ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡಿಗರ ಹೃದಯ ಗೆದ್ದ ನಟಿ ನಿಮಿಕಾ ರತ್ನಾಕರ್ ಯಾರಿಗೆ ಗೊತ್ತಿಲ್ಲ! ಸುಕೋಮಲ ಕಾಂತಿಯನ್ನು ತನ್ನದಾಗಿಸಿಕೊಂಡಂತಿರುವ ಬ್ಯೂಟಿಫುಲ್ ನಿಮಿಕಾ ಸ್ಯಾಂಡಲ್‌ವುಡ್‌ನ ಫ್ಯಾಷನೆಬಲ್ ನಟಿಯರ ಲಿಸ್ಟ್‌ಗೆ ಸೇರುತ್ತಾರೆ. ಈಗಾಗಲೇ ಮುಂಬರುವ ಸೀಸನ್‌ನ ಫ್ಯಾಷನೆಬಲ್ ಉಡುಪನ್ನು ಧರಿಸಿ, ವೆಲ್‌ಕಮ್ ಹೇಳಿದ್ದಾರೆ.
ಅಂದಹಾಗೆ, “ಸ್ಟೈಲ್ ವಿತ್ ಕಂಫರ್ಟ್” ನಿಮಿಕಾ ರತ್ನಾಕರ್ ಅವರ ಎವರ್‌ಗ್ರೀನ್ ಫ್ಯಾಷನ್ ಮಂತ್ರ. ಯಾವುದೇ ಸೀಸನ್ ಫ್ಯಾಷನ್ ಆದರೂ ಸರಿಯೇ ಬ್ಯೂಟಿಫುಲ್ ಡಿಸೈನ್ ಜೊತೆಜೊತೆಗೆ ಸ್ಟೈಲಿಂಗ್ ಮಾಡಿದಾಗ ಕಂಫರ್ಟಬಲ್ ಆಗಿರುವುದು ಮುಖ್ಯ ಎಂದು ಅವರು ಹೇಳುತ್ತಾರೆ.
ಹೊಸ ಸೀಸನ್‌ಗೆ ಸ್ವಾಗತ ಕೋರುವ ಔಟ್‌ಫಿಟ್ಸ್
ವಿಂಟರ್‌ಸೀಸನ್ ಫ್ಯಾಷನ್ ಇನ್ನೇನೂ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೇನಿದ್ದರೂ ಬೇಸಿಗೆ ಹಾಗೂ ಸಮ್ಮರ್ ಸ್ಪ್ರಿಂಗ್ ಕಾಲದ ಆಗಮನ ಸನಿಹವಾಗಿದೆ. ಇದಕ್ಕೆ ಪೂರಕ ಎಂಬಂತೆ, ಸೆಲೆಬ್ರಿಟಿ ಡಿಸೈನರ್ ನೈನಾ ಅರೋರಾ ಅವರು ವಿನ್ಯಾಸಗೊಳಿಸಿರುವ ಮನಮೋಹಕ ಹೈ ಸ್ಲಿಟ್ ಕ್ರೇಪ್ ಮ್ಯಾಕ್ಸಿ ಶೈಲಿಯ ಫ್ರಾಕ್‌ನಲ್ಲಿ ಕಾಣಿಸಿಕೊಂಡಿರುವ ನಿಮಿಕಾ ನ್ಯಾಚುರಲ್ ಆಗಿ ಹೊಸ ಸೀಸನನ್ನು ಸ್ವಾಗತಿಸಿದ್ದಾರೆ. ಹೊಸ ಸೀಸನ್‌ನ ಉಲ್ಲಾಸವನ್ನು ಪ್ರತಿಬಿಂಬಿಸುವ ಶೇಡ್‌ಗಳನ್ನೊಳಗೊಂಡ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸೈನರ್ ನೈನಾ ಹೇಳುವುದೇನು?
ನಟಿ ನಿಮಿಕಾ ಅವರು ಧರಿಸಿರುವ ಮುಂಬರುವ ಸೀಸನ್ ಶೇಡ್‌ಗೆ ಸೇರುವ ಪಾಸ್ಟೆಲ್ ಕ್ರೇಪ್ ಪ್ರಿಂಟೆಡ್ ಫ್ಯಾಬ್ರಿಕ್‌ನ ವೆಸ್ಟ್ ಕಟ್‌ಔಟ್ ಮತ್ತು ಹೈ ಸ್ಲಿಟ್ ಮ್ಯಾಕ್ಸಿ ಡ್ರೆಸ್ ಮನಮೋಹಕವಾಗಿರುವುದು ಮಾತ್ರವಲ್ಲ, ಪಾಸಿಟಿವ್ ಎನರ್ಜಿಯ ಸಂಕೇತ. ಉಲ್ಲಾಸವನ್ನು ಹೆಚ್ಚಿಸುವಂತಹ ಶೇಡ್ಸ್ ಎನ್ನುತ್ತಾರೆ.
ನಿಮಿಕಾ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್
ಮೂಲತಃ ಮಂಗಳೂರಿನ ನಿಮಿಕಾ ರತ್ನಾಕರ್, ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಹಾಗೂ ಸಿಂಗರ್ ಕೂಡ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇಕೆ! ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿಯೂ ವಾಕ್ ಮಾಡಿದ್ದಾರೆ. ಒಂದಿಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಅತಿ ಹೆಚ್ಚು ಹೆಸರು ತಂದುಕೊಂಡಿದ್ದು ಕ್ರಾಂತಿ ಸಿನಿಮಾದ ಪುಷ್ಪವತಿ ಸಾಂಗ್‌ಗೆ ಹೆಜ್ಜೆಹಾಕಿದ್ದು. ಇನ್ನು ಆಗಾಗ್ಗೆ, ಸೋಷಿಯಲ್ ಮೀಡಿಯಾದಲ್ಲೂ ಅಷ್ಟೇ, ಸಾಕಷ್ಟು ಫ್ಯಾಷೆನಬಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ಫ್ಯಾಷನ್ ಪ್ರಿಯ ಅಭಿಮಾನಿಗಳನ್ನು ಸೆಳೆಯುತ್ತಲೇ ಇರುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)