್ರೈಡಲ್‌ ಲುಕ್ಸ್‌ ಸ್ಟೈಲ್‌ನವು, ನಾನಾ ಶೈಲಿಯ ಹೇರ್‌ ಬನ್‌ ಪ್ಲಸ್‌ ಎಕ್ಸ್‌ಟೆನ್ಷನ್‌, ಹಾಫ್‌ ಆಂಡ್‌ ಹಾಫ್‌ ಮೆಸ್ಸಿ ಕರ್ಲಿ ಡಿಸೈನ್‌ನವು. ಸಿಂಪಲ್‌ ಹಾಗೂ ಡಿಸೈನ್‌ ಹೇರ್‌ ಎಕ್ಸ್‌ಟೆನ್ಷನ್‌ಗಳು ಇಂದು ಫ್ಯಾನ್ಸಿ ಸ್ಟೋರ್‌ಗಳಲ್ಲಿ ಲಭ್ಯ. ಅಷ್ಟೇಕೆ! ಆನ್‌ಲೈನ್‌ ಫ್ಯಾನ್ಸಿ ಸ್ಟೋರ್‌ಗಳಲ್ಲೂ ಬಗೆಬಗೆಯಾಗಿರುವಂತವನ್ನು ಕಾಣಬಹುದು. ಇನ್ನು, ಬೆಲೆಯ ವಿಷಯಕ್ಕೆ ಬಂದಲ್ಲಿ, ಆಯಾ ಡಿಸೈನ್‌ಗೊಂಡಿರುವ ಹೇರ್‌ ಎಕ್ಸ್‌ಟೆನ್ಷನ್‌ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಒಂದೊಂದಕ್ಕೂ ಒಂದೊಂದು ಬೆಲೆ. ಉದಾಹರಣೆಗೆ., ಸಿಂಪಲ್‌ ರಿಂಕಲ್‌ ಲಾಂಗ್‌ ಹೇರ್‌ ಎಕ್ಸ್‌ಟೆನ್ಷನ್‌ಗೆ ಸರಿ ಸುಮಾರು 700 ರಿಂದ 800 ರೂ.ಗಳವರೆಗೂ ಬೆಲೆ ಇದೆ. ಹಾಫ್‌ ಆಂಡ್‌ ಹಾಫ್‌ ಹೇರ್‌ ಬನ್‌ ಫ್ರಿ ಕೂದಲಿನವಕ್ಕೆ ಡಿಸೈನ್‌ಗೆ ತಕ್ಕಂತೆ ಬೆಲೆ. ಇನ್ನು ಕ್ರಿಸ್ಟಲ್‌ ಹಾಗೂ ಪರ್ಲ್‌ ಹಾಕಿ ಡಿಸೈನ್‌ ಮಾಡಿದವಕ್ಕೆ ಹೆಚ್ಚು ಬೆಲೆ. ಕಡಿಮೆ ಎಂದರೂ 200 ರೂ. ಗಳಿಂದ ಆರಂಭವಾಗುತ್ತವೆ. ಹೆಚ್ಚೆಂದರೇ ಹತ್ತು ಸಾವಿರ ರೂ.ಗಳವರೆಗೂ ಇದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.

Wedding Season Hair Fashion

ಯಾರಿಗೆ ಯಾವುದು?

ಶಾರ್ಟ್‌ ಹೇರ್‌ಸ್ಟೈಲ್‌ನವರಿಗೆ ಆದಷ್ಟೂ ಲೈಟ್‌ವೈಟ್‌ ಇರುವಂತವನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೇ, ಇವು ಭಾರವಾಗಿದ್ದಲ್ಲಿ, ಕಳಚಿ ಬೀಳಬಹುದು ಹಾಗೂ ತಲೆನೋವು ಬರಬಹುದು. ಇನ್ನು ಉದ್ದ ಕೂದಲಿನವರು ಆದಷ್ಟೂ ಮೆಸ್ಸಿ ಹೇರ್‌ಸ್ಟೈಲ್‌ನವನ್ನು ಆಯ್ಕೆ ಮಾಡಬಹುದು. ಇವು ಕೂದಲನ್ನು ಹರಡಿದಂತೆ ಹಾಗೂ ದಪ್ಪಗಿರುವಂತೆ ಬಿಂಬಿಸುತ್ತವೆ. ಇನ್ನು ಮೀಡಿಯಂ ಸೈಝ್‌ ಕೂದಲು ಹೊಂದಿರುವವರು ಅವರ ಕೂದಲಿನ ವಾಲ್ಯೂಮ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು.

