Site icon Vistara News

Sandalwood Star Fashion: ಬದಲಾದ ನ್ಯಾಚುರಲ್‌ ರಾ ಲುಕ್‌ನಲ್ಲಿ ಸ್ಯಾಂಡಲ್‌ವುಡ್‌ ನಟ ಅಭಿಮನ್ಯು ಕಾಶಿನಾಥ್‌

Sandalwood Star Fashion

Sandalwood Star Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್‌ ನಟ ಅಭಿಮನ್ಯು ಕಾಶಿನಾಥ್‌, ನ್ಯಾಚುರಲ್‌ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿದ್ದ ಹಳೇ ಲುಕ್‌ನಿಂದ ಹೊರಬಂದಿದ್ದಾರೆ. ಹೌದು, ತಮ್ಮ ಸಿನಿಮಾಗಾಗಿ ಕಂಪ್ಲೀಟ್‌ ಇಮೇಜ್‌ ಬದಲಿಸಿಕೊಂಡಿದ್ದು, ರಫ್‌ ಹಾಗೂ ಟಫ್‌ ರಾ ಲುಕ್‌ನಲ್ಲಿ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಬದಲಾದ ಈ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಬಗ್ಗೆ ವಿಸ್ತಾರದೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಯಾವುದೇ ಸೆಲೆಬ್ರಿಟಿ ಸ್ಟೈಲಿಶ್‌ ಆಗಲಿ, ಗ್ರೂಮಿಂಗ್‌ ಎಕ್ಸ್‌ಪರ್ಟ್‌ಗಳನ್ನಾಗಲಿ ನೇಮಿಸಿಕೊಂಡಿಲ್ಲವಂತೆ! ಬದಲಿಗೆ ತಾವೇ ಖುದ್ದು ಆಸಕ್ತಿಯಿಂದ ಲುಕ್ಸ್‌ ಬದಲಿಸಿಕೊಂಡರಂತೆ.

ಅಂದಹಾಗೆ, ಅಭಿಮನ್ಯು, ಕನ್ನಡದ ಹಿರಿಯ ನಟ ದಿವಂಗತ ಕಾಶಿನಾಥ್‌ ಅವರ ಸುಪುತ್ರ, ಈಗಾಗಲೇ ಬಾಜಿ ಸೇರಿದಂತೆ ಒಂದೆರೆಡು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾದ ಮೂಲಕ ಮತ್ತೊಮ್ಮೆ ರೀ ಎಂಟ್ರಿ ನೀಡುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಲುಕ್ಸ್‌ನಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ತಮ್ಮ ಎಂದಿನ ಫ್ಯಾಷೆನೆಬಲ್‌ ಲುಕ್ಸ್‌ಗೆ ಇತಿಶ್ರೀ ಹಾಡಿ ರಾ ಲುಕ್‌ಗೆ ಸೈ ಎಂದಿದ್ದಾರೆ.

ರಾ ಲುಕ್‌ಗೂ ಉಂಟು ಹಿನ್ನೆಲೆ

“ನಾನು ಫ್ಯಾಷನ್‌ ಫ್ರೀಕ್‌ ಎನ್ನುವುದಕ್ಕಿಂತಲೂ ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತೇನೆ, ಅಷ್ಟೇ! ಖುಷಿಯ ವಿಚಾರ ಎಂದರೇ, ಇದೀಗ ನನ್ನ ರಾ ಲುಕ್‌ ಇತ್ತೀಚಿನ ಫ್ಯಾಷನ್‌ ಟ್ರೆಂಡ್‌ ಆಗಿರುವುದನ್ನು ಕಾಣಬಹುದು. ಆದರೆ, ನಾನು ಬೇಕಂತಲೇ ಈ ಲುಕ್‌ಗೆ ಮೊರೆ ಹೋಗಿಲ್ಲ! ಎಲ್ಲಿಗೋ ಪಯಣ ಯಾವುದೋ ದಾರಿ ಸಿನಿಮಾಗಾಗಿ ಲುಕ್ಕನ್ನು ಬದಲಿಸಿಕೊಳ್ಳಬೇಕಿತ್ತು. ಪಾತ್ರಕ್ಕಾಗಿ ಸುಮಾರು ಆರು ತಿಂಗಳ ಕಾಲ ತಲೆಗೂದಲು ಹಾಗೂ ಗಡ್ಡವನ್ನು ಕೊಂಚವೂ ಟ್ರಿಮ್‌ ಮಾಡದೇ ನ್ಯಾಚುರಲ್‌ ಆಗಿ ಬೆಳೆಸಿದೆ. ಟ್ರೀಮ್‌ ಕೂಡ ಮಾಡಿಸಲಿಲ್ಲ! ಯಾವ ಸ್ಟೈಲಿಸ್ಟ್‌ನ ಸಹಾಯ ಕೂಡ ತೆಗೆದುಕೊಳ್ಳಲಿಲ್ಲ. ನನಗೆ ಮ್ಯಾಚ್‌ ಆದ ಈ ಲುಕ್‌ ನನಗೆ ಹೊಸ ಇಮೇಜನ್ನೇ ನೀಡಿತು ಎನ್ನುತ್ತಾರೆ ಅಭಿಮನ್ಯು ಕಾಶಿನಾಥ್‌.

