Site icon Vistara News

Star Saree Fashion: ಹಾಫ್‌ & ಹಾಫ್‌ ಸೀರೆಯ ರಿ ಎಂಟ್ರಿಗೆ ನಾಂದಿ ಹಾಡಿದ ಸಾರಾ ಅಲಿ ಖಾನ್‌

Star Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಾಫ್‌ & ಹಾಫ್‌ ಸೀರೆ ಇದೀಗ ನಟಿ ಸಾರಾ ಅಲಿ ಖಾನ್‌ ಧರಿಸಿದ ನಂತರ ರಿ ಎಂಟ್ರಿ ನೀಡಿದೆ. ಅದರಲ್ಲೂ ಹ್ಯಾಂಡ್‌ಲೂಮ್‌ ಹಾಫ್‌ & ಹಾಫ್‌ ಸೀರೆಗಳು (Star Saree Fashion), ಇದೀಗ ಸೀರೆ ಪ್ರಪಂಚದಲ್ಲಿ ಹಿಟ್‌ ಆಗಿದ್ದು, ಮರೆಯಾಗಿದ್ದ ಈ ಕಾನ್ಸೆಪ್ಟ್ ಮತ್ತೊಮ್ಮೆ ಈ ಸೀರೆಗಳಿಗೆ ಮರು ಹುಟ್ಟು ಕಲ್ಪಿಸಿದೆ.

ಸಾರಾ ಹಾಫ್ & ಹಾಫ್ ಸೀರೆ

ಅಂದಹಾಗೆ, ನಟಿ ಸಾರಾ ಅಲಿ ಖಾನ್‌ ಉಟ್ಟಿರುವ ಹ್ಯಾಂಡ್‌ಲೂಮ್‌ ಹಾಫ್‌ & ಹಾಫ್‌ ಸೀರೆ ವಿಶೇಷತೆ ಏನೆಂದರೆ, ಅರ್ಧ ಸೀರೆ ಮಧ್ಯಪ್ರದೇಶದ ಚಂದೇರಿಯ ನೇಕಾರರು ನೇಯ್ದಿದ್ದಾರೆ. ಇನ್ನುಳಿದ ಸ್ಟ್ರೈಪ್ಸ್‌ ಡಿಸೈನ್‌ನ ಹಾಫ್‌ ಸೀರೆಯನ್ನು ಗುಜರಾತಿನ ಟ್ರೆಡಿಷನಲ್‌ ಟೆಕ್ಸಟೈಲ್‌ ಆದ ಮಶ್ರು ಫ್ಯಾಬ್ರಿಕ್‌ನದ್ದಾಗಿದೆ. ಜತೆಗೆ ಜಮಾದಾನಿ ಸೀರೆಯ ಮಿಕ್ಸ್‌ ಇರುವ ಈ ಸೀರೆ, ಸಾರಾಗೆ ಹೊಸ ಲುಕ್‌ ನೀಡಿದೆ. ಅಮಿ ಪಟೇಲ್‌ ಸ್ಟೈಲಿಂಗ್‌ ಸಾಥ್‌ ನೀಡಿದೆ.

ಹ್ಯಾಂಡ್‌ಲೂಮ್‌ ಹಾಫ್‌ & ಹಾಫ್‌ ಸೀರೆ

ಇದುವರೆಗೂ ಕೇವಲ ಸಿಲ್ಕ್‌ ಹಾಗೂ ಇತರೇ ಫ್ಯಾಬ್ರಿಕ್‌ನಲ್ಲಿ ಮಾತ್ರ ದೊರಕುತ್ತಿದ್ದ ಹಾಫ್‌ & ಹಾಫ್‌ ಸೀರೆಗಳು ಇದೀಗ ಹ್ಯಾಂಡ್‌ಲೂಮ್‌ನಲ್ಲಿ ಸಿದ್ಧಗೊಂಡಿರುವುದು ಅಪರೂಪ. ಈ ಸೀರೆಯ ಸ್ಟೈಲಿಂಗ್‌ ಸೆಲೆಬ್ರೆಟಿ ಸ್ಟೈಲಿಸ್ಟ್ ಅಮಿ ಪಟೇಲ್‌ ಅವರದ್ದಾಗಿದೆ, ಇನ್ನು ಸೀರೆ ಪೆರು ಬ್ರಾಂಡ್‌ ಸಿದ್ಧಪಡಿಸಿದೆ. ಮಿಕ್ಸ್‌ ಮ್ಯಾಚ್‌ನಂತಿರುವ ಈ ಆಕರ್ಷಕ ಹ್ಯಾಂಡ್‌ಲೂಮ್‌ ಸೀರೆ ಇದೀಗ ಸೀರೆ ಲೋಕದಲ್ಲಿ ಸಂಚಲನ ಮೂಡಿಸಿ, ಸೀರೆ ಪ್ರೇಮಿಗಳನ್ನು ಸೆಳೆದಿದೆ.