Wedding Season Hair Fashion

ಮದುವೆ ಸಮಾರಂಭಗಳಿಗಾದಲ್ಲಿ ಆಯ್ಕೆ ಹೀಗಿರಲಿ

  • ಕ್ರಿಸ್ಟಲ್‌ ಹಾಗೂ ಪರ್ಲ್‌ ಡಿಸೈನ್‌ನವನ್ನು ಸೆಲೆಕ್ಟ್‌ ಮಾಡಿ.
  • ಸುರುಳಿ ಸುತ್ತಿದಂತಿರುವವು ಇದೀಗ ಟ್ರೆಂಡ್‌ನಲ್ಲಿವೆ.
  • ಮಿಕ್ಸ್‌ ಮ್ಯಾಚ್‌ ಇರುವಂತಹ ಬ್ರೈಡಲ್‌ ಲುಕ್‌ ನೀಡುವ ಗ್ರ್ಯಾಂಡ್‌ ವಿನ್ಯಾಸದವನ್ನು ಧರಿಸಿ.
  • ಮೇಕಪ್‌ ಮುಗಿದ ನಂತರ ಹೇರ್‌ಸ್ಟೈಲ್‌ಗೆ ಸಿಕ್ಕಿಸಿ.
  • ನಿಮ್ಮ ಹೇರ್‌ ಕಲರ್‌ಗೆ ಮ್ಯಾಚ್‌ ಆಗುವಂತ ಹೇರ್‌ ಎಕ್ಸ್‌ಟೆನ್ಷನ್‌ ಸೆಲೆಕ್ಟ್‌ ಮಾಡಿ.

(ಲೇಖಕಿ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Continue Reading

ಕರ್ನಾಟಕ

MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

MTR: ಎಂಟಿಆರ್ ಕರುನಾಡು ಸ್ವಾದ ಕರ್ನಾಟಕ ವಿಶಿಷ್ಟ ಆಹಾರ ಉತ್ಸವಕ್ಕೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಚಾಲನೆ ದೊರೆಯಿತು. 100 ವರ್ಷಗಳ ಸಂಭ್ರಮಾಚರಣೆಯೊಂದಿಗೆ ಎಂಟಿಆರ್ ತನ್ನ ‌ಜನಪ್ರಿಯ ಆಹಾರ ಉತ್ಸವದ 3ನೇ ಆವೃತ್ತಿಯಾದ ಎಂಟಿಆರ್‌ ಕರುನಾಡು ಸ್ವಾದ ಎರಡು ದಿನಗಳ ಕರ್ನಾಟಕ ವಿಶಿಷ್ಟ ಆಹಾರ ಉತ್ಸವವನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

VISTARANEWS.COM


on

MTR Karunadu Svada food festival inauguration in Bengaluru
Koo

ಬೆಂಗಳೂರು: ಎಂಟಿಆರ್ ಕರುನಾಡು ಸ್ವಾದ ಕರ್ನಾಟಕ ವಿಶಿಷ್ಟ ಆಹಾರ ಉತ್ಸವಕ್ಕೆ ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ಚಾಲನೆ ದೊರೆಯಿತು. 100 ವರ್ಷಗಳ ಸಂಭ್ರಮಾಚರಣೆಯೊಂದಿಗೆ ಎಂಟಿಆರ್ (MTR) ತನ್ನ ‌ಜನಪ್ರಿಯ ಆಹಾರ ಉತ್ಸವದ 3ನೇ ಆವೃತ್ತಿಯಾದ ಎಂಟಿಆರ್‌ ಕರುನಾಡು ಸ್ವಾದ ಎರಡು ದಿನಗಳ ಕರ್ನಾಟಕ ವಿಶಿಷ್ಟ ಆಹಾರ ಉತ್ಸವವನ್ನು ಭಾರತದ ಮಾಜಿ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

ಆಹಾರ ಉತ್ಸವದ ವಿಶೇಷತೆ

ಎಂಟಿಆರ್‌ನ ಪಾಕಶಾಲೆಯ ಸೆಂಟರ್‌ ಆಫ್‌ ಎಕ್ಸಿಲೆನ್ಸ್‌ (Centre of Excellence) ನೇತೃತ್ವದಲ್ಲಿ, 50 ಕ್ಕೂ ಹೆಚ್ಚು ಗೃಹ ಬಾಣಸಿಗರು ಉತ್ತರ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕ, ಉಡುಪಿ ಮತ್ತು ಹಳೇ ಮೈಸೂರು ಸೇರಿದಂತೆ ಕರ್ನಾಟಕದ ಆರು ಪ್ರದೇಶಗಳ 100ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಇಂದು ಖರೀದಿಗೆ ಮುನ್ನ ದರದ ಜೊತೆಗೆ ಇದು ತಿಳಿದಿರಲಿ

ಉತ್ಸವದಲ್ಲಿ ವಿಶೇಷ ಪಾಕವಿಧಾನ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕವು 100 ಕ್ಕೂ ಹೆಚ್ಚು ಪಾಕವಿಧಾನಗಳ ಸಂಗ್ರಹಣೆಯನ್ನು ಹೊಂದಿದೆ. ಇದರಿಂದ ವಿಶೇಷ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದೆ.

