ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ವರ್ಷದ ಕೊನೆಯ ಇಯರ್ ಎಂಡ್ ಸೇಲ್ಸ್ ಆರಂಭಗೊಂಡಿದೆ. ಪರಿಣಾಮವಾಗಿ, ವಾರದ ದಿನಗಳಲ್ಲೂ ಔಟ್‌ಫಿಟ್‌ಗಳ ಭರ್ಜರಿ ಮಾರಾಟ ಹಾಗೂ ಶಾಪಿಂಗ್ ಶುರುವಾಗಿದೆ. ನಾನಾ ಬಗೆಯ ವೆಸ್ಟರ್ನ್ ಔಟ್‌ಫಿಟ್ಸ್ ಹಾಗೂ ಎಥ್ನಿಕ್ ಉಡುಗೆಗಳಿಂದ ಹಿಡಿದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು, ಆಕ್ಸೆಸರೀಸ್‌ಗಳು ಈ ಸೇಲ್ಸ್‌ನಲ್ಲಿ ಲಭ್ಯವಿದೆ.
ಮಾಲ್‌ಗಳ ಕಾನ್ಸೆಪ್ಟ್
ಪ್ರತಿವರ್ಷ ಮಾಲ್‌ಗಳಲ್ಲಿ ತಪ್ಪದೇ ಉಡುಪುಗಳ ಇಯರ್ ಎಂಡ್ ಸೇಲ್ ಹೆಸರಿನಲ್ಲಿ ಮಾರಾಟ ನಡೆಯುತ್ತದೆ. ಅಂದಹಾಗೆ, ಈ ಕಾನ್ಸೆಪ್ಟ್ ನಮ್ಮಲ್ಲಿ ಮೊದಲು ಪರಿಚಯಗೊಂಡದ್ದೇ ಮಾಲ್‌ಗಳಿಂದ. ಮಾಲ್‌ಗಳು ಬೆಂಗಳೂರಿಗೆ ಕಾಲಿಟ್ಟ ನಂತರ ಈ ಕಾನ್ಸೆಪ್ಟ್ ಇಲ್ಲಿಯೂ ಸಾಮಾನ್ಯವಾಗತೊಡಗಿತು. ವರ್ಷದ ಕೊನೆಯ ತಿಂಗಳು ಇಲ್ಲವೇ ಕ್ರಿಸ್ಮಸ್ ನಂತರ ಈ ಬಗೆಯ ಸೇಲ್‌ಗಳು ಪ್ರಾರಂಭವಾಗತೊಡಗಿದವು. ಹೊಸ ವರ್ಷಕ್ಕೆ ನ್ಯೂ ಅರೈವಲ್ ಕೆಟಗರಿಯಲ್ಲಿ ಉಡುಪುಗಳು ಬಂದ ನಂತರ, ಹಳೆಯ ಸ್ಟಾಕ್ ಅಥವಾ ಹಳೆ ಟ್ರೆಂಡ್‌ನ ಉಡುಪುಗಳನ್ನು ಕ್ಲಿಯರ್ ಮಾಡಲು ಸಾಕಷ್ಟು ಬ್ರಾಂಡ್‌ಗಳು ಸೇಲ್ಸ್ ಹೆಸರಿನಲ್ಲಿ ಡಿಸ್ಕೌಂಟ್ಸ್ ಹಾಗೂ ಆಫರ್ ನೀಡತೊಡಗುತ್ತವೆ. ದುಬಾರಿಯ ಔಟ್‌ಫಿಟ್‌ಗಳು ಅರ್ಧಕ್ಕರ್ದ ಬೆಲೆಯಲ್ಲಿ ದೊರೆಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ವಿನಿತ್.
ಸೇಲ್‌ನಲ್ಲಿ ಯಾವ್ಯಾವ ಬಗೆಯ ಔಟ್‌ಫಿಟ್ಸ್ ಲಭ್ಯ?
