Site icon Vistara News

Saree Day 2023: ಜಾಗತಿಕ ಮಟ್ಟದಲ್ಲಿ ಹೆಚ್ಚಾಯ್ತು ಸೀರೆ ಕ್ರೇಜ್!

Saree Day 2023

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡಿಸೆಂಬರ್‌ 21 ಸೀರೆ ದಿನ (Saree day 2023)! ಅರೆರೆ., ಇದೇನಿದು ಸೀರೆಗೂ ಒಂದು ದಿನವೇ ಎಂದು ನೀವು ಅಚ್ಚರಿಪಡುವ ಹಾಗಿಲ್ಲ! ಎಲ್ಲದಕ್ಕೂ ಒಂದು ವಿಶೇಷ ದಿನವಿರುವಂತೆ ಇದಕ್ಕೂ ಒಂದು ದಿನ ನಿಗಧಿಪಡಿಸಲಾಗಿದೆ ಎನ್ನುತ್ತಾರೆ ಸೀರೆ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಇದೀಗ ಸೀರೆ ಎಂಬುದು ಕೇವಲ ನಮ್ಮ ರಾಷ್ಟ್ರದಲ್ಲಿರುವ ಮಹಿಳೆಯರಿಗೆ ಸೀಮಿತವಾಗಿಲ್ಲ! ಗಡಿ ದಾಟಿ ವಿದೇಶದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದೆ. ಮಹಿಳೆಯರು ಎಷ್ಟೇ ಮಾಡರ್ನ್ ಆದರೂ ಸರಿಯೇ, ಜನರೇಷನ್‌ ಬದಲಾದರೂ ಸರಿಯೇ, ಸೀರೆ ಮೇಲಿನ ಮೋಹ ಮಾತ್ರ ಡಿಮೆಯಾಗಿಲ್ಲ! ಧರಿಸುವ ಸ್ಟೈಲ್‌ ಬದಲಾಗಿರಬಹುದು ಅಷ್ಟೇ! ಎನ್ನುತ್ತಾರೆ.

Madhuri dixith, actress

ಸೆಲೆಬ್ರೆಟಿಗಳ ಸೀರೆ ಲವ್‌

ಬಾಲಿವುಡ್‌ ಮಾತ್ರವಲ್ಲ, ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ಸೆಲೆಬ್ರೆಟಿಗಳಿಗೂ ಸೀರೆ ಎಂದರೇ ಪ್ರೀತಿ. ಇದಕ್ಕೆ ಸಾಕ್ಷಿ ಎಂಬಂತೆ, ಸಾಕಷ್ಟು ಸಿನಿಮಾಗಳು ಹಾಗೂ ಧಾರಾವಾಹಿಗಳ ಹೆಸರಲ್ಲಿ ಸೀರೆಗಳು ಟ್ರೆಂಡ್‌ ಹುಟ್ಟು ಹಾಕಿರುವ ಉದಾಹರಣೆಗಳಿವೆ. ಅಷ್ಟೇಕೆ! ಇತ್ತೀಚೆಗೆ ಬಿಡುಗಡೆಗೊಂಡ ಸಿನಿಮಾವೊಂದರಲ್ಲಿ ಆಲಿಯಾ ಭಟ್‌ ಉಟ್ಟಿದ್ದ ಶಿಫಾನ್ ಸೀರೆಯಂತೂ ಟ್ರೆಂಡ್‌ ಹುಟ್ಟು ಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಇದೇ ರೀತಿ ಸಾಕಷ್ಟು ತಾರೆಯರು ಎಷ್ಟೇ ಗ್ಲಾಮರಸ್‌ ಉಡುಪಿನಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮದೇ ಆದ ಡಿಫರೆಂಟ್‌ ಸ್ಟೈಲ್‌ನಲ್ಲಿ ಆಗಾಗ್ಗೆ ತಮ್ಮ ಸೀರೆ ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಎವರ್‌ಗ್ರೀನ್‌ ಫ್ಯಾಷನ್‌