ಈ ವೇಳೆ ಎಂಟಿಆರ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಮಾತನಾಡಿ, “ಎಂಟಿಆರ್ ಕರುನಾಡು ಸ್ವಾದವು” ಕರ್ನಾಟಕದ ಆಹಾರ ಮತ್ತು ಸಂಸ್ಕೃತಿಯ ಮೇಲಿರುವ ಪ್ರೀತಿಯಿಂದ ಸೃಷ್ಟಿಯಾಗಿದೆ. ಇದು ಕರ್ನಾಟಕದ ವೈವಿಧ್ಯಮಯ ರುಚಿಗಳ ಆಚರಣೆಯಾಗಿದೆ ಮತ್ತು ರಾಜ್ಯದ ಪಾಕಶಾಲೆಯ ಪರಂಪರೆಯನ್ನು ಎತ್ತಿಹಿಡಿಯುವ ಬದ್ಧತೆಯಾಗಿದೆ. ಈ ಅಮೂಲ್ಯವಾದ ಭಕ್ಷ್ಯಗಳ ಮೂಲಕ ಕರುನಾಡು ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Job Alert: 313 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಡಿಪ್ಲೋಮಾ ಓದಿದವರು ಇಂದೇ ಅಪ್ಲೈ ಮಾಡಿ

ಆಹಾರ ಉತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಡೊಳ್ಳು ಕುಣಿತದಂತಹ ಕರ್ನಾಟಕದ ನೃತ್ಯ ಪ್ರಕಾರಗಳನ್ನು ಆಯೋಜಿಸಿರುವುದು ವಿಶೇಷವಾಗಿದೆ.

Continue Reading

ಬೆಂಗಳೂರು

Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭಾರತ ಸೇರಿದಂತೆ ಎಲ್ಲೆಡೆ ಕೊರೊನಾ ವೈರಸ್‌ (Corona Virus) ಎದುರಿಸಲು ಪಡೆದಿದ್ದ ಕೋವಿಶೀಲ್ಡ್‌ ಲಸಿಕೆ (Covishield vaccine) ಕುರಿತು ಚರ್ಚೆಗಳು ನಡೆಯುತ್ತಿವೆ. ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ (blood clotting) ಅಡ್ಡ ಪರಿಣಾಮ ಕುರಿತು ಆತಂಕ ಹೆಚ್ಚಿದೆ. ಈ ಮಧ್ಯೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೋವಿಶೀಲ್ಡ್‌ನಿಂದ ಸ್ವಲ್ಪ ಪ್ರಮಾಣದ ಎಫೆಕ್ಟ್ ಆಗಿದೆ ಎಂದಿದ್ದಾರೆ.

VISTARANEWS.COM


on

By

Covishield Vaccine
ಸಾಂದರ್ಭಿಕ ಚಿತ್ರ
Koo

ಹುಬ್ಬಳ್ಳಿ: ಕೋವಿಡ್‌ ವಿರುದ್ಧ ಹೋರಾಡಲು ಭಾರತದಲ್ಲಿ ವ್ಯಾಪಕವಾಗಿ ಕೋವಿಶೀಲ್ಡ್ ಲಸಿಕೆ (Covishield vaccine) ಬಳಸಲಾಗಿತ್ತು. ಇದೀಗ ಇದರ ಸೈಡ್‌ ಎಫೆಕ್ಟ್‌ (Side Effect) ಕುರಿತು ಆತಂಕ ಹೆಚ್ಚಾಗುತ್ತಿದೆ. ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆಯ ಸೈಡ್‌ ಎಫೆಕ್ಟ್ ಆತಂಕ ಹೆಚ್ಚು ಮಾಡಿದ್ದು, ಈ ಬಗ್ಗೆ ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ್ದಾರೆ.

