ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಳೆ ಸೀರೆಗೆ ಹೊಸ ಲುಕ್ ನೀಡಿ S(aree Fashion), ಉಡಿ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು. ಹೌದು. ಹಳೆಯ ಸೀರೆಗೆ ಹೇಗೆಲ್ಲ ಹೊಸ ಲುಕ್ ನೀಡಿ ಉಡಬಹುದು. ಡಿಫರೆಂಟಾಗಿ ಬಿಂಬಿಸಬಹುದು ಎಂಬುದರ ಬಗ್ಗೆ ಒಂದಿಷ್ಟು ಸಿಂಪಲ್ ಐಡಿಯಾ ನೀಡಿದ್ದಾರೆ. ಫಾಲೋ ಮಾಡಿ ನೋಡಿ ಎನ್ನುತ್ತಾರೆ.
“ಅಮ್ಮ ಉಡುವ ಓಲ್ಡ್ ಫ್ಯಾಷನ್‌ನ ಸೀರೆಗಳಿಗೂ ಇದೀಗ ಕಾಲ ಬಂದಿದೆ. ಹೌದು. ಕಾಲೇಜಿಗೆ ಹೋಗುವ ಹುಡುಗಿಯರು, ಕಚೇರಿಗೆ ತೆರಳುವ ಮಾನಿನಿಯರು ಇವನ್ನು ಪುನಃ ಉಡಲಾರಂಭಿಸಿದ್ದಾರೆ. ಇವಕ್ಕೆ ಹೊಸ ಶೈಲಿಯ ಡ್ರೇಪಿಂಗ್ ಅಥವಾ ಡಿಸೈನರ್‌ವೇರ್ ರೂಪ ನೀಡಿದ್ದಾರೆ. ಒಟ್ಟಿನಲ್ಲಿ, ಹಳೆಯ ಸೀರೆಗೆ ಹೊಸ ಟಚ್ ದೊರಕಿದೆ”ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ. ಅವರ ಪ್ರಕಾರ, ವಾರ್ಡ್ರೋಬ್‌ನಲ್ಲಿ ಮೂಲೆಯಲ್ಲಿರುವ ಸೀರೆಯು, ಡಿಫರೆಂಟಾಗಿ ಬಿಂಬಿಸಿದಲ್ಲಿ ಹೊಸದರಂತೆ ಕಾಣುವುದು ಎನ್ನುತ್ತಾರೆ.
ಉಡುವ ಸ್ಟೈಲ್ ಬದಲಾಯಿಸಿ
ಹಳೆಯ ಕಾಲದ ಸೀರೆಗಳನ್ನು ಹೊಸ ಶೈಲಿಯಲ್ಲಿ ಉಡಿ. ಸಾಮಾನ್ಯವಾಗಿ ಉಡುವ ಸ್ಟೈಲ್ ಬದಲಾಯಿಸಿ. ಹೊಸ ರೀತಿಯಲ್ಲಿಸುತ್ತಿಕೊಳ್ಳಿ. ಇದು ನೋಡಲು ವಿಭಿನ್ನವಾಗಿ ಕಾಣುತ್ತದೆ.
ಇಂಡೋ-ವೆಸ್ಟರ್ನ್ ಲುಕ್ ನೀಡಿ
ಹಳೆಯ ಸೀರೆಯೊಂದಿಗೆ ರೆಡಿಮೇಡ್ ಕ್ರಾಪ್ ಟಾಪ್‌ಗಳನ್ನು ಧರಿಸಿ ಅದಕ್ಕೆ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು. ಅದರಲ್ಲೂ ಟಿನೇಜ್ ಹಾಗೂ ಕಾರ್ಪೋರೇಟ್ ಕ್ಷೇತ್ರದವರಿಗೆ ಇದು ಹೇಳಿ ಮಾಡಿಸಿದ ಸೀರೆ ಸ್ಟೈಲ್ ಸ್ಟೇಟ್‌ಮೆಂಟ್ ಎನ್ನಬಹುದು.
