ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇದೀಗ ಸಿಂಪಲ್ ಕುರ್ತಾಗಳಿಗೆ ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಪುರುಷರು ಧರಿಸಬಹುದಾದ ಕಾಲರ್ ರಹಿತ ಹಾಗೂ ಸಹಿತ ಕುರ್ತಾಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗಿದೆ.
ಹೊಸತೇನಿದೆ?
ಎಂದಿನಂತೆ ಬಿಡುಗಡೆಯಾಗಿರುವ ಸಲ್ವಾರ್ ಕುರ್ತಾ, ಧೋತಿ ಕುರ್ತಾ, ಪೈಜಾಮಾ ಕುರ್ತಾ, ಶಾರ್ಟ್ ಕುರ್ತಾ, ಶರ್ಟ್ ಕುರ್ತಾ, ಲಾಂಗ್ ಕುರ್ತಾಗಳಲ್ಲಿ ಕೊಂಚ ವಿನ್ಯಾಸಗಳು ಬದಲಾಗಿವೆ. ನೋಡಲು ಸಿಂಪಲ್ ಆಗಿ ಕಂಡರೂ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಪ್ಯಾಟರ್ನ್ ಡಿಫರೆಂಟ್ ಆಗಿರುತ್ತವೆ. ಇತರೇ ಡ್ರೆಸ್‌ಗಳಂತೆ ಇವುಗಳಲ್ಲೂ ಬಾಡಿ ಫಿಟ್‌ನವು ದೊರೆಯುತ್ತವೆ. ಅಲ್ಲದೇ ಥ್ರೆಡ್ ಹಾಗೂ ಪ್ರಿಂಟ್ಸ್‌ನವು ಚಾಲ್ತಿಯಲ್ಲಿವೆ. ಇನ್ನು ಮೆಷಿನ್ ಥ್ರೆಡ್ ವರ್ಕ್ನವು ಕೈಗೆಟಕುವ ದರದಲ್ಲಿ ಲಭ್ಯ. ಆದರೆ ಹ್ಯಾಂಡ್‌ವರ್ಕ್‌ನ ಕುರ್ತಾಗಳು ಕೊಂಚ ದುಬಾರಿ ಎನ್ನಬಹುದು.
ಕಾಟನ್ ಹಾಗೂ ಖಾದಿಯಲ್ಲಿ ದೊರೆಯುತ್ತಿದ್ದ ಕುರ್ತಾಗಳು ಇದೀಗ ಕ್ರೇಪ್, ಜಾರ್ಜೆಟ್ ಹಾಗೂ ಸೆಮಿ ಸಿಂಥೆಟಿಕ್ ಫ್ಯಾಬ್ರಿಕ್‌ನಲ್ಲೂ ಲಭ್ಯ. ಕಾಲರ್‌ನಲ್ಲಿ ಸಿಂಪಲ್ ಡಿಸೈನ್, ನೆಕ್‌ಡಿಸೈನ್‌ಗಳು ಟ್ರೆಂಡಿಯಾಗಿವೆ.
ಪುರುಷರ ಕುರ್ತಾಗಳಲ್ಲಿ ಹೊಸ ವಿನ್ಯಾಸಗಳು ಬಂದಿವೆ. ಸೀದಾ ಸಾದಾ ಕುರ್ತಾಗಳ ಜಾಗಕ್ಕೆ ಇದೀಗ ಪಾಕೆಟ್ ಕುರ್ತಾ, ಪ್ರಿಂಟ್ಸ್ ಚೆಕ್ಸ್ ಕುರ್ತಾಗಳು ಯುವಕರನ್ನು ಆಕರ್ಷಿಸಿವೆ. ಇದರೊಂದಿಗೆ ಮೈಕ್ರೋ ಥ್ರೆಡ್ ವರ್ಕ್ ಇರುವಂತವು ವಿಶೇಷವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ ಎನ್ನುತ್ತಾರೆ ಡಿಸೈನರ್ ರಾಶಿ.