ಯಾವುದೇ ಔಷಧವನ್ನು ತೆಗೆದುಕೊಂಡಾಗ ಅಲ್ಪ ಪ್ರಮಾಣದ ಸೈಡ್‌ ಎಫೆಕ್ಟ್‌ ಇದ್ದೆ ಇರುತ್ತದೆ. ಆದರೆ ಈ ಕೋವಿಶೀಲ್ಡ್‌ನಿಂದ ಸ್ವಲ್ಪ ಪ್ರಮಾಣದ ಎಫೆಕ್ಟ್ ಆಗಿದೆ. ಹಾಗಂತ ಭಯ, ಆತಂಕಪಡುವ ಅವಶ್ಯಕತೆಯಿಲ್ಲ. ಏನೋ ಆಗಿ ಬಿಡುತ್ತೆ ಎಂಬ ಗಾಬರಿ ಪಡುವಂತಿಲ್ಲ. ಕೋವಿಶೀಲ್ಡ್ ತಯಾರಿಸುವ ಸಿರಮ್ ಇನ್ಸ್‌ಟಿಟ್ಯೂಟ್ ಬಗ್ಗೆ ಸಾಕಷ್ಟು‌ ಆರೋಪಗಳಿವೆ. ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಎಲೆಕ್ಟೋರಲ್ ಬಾಂಡ್ ಕೊಟ್ಟಿದ್ದಾರೆ. ಸಿರಮ್ ಬಗ್ಗೆ ಸಾಕಷ್ಟು ಕಾಂಟ್ರವರ್ಸಿಗಳಿವೆ, ಆದರೆ ಕೋವಿಶಿಲ್ಡ್‌ ಲಸಿಕೆ ಬಗ್ಗೆ ಆತಂಕ ಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇನ್ನೂ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಎಫೆಕ್ಟ್ ಏನೂ ಆಗಿಲ್ಲ. ವ್ಯಾಕ್ಸಿನ್ ಕೊಟ್ಟು ಎರಡು ವರ್ಷ ಅಯಿತು. ಕೋಟ್ಯಂತರ ಜನರಿಗೆ ಲಸಿಕೆ ಕೊಡಲಾಗಿದೆ, ನಾಲ್ಕೈದು ಪ್ರಕರಣಗಳಲ್ಲಿ ಸೈಡ್ ಎಫೆಕ್ಟ್ ಆಗಿದೆ. ವ್ಯಾಕ್ಸಿನ್‌ನಿಂದಲೇ ಆಗಿದೆಯಾ ಎನ್ನುವುದು ಕೂಡ ಇನ್ನೂ ಗೊತ್ತಾಗಬೇಕಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಏನೆಲ್ಲ ಮಾರ್ಗಸೂಚಿ ಬರುತ್ತದೆಯೋ ಅದನ್ನು ಪಾಲಿಸುತ್ತೇವೆ ಎಂದರು.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ!

ಕೊರೊನಾ ಸೋಂಕು (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿತ್ತು. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿತ್ತು. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿತ್ತು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ಹೇಳಿದ್ದರು. ಆದರೆ ಇದು ಅಪರೂಪದ ಸಂದರ್ಭಗಳಲ್ಲಿ ಆಗಬಹುದು ಎಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
HD Revanna
ಕರ್ನಾಟಕ5 hours ago

HD Revanna: ಛೇ, ಎಂಥ ಸ್ಥಿತಿ ಬಂತಪ್ಪ; ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

Road Accident
ಕರ್ನಾಟಕ5 hours ago

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Virat kohli
ಪ್ರಮುಖ ಸುದ್ದಿ5 hours ago

IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

IPL 2024
ಕ್ರೀಡೆ5 hours ago

IPL 2024 : ಅತಿ ವೇಗದ ಬೌಲರ್​ ಮಯಾಂಕ್ ಐಪಿಎಲ್​ನಿಂದ ಔಟ್​​

HD Revanna
ಕರ್ನಾಟಕ5 hours ago

HD Revanna: ಎಸ್‌ಐಟಿ ಸೆಲ್‌ನಲ್ಲೇ ‘ಮೊದಲ ರಾತ್ರಿ’ ಕಳೆಯಲಿರುವ ರೇವಣ್ಣ; ಬೆಳಗ್ಗೆ ಜಡ್ಜ್‌ ಎದುರು ಹಾಜರ್!

IPL 2024
ಕ್ರೀಡೆ5 hours ago

IPL 2024 : ಅಭಿಮಾನಿಗಳಿಗೆ ಸತಾಯಿಸಿ ಖುಷಿ ಕೊಟ್ಟ ಆರ್​ಸಿಬಿ, ಗುಜರಾತ್​ ವಿರುದ್ಧ 4 ವಿಕೆಟ್​ ಜಯ

Dingaleshwar Swamiji
ಕರ್ನಾಟಕ5 hours ago

Dingaleshwar Swamiji: ದ್ವೇಷ ಭಾಷಣ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್

Virat kohli
ಕ್ರೀಡೆ6 hours ago

Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

Prajwal Revanna Case
ಕರ್ನಾಟಕ6 hours ago

Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

Bangalore To Belagavi Train
ಕರ್ನಾಟಕ6 hours ago

Bangalore To Belagavi Train: ಮೇ 6ರಂದು ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ24 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