ಸೀರೆ ಎವರ್‌ಗ್ರೀನ್‌ ಫ್ಯಾಷನ್‌ ಎನ್ನುತ್ತಾರೆ ಬಾಲಿವುಡ್‌ ತಾರೆಯರಾದ ಮಾಧುರಿ ದೀಕ್ಷಿತ್‌, ಭಾಗ್ಯ ಶ್ರೀ, ಪೂಜಾ ಹೆಗ್ಡೆ, ಮಧೂ ಶಾ, ವಿದ್ಯಾ ಬಾಲನ್‌, ಕಾಜೋಲ್‌ ಹಾಗೂ ಸೋನಂ. ಇನ್ನು ಸ್ಯಾಂಡಲ್ವುಡ್‌ ತಾರೆಯರಾದ ಶೃತಿ, ಅನು ಪ್ರಭಾಕರ್‌, ಪ್ರೇಮರಂತಹ ಸೀನಿಯರ್‌ ನಟಿಯರು ಸದಾ ಸೀರೆಯಲ್ಲೆ ಕಾಣಿಸಿಕೊಳ್ಳುತ್ತಾರೆ. ತಮ್ಮದೇ ಆದ ಶೈಲಿಯಲ್ಲಿ ಸೀರೆಗಳನ್ನು ಉಡುವುದರ ಮೂಲಕ ತಮ್ಮ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ. ಇನ್ನು ಈಗಿನ ನಟಿಯರಾದ ರಚಿತಾ ರಾಮ್‌. ಸಪ್ತಮಿ ಗೌಡ, ಶ್ವೇತಾ ಶ್ರೀವಾತ್ಸವ್‌, ಅಶಿಕಾ ಸಮಾರಂಭಗಳಲ್ಲಿ ಡಿಸೈನರ್‌ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಧಾರಾವಾಹಿಗಳಲ್ಲಿ ನಟಿಸುವ ತಾರೆಯರ ಬಗ್ಗೆ ಹೇಳುವುದೇ ಬೇಡ! ಬಹುತೇಕ ಎಲ್ಲಾ ನಟಿಯರು ಸೀರೆಗಳಲ್ಲೇ ಕಾಣಿಸಿಕೊಳ್ಳುತ್ತಾರೆ. ಇವರನ್ನು ನೋಡಿದ ಸಾಮಾನ್ಯ ಮಹಿಳಾ ವೀಕ್ಷಕರು ಅವರು ಧರಿಸಿದಂತಹ ಸೀರೆಗಳನ್ನು ಅಂಗಡಿಗಳಲ್ಲಿ ಕೇಳಿ ಕೊಳ್ಳುತ್ತಾರೆ ಎನ್ನುತ್ತಾರೆ ಸೀರೆ ಶೋ ರೂಮ್‌ವೊಂದರ ಮಾಲೀಕರು.

ಮಹಿಳೆಯರ ಸೀರೆ ಪ್ರೀತಿ

ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರು ಮಿಕ್ಸ್‌ ಮ್ಯಾಚ್‌ ಸೀರೆ ಸ್ಟೈಲಿಂಗ್‌ ಮಾಡಿದರೇ, ಜೆನ್‌ ಜಿ ಹುಡುಗಿಯರು ಪ್ರಯೋಗಾತ್ಮಕ ಸೀರೆಗಳ ಸ್ಟೈಲಿಂಗ್‌ ಮಾಡುವುದು ಇತ್ತೀಚೆಗೆ ಕಾಮನ್‌ ಆಗಿದೆ. ಒಟ್ಟಿನಲ್ಲಿ, ಸಮೀಕ್ಷೆಯೊಂದರ ಪ್ರಕಾರ, ಇತ್ತೀಚೆಗೆ ಸೀರೆ ಕೊಳ್ಳುವರ ಸಂಖ್ಯೆ ಮೊದಲಿಗಿಂತ ಜಾಸ್ತಿಯಾಗಿದೆಯಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sheer Puff Sleeve Blouse Fashion: ಮಹಿಳೆಯರ ಡಿಸೈನರ್‌ ಸೀರೆಗೆ ಬಂತು ಪಾರದರ್ಶಕ ಶೀರ್‌ ಪಫ್‌ ಬ್ಲೌಸ್‌ ಫ್ಯಾಷನ್‌!

Exit mobile version