ಗ್ರೂಮಿಂಗ್‌ ಇಲ್ಲದೇ ಬದಲಾದ ಇಮೇಜ್‌

ಅಂದಹಾಗೆ, ಹೇರ್‌ ಹಾಗೂ ಬಿಯರ್ಡ್ ಸ್ಟೈಲ್‌ ಮಾತ್ರವಲ್ಲ, ನಟ ಅಭಿಮನ್ಯು ಅವರು ತಮ್ಮ ಇನ್ನಿತರೇ ಇಮೇಜ್‌ ಬದಲಾವಣೆಗೂ ಗ್ರೂಮಿಂಗ್‌ ಎಕ್ಸ್‌ಪಟ್ರ್ಸ್ ಸಹಾಯ ಕೂಡ ಪಡೆದಿಲ್ಲವಂತೆ. ಹಾಗೆಂದು ಅವರೇ ಹೇಳುತ್ತಾರೆ. ಇದರೊಂದಿಗೆ ಸುಮಾರು ೭ ಕೆಜಿಯಷ್ಟು ತೂಕವನ್ನು ಕೂಡ ಇಳಿಸಿಕೊಂಡು ಸ್ಲಿಮ್‌ ಕೂಡ ಆಗಿದ್ದಾರಂತೆ. ನಾನು ನನ್ನ ಲುಕ್‌ನ ಬದಲಾವಣೆಗೆ ಹೆಚ್ಚೆನೂ ಖರ್ಚು ಮಾಡಲಿಲ್ಲ. ನ್ಯಾಚುರಲ್‌ ಆಗಿಯೇ ಎಲ್ಲವನ್ನೂ ಬದಲಿಸಿಕೊಂಡೆ ಎಂದು ಬದಲಾದ ತಮ್ಮ ಲುಕ್‌ ಬಗ್ಗೆ ಅಭಿಮನ್ಯು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

ಅಭಿಮನ್ಯು ಕಾಶಿನಾಥ್‌ ಸಿಂಪಲ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

ಕಂಫರ್ಟಬಲ್‌ ಕ್ಲಾತಿಂಗ್‌ಗೆ ಮೊದಲ ಆದ್ಯತೆ.

ನ್ಯಾಚುರಲ್‌ ಲುಕ್ಸ್‌ಗೆ ಹೆಚ್ಚು ಮಾನ್ಯತೆ.

ಕಾಟನ್‌ ಫ್ಯಾಬ್ರಿಕ್‌ನ ಔಟ್‌ಫಿಟ್ಸ್‌ ಅಂದ್ರೆ ಇಷ್ಟ.

ಟ್ರೆಂಡ್‌ಗಿಂತ ಪರ್ಸನಲ್‌ ಚಾಯ್ಸ್‌ಗೆ ಹೆಚ್ಚು ಪ್ರಾಮುಖ್ಯತೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ:Sandalwood Star fashion: ಫ್ಯಾಷನ್‌ ಹಬ್‌ ಪ್ಯಾರಿಸ್‌ನಲ್ಲಿ ನಟಿ ಮೇಘನಾ ಗಾಂವ್ಕರ್‌ ಆಕರ್ಷಕ ಲೇಯರ್‌ ಲುಕ್‌

Exit mobile version