ಡಿಸೈನ್ ಬದಲಿಸಿ
ಹಳೆಯ ಸೀರೆಯ ಡಿಸೈನ್‌ಗೆ ಒಂದಿಷ್ಟು ಹೊಸ ಟಚ್ ನೀಡಬಹುದು. ಅದಕ್ಕೊಂದಿಷ್ಟು ಡಿಸೈನ್ ಮಾಡಿಬಹುದು. ಇಲ್ಲವೇ ನೀವೇ ಖುದ್ದುಸೀರೆಯ ಒಡಲಿಗೆ ಹೊಂದುವಂತಹ ಹ್ಯಾಂಡ್‌ವರ್ಕ್ ಮಾಡಬಹುದು. ಇಲ್ಲವೇ ಬಾರ್ಡರ್‌ಗೆ ಇದೀಗ ರೆಡಿಯಾಗಿ ದೊರಕುವ ಕ್ರಿಸ್ಟಲ್ ಅಥವಾ ಕುಂದನ್ ಸ್ಟಿಕ್ಕರ್ಸ್ ಅಂಟಿಸಿ ನ್ಯೂ ಲುಕ್ ನೀಡಬಹುದು.
ಹಳೆಯ ಸೀರೆಗೆ ಆಕ್ಸೆಸರೀಸ್ ಮ್ಯಾಚಿಂಗ್ ಡಿಫರೆಂಟಾಗಿರಲಿ
ಹಳೆಯ ಸೀರೆಗಳಿಗೆ ಆದಷ್ಟೂ ಟ್ರೈಬಲ್ ಹಾಗೂ ಆ್ಯಂಟಿಕ್ ಡಿಸೈನ್‌ನ ಆಕ್ಸೆಸರೀಸ್ ಸೂಟ್ ಆಗುತ್ತವೆ. ಜತೆಗೆ ಬ್ಲಾಕ್ ಹಾಗೂ ವೈಟ್ ಮೆಟಲ್‌ನ ಆಕ್ಸೆಸರೀಸ್ ಹೊಂದುತ್ತವೆ. ಸೀರೆಯ ಬಾರ್ಡರ್ ಹಾಗೂ ಚೆಕ್ಸ್ ಅಥವಾ ಡಿಸೈನ್ ನೋಡಿಕೊಂಡು ಆಕ್ಸೆಸರೀಸ್ ಧರಿಸುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟ್ ರೀಟಾ.
ಹಳೆ ಸೀರೆಗೆ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು?
- ಟೀನೇಜ್ ಹುಡುಗಿಯರಾದಲ್ಲಿ ಆದಷ್ಟೂ ಟ್ರೆಂಡಿ ಆಕ್ಸೆಸರೀಸ್ ಧರಿಸಿ.
- ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು.
- ರೆಟ್ರೊ ಮೇಕಪ್ ಬದಲು ಕಂಟೆಂಪರರಿ ಲುಕ್ ನೀಡಿ.
- ಹೇರ್ಸ್ಟೈಲ್ ನಲ್ಲಿ ಹೊಸತನವಿರಲಿ.
- ಡ್ರೇಪಿಂಗ್ ಕಂಪ್ಲೀಟ್ ಡಿಫರೆಂಟಾಗಿರಲಿ.
- ಯೂಟ್ಯೂಬ್ನಲ್ಲಿ ಡ್ರೇಪಿಂಗ್ ಟ್ಯೂಷನ್ ನೋಡಿ ಕಲಿತು ಉಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sequence Blouse Fashion: ಸೆಲೆಬ್ರೆಟಿ ಲುಕ್‌ಗಾಗಿ ಬೇಡಿಕೆ ಹೆಚ್ಚಿಸಿಕೊಂಡ ಮಿನುಗುವ ಸಿಕ್ವಿನ್ಸ್ ಬ್ಲೌಸ್