ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯೂ ಕಾನ್ ಚಲನಚಿತ್ರೋತ್ಸವದಲ್ಲಿ (Sandalwood Actress At Cannes 2023) ನಮ್ಮ ಸ್ಯಾಂಡಲ್‌ವುಡ್ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಪಾಲ್ಗೊಂಡಿದ್ದಾರೆ. ಅಲ್ಲಿಂದಲೇ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಈಗಾಗಲೇ ದೂರದ ಫ್ರಾನ್ಸ್‌ನಲ್ಲಿ ಆರಂಭಗೊಂಡಿರುವ 76ನೇ ಕಾನ್ ಚಲನಚಿತ್ರೋತ್ಸವ ಮೇ 27ರವರೆಗೂ ನಡೆಯಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸ್ಯಾಂಡಲ್‌ವುಡ್‌ನಿಂದ ನಟಿ ಇತಿ ಆಚಾರ್ಯ ಪ್ರತಿನಿಧಿಸಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಇತಿ ಆಚಾರ್ಯ
ಇತಿ ಆಚಾರ್ಯ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿಯೂ ವಾಕ್ ಮಾಡಿದ್ದಾರೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದ ಗಾಯಕ ಮರ್ಲಿನ್ ಬಾಬಾಜೀ ಜೊತೆ ಆಲ್ಬಂವೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸಕ್ರಿಯವಾಗಿರುವ ಇತಿ, ಕಳೆದ ಸಾಲಿನಲ್ಲೂ ಕಾನ್ ಫಿಲ್ಮ್ ಫೆಸ್ಟೀವಲ್‌ನಲ್ಲಿ ಮೊದಲ ಬಾರಿಗೆ ಎಂಟ್ರಿ ನೀಡಿ ಸುದ್ದಿಯಾಗಿದ್ದರು. ಅವರು ಧರಿಸಿದ್ದ ಗೌನ್ ಕೂಡ ಬಾರಿ ಸುದ್ದಿಯಾಗಿತ್ತು. ಆಗಲೂ ಕೂಡ ಈ ಸಂತಸವನ್ನು ದೂರದ ಫ್ರಾನ್ಸ್‌ನಿಂದಲೇ ಹಂಚಿಕೊಂಡಿದ್ದರು.
ವಿಸ್ತಾರ ನ್ಯೂಸ್‌ಗೆ ಇತಿ ಆಚಾರ್ಯ ಪ್ರತಿಕ್ರಿಯೆ
“ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೊದಲ ಬಾರಿ ಭಾಗವಹಿಸಿದಾಗ ಎಷ್ಟು ಎಕ್ಸೈಟ್‌ಮೆಂಟ್ ಇತ್ತು ಅಷ್ಟೇ ಈಗಲೂ ಇದೆ. ಈ ಬಾರಿಯೂ ನಾನು ಭಾಗವಹಿಸುತ್ತಿರುವುದು ಮಾತ್ರವಲ್ಲ, ನನ್ನ ಸ್ಪೆಷಲ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದೇನೆ. ಫಿಲ್ಮ್ ಹಾಗೂ ಫ್ಯಾಷನ್ ಸಂಗಮವಾಗಿರುವ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದೇ ಒಂದು ಸಾಧನೆ. ಈ ಬಗ್ಗೆ ನನಗೆ ಖುಷಿಯಿದೆ” ಎಂದು ವಿಸ್ತಾರದೊಂದಿಗೆ ದೂರದ ಫ್ರಾನ್ಸ್‌ನಿಂದಲೇ ಪ್ರತಿಕ್ರಿಯಿಸಿದ್ದಾರೆ ನಟಿ ಇತಿ ಆಚಾರ್ಯ.
ಇತಿ ಆಚಾರ್ಯ ಬ್ಲಾಕ್ ಸ್ಲಿಟ್ ಗೌನ್
ಈ ಬಾರಿ ನಟಿ ಇತಿ ಆಚಾರ್ಯ ಧರಿಸಿರುವ ಸಿಂಗಲ್ ಫ್ರಿಂಝ್ ಶೋಲ್ಡರ್ ಬ್ಲಾಕ್ ಶೇಡ್‌ನ ಸ್ಲಿಟ್ ಗೌನ್ ನೋಡಲು ಸಿಂಪಲ್ ಆಗಿ ಕಂಡರೂ ಇದನ್ನು ಡಿಸೈನರ್ ಮಾಡಿರುವುದು ತಾರಿಕ್ ಎಡಿಝ್ ಬ್ರಾಂಡ್‌ನವರು. ಇನ್ನು ಸ್ಟೈಲಿಂಗ್ ಕ್ರೆಡಿಟ್ ನತಾಶಾ ಅವರಿಗೆ ಸಲ್ಲುತ್ತದೆ. ಮೇಕಪ್ ಲೊರಿಯಲ್ ಪ್ಯಾರಿಸ್ ಬ್ರಾಂಡ್‌ನದ್ದಾಗಿದ್ದು, ಪ್ಯಾರಿಸ್‌ನ ರುಮಾನ್ ದುರಂದ್ ಹೇರ್‌ಸ್ಟೈಲ್ ಮಾಡಿದ್ದಾರೆ. ಜ್ಯುವೆಲರಿ ಕಿಯಾ ಬ್ರಾಂಡ್‌ನದ್ದಾಗಿದೆ. ಒಟ್ಟಿನಲ್ಲಿ, ಬ್ಲಾಕ್ ಶೇಡ್‌ನಲ್ಲೂ ನಟಿ ಇತಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Poolside Party Fashion: ಸಮ್ಮರ್ ಪೂಲ್‌ಸೈಡ್ ಪಾರ್ಟಿಗೆ ಟ್ರೆಂಡಿಯಾಗಿರುವ 3 ವೆಸ್ಟರ್ನ್ ಶೈಲಿಯ ಔಟ್‌ಫಿಟ್‌ಗಳು