ಏನಿದು ಹಾಫ್‌ & ಹಾಫ್‌ ಸೀರೆ?

ಸಿಂಪಲ್‌ ಆಗಿ ಹೇಳುವುದಾದಲ್ಲಿ ಅರ್ಧ ಸೀರೆ ಒಂದು ಡಿಸೈನ್‌ ಹಾಗೂ ಇನ್ನೊಂದರ್ಧ ಸೀರೆ ಮತ್ತೊಂದು ಡಿಸೈನ್‌ ಇರುವಂತಹ ಸೀರೆಗಳಿವು. ಸೆರಗು ಹಾಗೂ ಪಲ್ಲು ಒಂದು ಡಿಸೈನ್‌ ಹಾಗೂ ಕಲರ್‌ನದ್ದಾದರೇ, ನೆರಿಗೆ ಭಾಗ ಮತ್ತೊಂದು ಡಿಸೈನ್‌ ಹಾಗೂ ಶೇಡ್‌ ಹೊಂದಿರುತ್ತವೆ. ಇದು ನೋಡಲು ಹಾಫ್‌ ಸೀರೆಯಂತೆಯೂ ಕಾಣುತ್ತವೆ. ಹಾಗಾಗಿ ಇವನ್ನು ಹಾಫ್‌ & ಹಾಫ್ ಸೀರೆ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಾಧಿಕಾ. ಅವರ ಪ್ರಕಾರ, ಕೆಲವು ವರ್ಷಗಳ ಹಿಂದೆ ಈ ಸೀರೆ ಟ್ರೆಂಡ್‌ ಸಾಕಷ್ಟು ದಿನಗಳವರೆಗೂ ಇತ್ತು. ನಂತರ ಮರೆಯಾಗಿತ್ತು. ಅದರಲ್ಲೂ ಹ್ಯಾಂಡ್‌ಲೂಮ್‌ ಸೀರೆಗಳಲ್ಲಿ ಇದು ಕಂಡುಬರುವುದು ಅಪರೂಪ. ಇದೀಗ ಸಾರಾ ಉಟ್ಟ ನಂತರ ಈ ಡಿಸೈನ್‌ವು ಪ್ರಚಲಿತಕ್ಕೆ ಬರಲಿವೆ ಎನ್ನುತ್ತಾರೆ.

ಶುರುವಾಯ್ತು ಈ ಸೀರೆಯ ರಿಪ್ಲಿಕಾ

ಒಂದು ಸೀರೆ ಹಿಟ್‌ ಆಯಿತೆಂದರೇ ತಕ್ಷಣವೇ ಅದೇ ರೀತಿಯ ಸೀರೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತವೆ. ನೋಡಲು ಒರಿಜಿನಲ್‌ ಅದೇ ಬ್ರಾಂಡ್‌ನಂತೆ ಕಂಡರೂ ನಾನಾ ಫ್ಯಾಬ್ರಿಕ್‌ನಲ್ಲಿ ಇವು ದೊರಕುತ್ತವೆ. ಅಷ್ಟೇಕೆ! ಸೇಮ್‌ ಟು ಸೇಮ್‌ ಡಿಸೈನ್‌ನಲ್ಲೂ, ಕೈಗೆಟಕುವ ದರದಲ್ಲಿ ದೊರಕುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Show: ಕೇರಳದ ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ಕನ್ನಡತಿ ಚಂದನಾ ಶೋ ಸ್ಟಾಪರ್‌ ವಾಕ್‌

Exit mobile version