ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿಗಳಂತೆ ಕಾಣಬೇಕೇ! (Season Fashion) ಹಾಗಾದಲ್ಲಿ ,ಇದೀಗ ಟ್ರೆಂಡಿಯಾಗಿರುವ ಕೋ-ಆರ್ಡ್ ಸೆಟ್ ಔಟ್‌ಫಿಟ್ಸ್ ಟ್ರೈ ಮಾಡಿ ನೋಡಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು. ಹೌದು. ಇಂದು ಕೋ- ಆರ್ಡ್ ಸೆಟ್, ಸೂಟ್ ಅಥವಾ ಔಟ್‌ಫಿಟ್ಸ್ ಯಾವ ಮಟ್ಟಿಗೆ ಪಾಪುಲರ್ ಆಗಿವೆಯೆಂದರೇ, ಸೆಲೆಬ್ರೆಟಿಗಳು ಮಾತ್ರವಲ್ಲ, ಕಿರುತೆರೆ, ಹಿರಿತೆರೆ ಸಿನಿಮಾ ತಾರೆಯರು ಫಟಾಫಟ್ ಕೋ- ಆರ್ಡ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದನ್ನು ನೋಡುವ ಸಾಮಾನ್ಯ ಯುವತಿಯರು ತಾವೇನು ಕಡಿಮೆಯಿಲ್ಲ! ಎಂಬಂತೆ ಈ ಔಟ್‌ಫಿಟ್ಸ್ ಪ್ರಯೋಗ ಮಾಡತೊಡಗಿದ್ದಾರೆ. ಫ್ಯಾಷನಿಸ್ಟ್ ರಕ್ಷಾ ಪ್ರಕಾರ, ಕೋ ಆರ್ಡ್ ಸೆಟ್ ಡ್ರೆಸ್‌ಗಳನ್ನು ಧರಿಸಿದಾಗ ನಮ್ಮ ಪರ್ಸನಾಲಿಟಿಯನ್ನು ಹೈ ಲೈಟ್ ಆಗುತ್ತದೆ. ಸೆಲೆಬ್ರೆಟಿ ಇಮೇಜ್ ನಮ್ಮದಾಗುತ್ತದೆ. ಜೊತೆಗೆ ಕ್ಲಾಸಿ ಲುಕ್ ಪಡೆಯಬಹುದು.
ಏನಿದು ಕೋ ಆರ್ಡ್ ಸೆಟ್
ಸಿಂಪಲ್ ಆಗಿ ಹೇಳಬೇಕೆಂದರೇ, ಒಂದೇ ರೀತಿಯ ವಿನ್ಯಾಸ ಹೊಂದಿರುವ ಟೂ ಪೀಸ್, ತ್ರೀ ಪೀಸ್ ಅಥವಾ ಲೇಯರ್ ಲುಕ್ ನೀಡುವ ಉಡುಪುಗಳಿವು. ಉದಾಹರಣೆಗೆ., ಧರಿಸುವ ಒಂದೇ ಬಗೆಯ ಕ್ರಾಪ್ ಟಾಪ್, ಪ್ಯಾಂಟ್ ಆಗಬಹುದು, ಜೊತೆಗೆ ಧರಿಸುವ ಒಂದೇ ಪ್ರಿಂಟ್‌ನ ಬ್ಲೇಝರ್, ಜಾಕೆಟ್, ಕೋಟ್ ಆಗಬಹುದು. ಇನ್ನು ಟೀ ಶರ್ಟ್-ಪ್ಯಾಂಟ್ ಕೂಡ ಆಗಬಹುದು. ಅಷ್ಟೇಕೆ? ಲೆಹೆಂಗಾ ಶೈಲಿಯ ಸ್ಕರ್ಟ್ ಹಾಗೂ ಬ್ಲೌಸ್ ಆಗಬಹುದು. ಒಟ್ಟಾರೆ, ಒಂದೇ ಪ್ರಿಂಟ್ ಅಥವಾ ಕಲರ್ ಹಾಗೂ ಡಿಸೈನ್ ಹೊಂದಿರುವಂತಹ ಡ್ರೆಸನ್ನು ಕೋ -ಆರ್ಡ್ ಸೆಟ್ ಅಥವಾ ಔಟ್‌ಫಿಟ್ಸ್ ಎಂದು ಹೇಳಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕೋ ಆರ್ಡ್ ಸೆಟ್ ಧರಿಸಿ ಸೆಲೆಬ್ರೆಟಿ ಲುಕ್ ಪಡೆಯುವುದು ಹೇಗೆ?
ಮೊದಲಿಗೆ ಕೋ ಆರ್ಡ್ ಔಟ್‌ಫಿಟ್ಸ್ ಆಯ್ಕೆ ಮಾಡುವಾಗ ಅಥವಾ ಹೊಲೆಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಸೆಲೆಬ್ರೆಟಿ ಲುಕ್ ನಿಮ್ಮದಾಗಿಸಿಕೊಳ್ಳಬಹುದು ಎನ್ನುವ ಸ್ಟೈಲಿಸ್ಟ್ ರಾಕಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
- ಎರಡಕ್ಕಿಂತ ಹೆಚ್ಚು ಪೀಸ್ನ ಔಟ್‌ಫಿಟ್ಸ್ ಇದಾಗಿರಬೇಕು.
- ಒಂದೇ ಬಗೆಯ ಪ್ರಿಂಟ್ಸ್, ಕಲರ್ ಹೊಂದಿರುವುದು ಅಗತ್ಯ.
- ಕ್ಯಾಶುವಲ್ನ ಕೋ ಆರ್ಡ್ ಸೆಟ್ಗೆ ಎಥ್ನಿಕ್ ಟಚ್ ನೀಡಬೇಡಿ.
- ಸೆಮಿ ಎಥ್ನಿಕ್ ಕೋ ಆರ್ಡ್ ಔಟ್ಫಿಟ್ಸ್ಗೆ ಮೇಕಪ್ ಮ್ಯಾಚ್ ಆಗುವಂತಿರಬೇಕು.
- ಫ್ರೀ ಹೇರ್ಸ್ಟೈಲ್ ವಿತ್ ಸನ್ಗ್ಲಾಸ್ ಸೆಲೆಬ್ರೆಟಿ ಲುಕ್ ನೀಡುತ್ತದೆ.
- ಫ್ಲಾಟ್ ಸ್ಯಾಂಡಲ್ಸ್ ಬೇಡ. ಬದಲಿಗೆ ಆಫ್ ಶೂ, ಹೀಲ್ಸ್ ಆಯ್ಕೆ ಮಾಡುವುದು ಅಗತ್ಯ.
- ಪ್ರಿಂಟ್ಸ್ ಟ್ರೆಂಡಿಯಾಗಿರುವುದು ಅಗತ್ಯ.
- ಫಿಟ್ಟಿಂಗ್ ಸರಿಯಾಗಿರಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Denim Fashion: ಡೆನಿಮ್‌ನಲ್ಲೂ ಬಂತು ಗ್ಲಾಮರಸ್ ಕ್ರಾಪ್ ಟಾಪ್ಸ್