ಈ ಬಾರಿಯ ಇಯರ್ ಎಂಡ್ ಸೇಲ್‌ನಲ್ಲಿ, ಕಳೆದ ಹಬ್ಬಗಳಿಗೆ ಆಗಮಿಸಿದ್ದ ಮಹಿಳೆಯರ, ಪುರುಷರ, ಮಕ್ಕಳ ಎಥ್ನಿಕ್ ಸೂಟ್‌ಗಳು, ದುಪಟ್ಟಾಗಳು, ಮಾನ್ಸೂನ್ ಸೀಸನ್‌ಗೆ ಕಾಲಿಟ್ಟಿದ್ದ ವಾಟರ್ ಪ್ರೂಫ್ ಔಟ್‌ಫಿಟ್‌ಗಳು, ಟೀ ಶರ್ಟ್‌ಗಳು, ಬೆಲ್ಟ್, ಕ್ಯಾಪ್, ಬ್ಯಾಗ್ ಸೇರಿದಂತೆ ನಾನಾ ಆಕ್ಸೆಸರೀಸ್‌ಗಳು ಇವೆ. ಅಷ್ಟೇ ಏಕೆ? ಚಿಣ್ಣರ ಉಡುಪುಗಳು ಕೂಡ ಲಭ್ಯ. ಇವು ಮುಂಬರುವ ಸೀಸನ್‌ಗೆ ಸೂಟ್ ಆಗದಿದ್ದರೂ ಮಿಕ್ಸ್ ಮ್ಯಾಚ್ ಮಾಡಿ ಧರಿಸುವ ಜಾಣತನವಿದ್ದಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ ಸದುಪಯೋಗಪಡಿಸಿಕೊಳ್ಳಬಹುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ ವಿದ್ಯಾ.
ಬೈ ಒನ್ ಗೆಟ್ ವನ್ ಫ್ರೀ ಕಾನ್ಸೆಪ್ಟ್
ಉದಾಹರಣೆಗೆ, ಕಳೆದ ಫೆಸ್ಟೀವ್ ಸೀಸನ್‌ನಲ್ಲಿ ಬಂದಿದ್ದ ಕುರ್ತಾ, ಸಲ್ವಾರ್ ಹಾಗೂ ಕಮೀಝ್‌ಗಳ ಮೇಲೆ ಆಯಾ ಬ್ರಾಂಡ್‌ಗಳು ೩೦, ೫೦ ಹಾಗೂ ೬೦ ಪರ್ಸೆಂಟ್ ಡಿಸ್ಕೌಂಟ್ಸ್ ನೀಡಿರುತ್ತವೆ. ಇನ್ನು ಕೆಲವು ಬ್ರಾಂಡ್‌ಗಳು ಎರಡು ಔಟ್‌ಫಿಟ್ ಖರೀದಿಸಿದಲ್ಲಿ ಒಂದು ಉಡುಪನ್ನು ಉಚಿತ ನೀಡುತ್ತವೆ.
ಸೇಲ್‌ನಲ್ಲಿ ಖರೀದಿಸುವ ಮುನ್ನ ಗಮನದಲ್ಲಿರಲಿ
ಮೊದಲು ಸೇಲ್‌ನ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.
ವಿಂಡೋ ಶಾಪಿಂಗ್ ಮಾಡಿ, ಔಟ್‌ಫಿಟ್‌ಗಳನ್ನುಮೊದಲು ನೋಡಿ.
ಸೇಲ್‌ನಲ್ಲಿ ಕಡಿಮೆ ರೇಟ್ ಎಂದು ಸುಮ್ಮನೆ ಕೊಳ್ಳಬೇಡಿ.
ಮಿಕ್ಸ್ ಮ್ಯಾಚ್ ಆಗುವಂತಹ ಉಡುಪುಗಳನ್ನುಮಾತ್ರ ಕೊಳ್ಳಿ.
ಮುಂಬರುವ ಸೀಸನ್‌ಗೆ ಮ್ಯಾಚ್ ಆಗದಿದ್ದನ್ನು ಖರೀದಿಸಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ವೈವಿಧ್ಯಮಯ ವಿನ್ಯಾಸದ ಕ್ರಿಸ್ಮಸ್ ಪಾರ್ಟಿ ಡ್ರೆಸ್