ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಜ್ಯದ ನಾನಾ ಕಡೆಗಳಲ್ಲಿ ಉಡುವ ವೈವಿಧ್ಯಮಯ ಶೈಲಿಯ ಸೀರೆಗಳನ್ನು ಒಂದೇ ವೇದಿಕೆ ಮೇಲೆ ನೋಡುವ ಅವಕಾಶ ಪ್ರೇಕ್ಷಕರದ್ದಾಗಿತ್ತು. ನಮ್ಮ ಸಂಸ್ಕೃತಿಗೆ ತಕ್ಕಂತೆ ಆಕರ್ಷಕ ಸಾಂಪ್ರದಾಯಿಕ ಆಭರಣಗಳೊಂದಿಗೆ ಟ್ರೆಡಿಷನಲ್ ಆಗಿ ಸೀರೆ ಉಟ್ಟ ಮಾಟಡೆಲ್‌ಗಳು ಕನ್ನಡ ಹಾಡಿಗೆ ಹೆಜ್ಜೆ ಹಾಕುತ್ತಾ ರ‍್ಯಾಂಪ್ ವಾಕ್ ಮಾಡಿದರು. ವಿಸ್ತಾರ ನ್ಯೂಸ್ ವರ್ಷದ ಸಂಭ್ರಮದಲ್ಲಿ (Vistara Kannada Sambhrama) ಪ್ರತಿಭಾ ಸಂಶಿಮಠ್ ನೇತೃತ್ವದಲ್ಲಿ ನಡೆದ ಮಿಸೆಸ್ ಇಂಡಿಯಾ ಟೀಮ್‌ನ ಸೀರೆ ಸೊಬಗು ಫ್ಯಾಷನ್ ಶೋನಲ್ಲಿ ನಮ್ಮ ರಾಜ್ಯದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಂತೆ ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರ ಮನ ಗೆದ್ದರು.
ಕೊಡಗು, ಉತ್ತರ ಕರ್ನಾಟಕ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ನಾನಾ ಕಡೆಯಲ್ಲಿ ಮಹಿಳೆಯರು ಉಡುವ ಶೈಲಿಯಲ್ಲೆ ಸೀರೆ ಉಟ್ಟು ವ್ಯಯಾರದಿಂದ ಬಳುಕುತ್ತಾ ವೇದಿಕೆ ಮೇಲೆ ನಡೆದದ್ದು, ಕನ್ನಡ ಸಂಭ್ರಮದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು.
ನೃತ್ಯದೊಂದಿಗೆ ಶೋ ಆರಂಭ
ಮೊದಲಿಗೆ ನೃತ್ಯದೊಂದಿಗೆ ಆರಂಭವಾದ ತಂಡದ ಸೀರೆ ಸೊಬಗು ಶೋನಲ್ಲಿ ಕನ್ನಡ ಹಾಡಿಗೆ ರ‍್ಯಾಂಪ್ ವಾಕ್ ಮೂಲಕವೇ ವಿಭಿನ್ನವಾಗಿ ಸಂಸ ಬಯಲು ರಂಗ ಮಂದಿರದಲ್ಲಿ ಹೆಜ್ಜೆ ಹಾಕಲಾಯಿತು. ಮಾಡೆಲ್‌ಗಳು ಕನ್ನಡ ಹಾಡಿನ ತಾಳಕ್ಕೆ ತಕ್ಕಂತೆ ಮಿಕ್ಸ್ ಮ್ಯಾಚ್ ಮಾಡುತ್ತಾ ನರ್ತಿಸಿದ್ದು ಕೆಲಕಾಲ ಪ್ರೇಕ್ಷಕರನ್ನು ಸೆಳೆಯಿತು. ಮುಖ್ಯ ವೇದಿಕೆಯಲ್ಲೂ ರ‍್ಯಾಂಪ್ ಶೋ ಮನಸೆಳೆಯಿತು.
ನಟಿ ರಾಗಿಣಿ ದ್ವಿವೇದಿ ಫ್ಯಾಷನ್ ಟಾಕ್
ನಟಿ ರಾಗಿಣಿ ದ್ವಿವೇದಿ ಸೀರೆ ಸೊಬಗಿನ ಬಗ್ಗೆ ಪ್ರಶಂಸೆ ಮಾಡುತ್ತಾ, ಇದೊಂದು ಉತ್ತಮ ಶೋ ಎಂದು ಹಾಡಿ ಹೊಗಳಿದರು. ಕನ್ನಡ ಸಂಭ್ರಮಕ್ಕೆ ಇದೊಂದು ಕೊಡುಗೆಯಾಗಿ ಎಂದು ಹೇಳಿದರು. ತಾವು ಗೌನ್‌ನಲ್ಲಿದ್ದರೂ ಕೂಡ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ಸೆಳೆದರು.
ಹೆಜ್ಜೆ ಹಾಕಿದ ಮಾಡೆಲ್‌ಗಳು
ಮಿಸೆಸ್ ಇಂಡಿಯಾ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ್ ನೇತೃತ್ವದಲ್ಲಿ ಮಾಡೆಲ್‌ಗಳಾದ ಕೃತಿಕಾ, ಸ್ಮಿತಾ ಪ್ರಕಾಶ್, ಅನುಷಾ, ಸರೆರಿಯಾ, ಮಲ್ಲಮ್ಮ ಗಾಣಗಿ, ಮಮತಾ ಗೌಡ, ಸೌಮ್ಯ ದೀಪಕ್, ಸನ್ಮತಿ ರಕ್ಷೀತ್, ವಿಭಾ ಸಿಂಹಾ, ಹೃತ್ಮ ಶೆಟ್ಟಿ, ನಮ್ರತಾ ಜೈನ್, ಪ್ರತಿಭಾ, ಮಾಧುರಿ ಶಾಸ್ತ್ರೀ, ದಿವ್ಯಾ ಶೆಟ್ಟಿ, ವಿಜಯಲಕ್ಷ್ಮಿ ಕೋಟೆ, ನೀತಾ, ಭಾರತಿ ಗೋಪಾಲ್, ಅಕ್ಷತಾ ಶೆಟ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇವರಿಗೆಲ್ಲಾ ಮೇಕಪ್ ಹಾಗೂ ಸ್ಟೈಲಿಂಗನ್ನು ಮಂಜುನಾಥ್ ನೇತೃತ್ವದ ಕೃಷ್ಣ ಸ್ಟುಡಿಯೋ ಟೀಮ್ ವಹಿಸಿಕೊಂಡಿತ್ತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Fashion: ನಿಮ್ಮ ಹಳೆ ಸೀರೆಗೆ ನೀಡಿ ನಯಾ ಲುಕ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