ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್ ಲೋಕದಲ್ಲಿ (Season Fashion) ಇದೀಗ ಒನ್ ಶೋಲ್ಡರ್ ಡ್ರೆಸ್‌ಗಳು ಟ್ರೆಂಡಿಯಾಗಿವೆ. ತಾರೆಯರು ಮಾತ್ರವಲ್ಲ, ಸೆಲೆಬ್ರೆಟಿ ಲುಕ್‌ಗಾಗಿ ಈ ಜನರೇಷನ್ ಹುಡುಗಿಯರು ಧರಿಸುವುದು ಹೆಚ್ಚಾಗಿದೆ. ಗ್ಲಾಮರ್ ಲುಕ್ ನೀಡುವ ಈ ಔಟ್‌ಫಿಟ್ಸ್ ಆನ್‌ಲೈನ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ಹಾಲಿವುಡ್ ತಾರೆಯರ ಟ್ರೆಂಡಿ ಡ್ರೆಸ್‌ಗಳಲ್ಲಿ ಒಂದಾಗಿದ್ದ ಒನ್ ಶೋಲ್ಡರ್ ಡ್ರೆಸ್‌ಗಳು, ಬಾಲಿವುಡ್ ತಲುಪಿ, ಅಲ್ಲಿನ ತಾರೆಯರ ಮೇಲೆ ಸವಾರಿ ಮಾಡಿದವು. ರ್ಯಾಂಪ್ ಲೋಕದಲ್ಲೂ ಹಂಗಾಮ ಎಬ್ಬಿಸಿದವು. ಪೇಜ್ ತ್ರೀ ಪಾರ್ಟಿಗಳಲ್ಲಿ ಕಾಮನ್ ಆಗಿದ್ದವು. ಇದೀಗ ಸಾಮಾನ್ಯ ಯುವತಿಯರನ್ನು ತಲುಪಿವೆ. ಹೈ ಫ್ಯಾಷನ್ ಲಿಸ್ಟ್‌ನಲ್ಲಿದ್ದ ಈ ಔಟ್‌ಫಿಟ್ ಇದೀಗ ಸೆಲೆಬ್ರೆಟಿ ಲುಕ್ ಪಡೆಯಲು ಬಯಸುವ ಹುಡುಗಿಯರನ್ನು ಸೆಳೆಯತೊಡಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಒನ್ ಶೋಲ್ಡರ್ ಡ್ರೆಸ್ ವಿನ್ಯಾಸ
ತಕ್ಷಣಕ್ಕೆ ನೋಡಲು ಇವು ಹೆಚ್ಚು ವಿನ್ಯಾಸ ಇಲ್ಲದಂತೆ ಕಂಡರೂ ಇವುಗಳಲ್ಲಿ ಸ್ಟಿಚ್ಚಿಂಗ್ ಪ್ಯಾಟರ್ನ್ ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ., ಪ್ರೋಮೊ ಒನ್ ಶೋಲ್ಡರ್ ಡ್ರೆಸ್, ಶಿಫ್ಟ್, ಎ ಲೈನ್, ಶೀತ್, ಫೀಟ್ ಹಾಗೂ ಫ್ಲೇರ್, ವ್ರಾಪ್ ಸ್ಟೈಲ್, ರಫಲ್, ಬಾಡಿಕಾನ್, ಶಿರ್ರೆಡ್, ಸ್ಕೆಟರ್ ಡ್ರೆಸ್ ಸೇರಿದಂತೆ ನಾನಾ ಬಗೆಯವು ದೊರೆಯುತ್ತಿವೆ.
ಒನ್ ಶೋಲ್ಡರ್ ಆಯ್ಕೆ ಮಾಡುವುದು ಹೇಗೆ?
ಒನ್ ಶೋಲ್ಡರ್ ಡ್ರೆಸ್ ಆಯ್ಕೆ ಮಾಡುವವರು ಸಾಕಷ್ಟು ವಿಷಯಗಳ ಬಗ್ಗೆ ಗಮನವಹಿಸಬೇಕಾಗುತ್ತದೆ. ಮೊದಲು ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸವಿರುವುದನ್ನು ಹುಡುಕಿ ಖರೀದಿಸಬೇಕು. ಟ್ರಯಲ್ ನೋಡದೇ ಕೊಳ್ಳಲೇಬಾರದು. ಒಳ ಉಡುಪು ಪಾರದರ್ಶಕವಾಗದಂತೆ ಎಚ್ಚರವಹಿಸಬೇಕು. ಇದಕ್ಕಾಗಿ ಸ್ಟೈಲಿಸ್ಟ್‌ಗಳ ಸಹಾಯ ಪಡೆಯಬಹುದು. ಸ್ಲಿಮ್ ಆಗಿರುವವರು ಆದಷ್ಟು ಬಾಡಿಕಾನ್ ಒನ್ ಶೋಲ್ಡರ್ ಔಟ್‌ಫಿಟ್ ಆವಾಯ್ಡ್ ಮಾಡಬೇಕು. ಅದರ ಬದಲು ರಫಲ್, ಸ್ಕೆಟರ್, ಫಿಟ್ ಹಾಗೂ ಫ್ಲೇರ್‌ನಂತವನ್ನು ಆಯ್ಕೆ ಮಾಡಬಹುದು. ಇನ್ನು ಪ್ಲಂಪಿಯಾಗಿರುವವರು ಬಾಡಿಕಾನ್, ಎ ಲೈನ್, ಶಿರ್ರೆಡ್ ವಿನ್ಯಾಸದವನ್ನು ಧರಿಸಬಹುದು.
ಮ್ಯಾಚಿಂಗ್ ಹೀಗೆ
ಗ್ಲಾಮರ್ ಲುಕ್‌ಗಾಗಿ ಒನ್ ಶೋಲ್ಡರ್ ಡ್ರೆಸ್ ಧರಿಸುವವರು ಧರಿಸುವ ಜ್ಯುವೆಲರಿಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಬೇಕು. ಹ್ಯಾಂಗಿಂಗ್ಸ್, ಚೋಕರ್, ಲೇಯರ್ ಚೈನ್ಸ್ ಧರಿಸಬಹುದು. ಹೇರ್‌ಸ್ಟೈಲ್ ಶೋಲ್ಡರ್ ಸ್ಲೀವ್ ಇಲ್ಲದ ಕಡೆಯೂ ಬರುವಂತಹ ಕೇಶ ವಿನ್ಯಾಸ ಮಾಡಬಹುದು. ಲೂಸ್ ಹೇರ್ ಸ್ಟೈಲ್ ಕೂಡ ಆಕರ್ಷಕವಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Partywear Fashion: ಪಾರ್ಟಿವೇರ್ ಫ್ಯಾಷನ್‌ನಲ್ಲಿ ಬಿಂದಾಸ್ ಬ್ಯಾಕ್‌ಲೆಸ್ ಗೌನ್ಸ್ ಹಂಗಾಮ