ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಸಂಕ್ರಾಂತಿ ಶಾಪಿಂಗ್ (Sankranti Shopping) ಆರಂಭವಾಗಿದೆ. ಇದು ಕೇವಲ ಧರಿಸುವ ಔಟ್‌ಫಿಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ! ಬದಲಿಗೆ ಹಬ್ಬಕ್ಕೆ ಪ್ರಮುಖವಾಗಿ ಅಗತ್ಯವಿರುವ ಎಳ್ಳು-ಬೆಲ್ಲ, ಬಗೆಬಗೆಯ ರೂಪದ ಸಕ್ಕರೆ ಅಚ್ಚಿನ ಇನ್‌ಸ್ಟಂಟ್ ಪ್ಯಾಕೆಟ್‌ಗಳು, ಅತಿಥಿಗಳಿಗೆ ಅಥವಾ ಗಿಫ್ಟ್ ನೀಡುವ ಡಿಸೈನರ್ ಪುಟ್ಟ ಪುಟ್ಟ ಬಾಕ್ಸ್‌ಗಳು, ಕುಡಿಕೆಗಳು ಸೇರಿದಂತೆ ಎಲ್ಲವೂ ಬಿಕರಿಯಾಗುತ್ತಿವೆ. ಇನ್ನು, ಮನೆಯನ್ನು ಆಕರ್ಷಕವಾಗಿ ಬಿಂಬಿಸುವ ಹಾಗೂ ಬಾಗಿಲನ್ನು ಸಿಂಗರಿಸುವ ವೆರೈಟಿ ಹೂವುಗಳ ತೋರಣ ಹಾಗೂ ಅಲಂಕಾರಿಕ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಇನ್‌ಸ್ಟಂಟ್ ಎಳ್ಳು-ಬೆಲ್ಲದ ಪ್ಯಾಕೆಟ್ಸ್
ಇಂದು ಮನೆಯಲ್ಲಿ ಸಂಪ್ರದಾಯಿಕ ರೀತಿಯಲ್ಲಿ ಎಳ್ಳು-ಬೆಲ್ಲವನ್ನು ಮಿಕ್ಸ್ ಮಾಡಿ ಸಿದ್ಧಪಡಿಸಲಾಗದಿದ್ದವರಿಗೆಂದೇ ಮಾರುಕಟ್ಟೆಯಲ್ಲಿ ಇನ್‌ಸ್ಟಂಟ್ ಪ್ಯಾಕೆಟ್‌ಗಳು ಲಭ್ಯ. ಕಾಲು, ಕೆ.ಜಿ. ಇಂದ ಹಿಡಿದು ಐದು ಕೆ.ಜಿಯ ಪ್ಯಾಕಿಂಗ್‌ವರೆಗೂ ರೆಡಿಮೇಡ್ ಪ್ಯಾಕೆಟ್‌ಗಳು ದೊರೆಯುತ್ತಿವೆ. ಜೀರಾ ಪೆಪ್ಪರ್‌ಮೆಂಟ್ ರಹಿತ-ಸಹಿತ, ಅರ್ಗಾನಿಕ್ ಬೆಲ್ಲ ಬಳಸಿದ/ಬಳಸದ ಹೀಗೆ ನಾನಾ ಬಗೆಯಲ್ಲಿ ದೊರೆಯುತ್ತಿವೆ.
ರೆಡಿಮೇಡ್ ಸಕ್ಕರೆ ಅಚ್ಚು
ನಾನಾ ಆಕಾರಗಳಲ್ಲಿ ರೆಡಿಮೇಡ್ ಸಕ್ಕರೆ ಅಚ್ಚುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ಬಾರಿ ಬಣ್ಣವಿಲ್ಲದ ಪ್ರಿಸರ್ವೇಟಿವ್ ಹಾಕದ ಶ್ವೇತ ವರ್ಣದ ಸಕ್ಕರೆ ಅಚ್ಚುಗಳು ಸಾಕಷ್ಟು ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ಗ್ರಾಹಕರು ಅಷ್ಟೇ! ಹೆಚ್ಚೆಚ್ಚು ಬಣ್ಣವಿಲ್ಲದ ಸಕ್ಕರೆ ಅಚ್ಚುಗಳನ್ನು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಮಾರಾಟಗಾರರು.
ಎಳ್ಳು ಬೀರಲು ಬಂತು ಪುಟ್ಟ ಪುಟ್ಟ ಬಾಕ್ಸ್
ಮೊದಲೆಲ್ಲಾ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಎಳ್ಳು ಬೀರುವುದು ಸಾಮಾನ್ಯವಾಗಿತ್ತು. ಆದರೆ, ಕೆಲವು ವರ್ಷಗಳಿಂದ ಪುಟ್ಟ ಪುಟ್ಟ ಡಿಸೈನರ್ ಬಾಕ್ಸ್‌ಗಳು ಇವುಗಳ ಸ್ಥಾನವನ್ನು ಆಗಮಿಸಿವೆ. ಇದಕ್ಕೆ ಪೂರಕ ಎಂಬಂತೆ ಊಹೆಗೂ ಮೀರಿದ ಬಗೆಬಗೆಯ ಟೈನಿ ಬಾಕ್ಸ್‌ಗಳಿಂದಿಡಿದು ಜಾರ್ ಸೈಜ್‌ವರೆಗಿನ ಬಾಕ್ಸ್‌ಗಳು ಬಂದಿವೆ. ಸೈಜ್‌ಗೆ ತಕ್ಕಂತೆ ದರ ನಿಗಧಿಯಾಗಿರುತ್ತದೆ.
ಅಲಂಕಾರಿಕ ತೋರಣ-ಹೂಗಳು
ಇನ್ನು ಹಬ್ಬದ ಸಂಭ್ರಮ ಹೆಚ್ಚಿಸುವ ನಾನಾ ಬಣ್ಣದ ಕಲರ್‌ಫುಲ್‌ನ ಆರ್ಟಿಫಿಶಿಯಲ್ ತೋರಣ-ಹೂಗಳು ಮನೆಗಳನ್ನು ಅಲಂಕರಿಸಲು ಸಜ್ಜಾಗಿವೆ. ಹಬ್ಬದ ಸಮಯದಲ್ಲಿ ನೈಜ ಹೂಗಳು ದುಬಾರಿಯಾಗುವ ಕಾರಣದಿಂದ ಇದೀಗ ಜನರು ಕೃತಕ ತೋರಣ ಹಾಗೂ ಹೂಗಳತ್ತ ವಾಲುತ್ತಿದ್ದಾರೆ. ಅಲ್ಲದೇ, ಇವನ್ನು ಪ್ರತಿ ಹಬ್ಬಕ್ಕೂ ಮರು ಬಳಕೆ ಮಾಡಬಹುದು ಎಂಬ ಮನೋಭಾವ ಎನ್ನುತ್ತಾರೆ ಮಾರಾಟಗಾರರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sankranti Fashion: ಸಂಕ್ರಾಂತಿ ಹಬ್ಬದ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಔಟ್‌ಫಿಟ್ಸ್