ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಟ್ರೊ ಲುಕ್ ನೀಡುವ ಸ್ಯಾಟಿನ್ ಸೀರೆಗಳನ್ನು ಉಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉಟ್ಟಲ್ಲಿ, ಟ್ರೆಂಡಿಯಾಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಅದನ್ನು ಉಡುವ ರೀತಿ ಬದಲಾಗಬೇಕು. ಜೊತೆಗೆ ಸ್ಟೈಲಿಂಗ್ ಕೂಡ ಡಿಫರೆಂಟಾಗಿರಬೇಕು ಎನ್ನುತ್ತಾರೆ. “ಒಂದಲ್ಲ ಒಂದು ಶೇಡ್‌ನ ಸ್ಯಾಟಿನ್ ಸೀರೆ ಎಲ್ಲರ ಬಳಿಯೂ ಇದ್ದೇ ಇರುತ್ತದೆ. ಈ ಸೀರೆ ಟ್ರೆಂಡ್‌ನಿಂದ ಆಚೆ ಬಂದಿದ್ದರೂ, ಅದನ್ನು ಡಿಫರೆಂಟಾಗಿ ಡ್ರೆಪ್ ಮಾಡಿ, ಅಲಂಕರಿಸಿಕೊಂಡಲ್ಲಿ ಆಕರ್ಷಕವಾಗಿ ಕಾಣಿಸಬಹುದು. ಹಳೆಯ ಸೀರೆಯಂತೆ ಕಾಣದು” ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ. ಅವರ ಪ್ರಕಾರ, ಸ್ಯಾಟಿನ್ ಸೀರೆ ಉಡುವುದು ಮಹಿಳೆಯರ ಒಂದು ಕಾಲದ ಕ್ರೇಝ್ ಆಗಿತ್ತು. ಬಣ್ಣ ಬಣ್ಣದ ಸೀರೆಗಳನ್ನು ಉಡುವುದು ರೆಟ್ರೋ ಸ್ಟೈಲ್‌ಗೆ ಸಾಥ್ ನೀಡಿತ್ತುಎನ್ನುತ್ತಾರೆ.
ಸ್ಯಾಟಿನ್ ಸೀರೆ ಡ್ರೇಪಿಂಗ್
ಈ ಸೀರೆಯು ಉಟ್ಟಾಗ ಹಾಗೆಯೇ ಬಳುಕಾಡುವುದರಿಂದ ತೀರಾ ತೆಳ್ಳಗಿರುವವರು ಆವಾಯ್ಡ್ ಮಾಡುವುದು ಉತ್ತಮ. ಡ್ರೇಪಿಂಗ್ ಮಾಡುವಾಗ ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು. ಡ್ರೇಪಿಂಗ್ ಡಿಫರೆಂಟಾಗಿ ಟ್ರೈ ಮಾಡಬಹುದು. ಇದಕ್ಕಾಗಿ ಯೂಟ್ಯೂಬ್‌ನಲ್ಲಿ ಹುಡುಕಾಡಿದಲ್ಲಿ ಬಗೆಬಗೆಯ ಡ್ರೇಪಿಂಗ್ ಐಡಿಯಾ ಪಡೆಯಬಹುದು.
ಡಿಸೈನರ್ ಸ್ಲೀವ್ ಬ್ಲೌಸ್ ಮ್ಯಾಚಿಂಗ್
ಸಾದಾ ಸ್ಯಾಟಿನ್ ಸೀರೆಗೆ ಸಾದಾ ಡಿಸೈನ್ನ ಬ್ಲೌಸ್ ಬದಲು ಕಾಂಟ್ರಾಸ್ಟ್ ಇಲ್ಲವೇ ಸ್ಲೀವ್ ಡಿಸೈನ್ ಇರುವಂತವನ್ನು ಹೊಲೆಸಿ. ಅದರಲ್ಲೂ ಬಲೂನ್ ಸ್ಲೀವ್, ಫೇದರ್ ಸ್ಲೀವ್, ಎಲ್ಬೋವರೆಗೆ ಬರುವಂತಹ ವಿನ್ಯಾಸದ ಬ್ಲೌಸ್ ಹೊಲೆಸಿ, ಮ್ಯಾಚ್ ಮಾಡಿದಾಗ ಡಿಫರೆಂಟ್ ಲುಕ್ ದೊರೆಯುತ್ತದೆ.
ಪರ್ಫೆಕ್ಟ್ ಆಕ್ಸೆಸರೀಸ್ ಆಯ್ಕೆ
ಜಂಕ್, ಫಂಕಿ ಆಕ್ಸೆಸರೀಸ್‌ಗಳನ್ನು ಇದರೊಟ್ಟಿಗೆ ಧರಿಸಿದಲ್ಲಿ ಒಂದೊಂದು ಬಗೆಯ ಲುಕ್ ದೊರಕುತ್ತದೆ. ಯಾವುದಾದರೂ ಸರಿಯೇ, ಸೀರೆಯೊಂದಿಗೆ ಹೊಂದುವಂತಹ ಜ್ಯುವೆಲರಿಗಳನ್ನು ಟ್ರಯಲ್ ನೋಡಿ ಧರಿಸಿ.
ಆಕರ್ಷಕ ಮೇಕಪ್
ಸ್ಯಾಟಿನ್ ಸೀರೆಯ ಶೇಡ್‌ಗೆ ಹೊಂದುವಂತಹ ಮೇಕಪ್ ಇರಲಿ. ಆದಷ್ಟೂ ಗ್ಲಾಸಿ ಲಿಪ್ಸ್ಟಿಕ್ ಇರಲಿ. ಹೆವ್ವಿ ಮೇಕಪ್ ಬೇಡ. ಐ ಮೇಕಪ್‌ಗೆ ಆದ್ಯತೆ ನೀಡಿ. ಈ ಸೀರೆಗೆ ಆಕರ್ಷಕವಾಗಿ ಕಾಣುತ್ತದೆ.
ಸೀಸನ್‌ಗೆ ತಕ್ಕ ಹೇರ್ ಸ್ಟೈಲ್
ಸೀರೆಯ ಅಂದಕ್ಕೆ ಮ್ಯಾಚ್ ಆಗುವಂತಹ ಹೇರ್‌ಸ್ಟೈಲ್ ಇದ್ದಲ್ಲಿ ಇಡೀ ಲುಕ್ ಚೆನ್ನಾಗಿ ಕಾಣುತ್ತದೆ. ಉದಾಹರಣೆಗೆ., ಕರ್ಲಿ ಹೇರ್ ಫ್ರೀ ಹೇರ್‌ಸ್ಟೈಲ್, ವೆವ್ವಿ ಹೇರ್‌ಸ್ಟೈಲ್ ಅಥವಾ ಹೈ ಪೋನಿಟೇಲ್ ಹೇರ್‌ಸ್ಟೈಲ್. ಇವು ಮುಖದ ಆಕಾರಕ್ಕೆ ತಕ್ಕಂತಿರಬೇಕು. ಹೆಚ್ಚು ವಿನ್ಯಾಸದ ಹೇರ್‌ಸ್ಟೈಲ್ ಬೇಡ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಹುಬ್ಬಳ್ಳಿಯಲ್ಲಿ ಯಶಸ್ವಿಯಾದ ಫ್ಲವರ್ ಗರ್ಲ್ಸ್ ರ‍್ಯಾಂಪ್ ಶೋ