ಡಿಸೆಂಟ್ ಲುಕ್ ನೀಡುವ ಕುರ್ತಾ
ಕ್ರೀಮ್ ಶೇಡ್, ವೈಟ್, ಸನ್ ಕಲರ್, ಕೇಸರಿ, ಬ್ರಿಕ್ ರೆಡ್, ಡಸ್ಟ್ ಕಲರ್ ಸೇರಿದಂತೆ ಸಾಕಷ್ಟು ಡಾರ್ಕ್ ಮತ್ತು ನ್ಯೂಡ್ ಕಲರ್‌ನಲ್ಲಿ ಬಂದಿರುವ ಕುರ್ತಾಗಳು ಯಾವುದೇ ನಾರ್ಮಲ್ ಪ್ಯಾಂಟ್ ಮೇಲೆ ಧರಿಸುವಂತಹ ವಿನ್ಯಾಸದಲ್ಲಿ ಆಗಮಿಸಿವೆ. ಯುವಕರಿಗೆ ಹಾಗೂ ಮಕ್ಕಳಿಗೆ ಇಷ್ಟವಾಗುವಂತಹ ಶಾರ್ಟ್ ಕುರ್ತಾಗಳು ಪಾಕೆಟ್ ಕುರ್ತಾಗಳು ಹಾಫ್ ಸ್ಲೀವ್ ಹಾಗೂ ಫುಲ್ ಸ್ಲೀವ್‌ನಲ್ಲಿ ಬಿಡುಗಡೆಯಾಗಿವೆ.
ಸಿಂಪ್ಲಿಸಿಟಿ ಹೆಚ್ಚಿಸುವ ಡ್ರೆಸ್‌ಕೋಡ್
“ರಾಷ್ಟ್ರ ಪ್ರೇಮ ಬಿಂಬಿಸಲು ಸಹಕಾರಿಯಾಗುವ ಬಹುತೇಕ ಕುರ್ತಾಗಳು ಇದೀಗ ಕೆಲಕಾಲ ವೆಸ್ಟರ್ನ್ ಉಡುಪನ್ನು ಸೈಡಿಗಿಡುವಂತೆ ಮಾಡಿವೆ. ಡ್ರೆಸ್‌ಕೋಡ್ ಬದಲಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ವಿಜಯ್ ಜಯಂತ್. ಅವರ ಪ್ರಕಾರ, ಕುರ್ತಾಗಳು ನಮ್ಮ ಸಿಂಪ್ಲಿಟಿಸಿಯನ್ನು ಬಿಂಬಿಸುತ್ತವೆ. ಜತೆಗೆ ನೋಡಲು ಕೂಡ ನಮ್ಮ ವ್ಯಕ್ತಿತ್ವವನ್ನು ಹೈಲೈಟ್ ಮಾಡುತ್ತವೆ. ಗೌರವ ಹೆಚ್ಚಿಸುತ್ತವೆ ಎನ್ನುತ್ತಾರೆ.
ಎಲ್ಲರ ಮನಗೆದ್ದ ಕುರ್ತಾಗಳು
ಈ ಹಿಂದೆ ಕುರ್ತಾಗಳೆಂದಾಕ್ಷಣಾ ರಾಜಕೀಯ ವ್ಯಕ್ತಿಗಳು, ಪರ್ತಕತ್ರರು, ಬುದ್ಧಿಜೀವಿಗಳಿಗೆ ಮಾತ್ರ ಸೀಮಿತ ಎಂಬಂತಿತ್ತು. ಆದರೆ, ಇದೀಗ ಕುರ್ತಾ ಕೂಡ ಟ್ರೆಂಡ್‌ಗೆ ತಕ್ಕಂತೆ ರೂಪ ಬದಲಿಸಿ ಎಲ್ಲರ ಮನಗೆದ್ದಿದೆ. ಕುರ್ತಾ ಪ್ರಿಯರಿಗೆ ಒಂದಿಷ್ಟು ಸಲಹೆಗಳು ಇಲ್ಲಿವೆ:
- ಗುಣಮಟ್ಟವುಳ್ಳ ಫ್ಯಾಬ್ರಿಕ್ನ ಕುರ್ತಾಗಳನ್ನು ಖರೀದಿಸಿ.
- ಟ್ರೆಂಡ್ನಲ್ಲಿರುವ ವಿನ್ಯಾಸದ್ದನ್ನು ಆಯ್ಕೆ ಮಾಡಿ.
- ಕುರ್ತಾಗೆ ಸೂಟ್ ಆಗುವ ಪ್ಯಾಂಟನ್ನು ಧರಿಸಿ.
- ನಿರ್ವಹಣೆ ಬಗ್ಗೆ ಖರೀದಿಸುವಾಗಲೇ ತಿಳಿದುಕೊಳ್ಳಿ.
ಇದನ್ನೂ ಓದಿ| Star Style | ಟ್ರೆಂಡ್ ಸೆಟ್ಟರ್ ಆಗಲು ಬಯಸುವ ತೇಜಸ್ವಿನಿ ಶರ್ಮಾ