- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯಂಗ್ ಲುಕ್ ನೀಡುವ ಟೈಯಿಂಗ್ ಡ್ರೆಸ್‌ಗಳು (Season Trend) ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿದ್ದು, ಸೆಲೆಬ್ರಿಟಿಗಳನ್ನು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ಸ್ತ್ರೀಯರನ್ನು ಆಕರ್ಷಿಸತೊಡಗಿವೆ.
ಏನಿದು ಟೈಯಿಂಗ್ ಡ್ರೆಸ್?
ಈ ಹಿಂದೆ ಮಕ್ಕಳ ಫ್ರಾಕ್‌ಗಳಲ್ಲಿ ಇರುತ್ತಿದ್ದ ಟೈಯಿಂಗ್ ಕಾನ್ಸೆಪ್ಟ್ ಇದೀಗ ಸ್ತ್ರೀಯರ ಉಡುಪುಗಳಲ್ಲಿಯೂ ಕಾಣಿಸಿಕೊಂಡಿದೆ. ಡ್ರೆಸ್‌ಗೆ ಫಿಟ್ಟಿಂಗ್ ನೀಡುವ ಹಾಗೂ ವೇಸ್ಟ್‌ಲೈನ್‌ಗೆ ಮೆರುಗು ನೀಡುವ ಈ ಟೈಯಿಂಗ್ ಅಪ್ಷನ್ ಬೆಲ್ಟ್ ಜಾಗವನ್ನು ಆವರಿಸಿಕೊಂಡಿದೆ. ಹೊಸ ವಿಷಯ ಏನೆಂದರೇ ಈ ಹಿಂದೆ ಟೈಯಿಂಗ್ ಎಂದಾಕ್ಷಣ ಉಡುಪುಗಳ ಹಿಂಭಾಗ ಕಟ್ಟಬೇಕಾಗಿತ್ತು. ಆದರೆ ಇದೀಗ ಈ ಕಾನ್ಸೆಪ್ಟ್ ಬದಲಾಗಿದೆ. ಉಡುಪಿನ ಹಿಂದೆ ಮಾತ್ರವಲ್ಲ, ಸೈಡ್ ಹಾಗೂ ಮುಂಭಾಗದಲ್ಲೂ ಕಟ್ಟಬಹುದು. ಇದು ನೋಡಲು ಡಿಫರೆಂಟ್ ಲುಕ್ ನೀಡುವುದಲ್ಲದೇ ಯಂಗ್ ಲುಕ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಶ್ ರಿಯಾ.
ತಾರೆಯರಿಗೂ ಪ್ರಿಯ
ಟೈಯಿಂಗ್ ಡ್ರೆಸ್‌ಗಳು ಸಮಂತಾ, ರಿಯಾ, ಪ್ರಾಚಿ ದೇಸಾಯಿ, ಅನನ್ಯಾ, ತಾರಾ ಸುತಾರಿಯಾ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನೂ ಸೆಳೆದಿವೆ. ನೋಡಲು ಯಂಗ್ ಲುಕ್ ನೀಡುವ ಈ ಉಡುಪುಗಳು ಇದೀಗ ಸಿನಿಮಾ ಹಾಗೂ ಫ್ಯಾಷನ್ ಸೆಲೆಬ್ರಿಟಿಗಳ ವಾರ್ಡ್‌ರೋಬ್ ಸೇರಿವೆ. ಡಿಸೈನರ್‌ಗಳ ಅಗತ್ಯವಿಲ್ಲದ ಇವು ಕ್ಯಾಶುವಲ್ ಲುಕ್‌ಗೆ ಸಾಥ್ ನೀಡುವ ಸಿಂಪಲ್ ಔಟ್‌ಫಿಟ್ ಲಿಸ್ಟ್‌ಗೆ ಸೇರಿದೆ. ಎಲ್ಲಾ ಬ್ರಾಂಡ್‌ಗಳಲ್ಲೂ ಸುಲಭವಾಗಿ ದೊರೆಯುತ್ತಿವೆ.
‘ಫ್ರಾಕ್‌ಗಳಲ್ಲಿದ್ದ ಟೈಯಿಂಗ್ ಕಾನ್ಸೆಪ್ಟ್ ಇದುವರೆಗೂ ಮಕ್ಕಳ ಉಡುಪುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ, ಇದೀಗ ಇದೇ ಕಾನ್ಸೆಪ್ಟ್ ಡಿಫರೆಂಟ್ ಸ್ಟೈಲ್‌ನಲ್ಲಿ ದೊಡ್ಡವರ ಡ್ರೆಸ್‌ಗಳಲ್ಲಿ ಆಗಮಿಸಿದೆ. ಧರಿಸಿದಾಗ ಕೊಂಚ ಯಂಗ್ ಲುಕ್ ನೀಡುತ್ತದೆ. ಹಾಗಾಗಿ ಇದನ್ನು ಧರಿಸುವವರು ಹೆಚ್ಚಾಗಿದ್ದಾರೆ’ ಎನ್ನುತ್ತಾರೆ ಡಿಸೈನರ್ ಯೋಗಿತಾ.
ಟೈಯಿಂಗ್ ಉಡುಪುಗಳು
ಟೈಯಿಂಗ್ ಫ್ರಾಕ್, ಟೈಯಿಂಗ್ ಪೆಪ್ಲಮ್, ಲಾಂಗ್ ಟಾಪ್, ಶಾರ್ಟ್ ಜಂಪ್ ಸೂಟ್, ಪ್ಯಾಂಟ್, ಕ್ರಾಪ್ ಟಾಪ್, ಫ್ರಾಕ್, ಲಾಂಗ್ ಸ್ಲೀವ್‌ಲೆಸ್ ಫ್ರಾಕ್ ಹೀಗೆ ನಾನಾ ಔಟ್‌ಫಿಟ್‌ನಲ್ಲಿ ಇವು ಎಂಟ್ರಿ ನೀಡಿವೆ. ಇನ್ನು ಕೆಲವಲ್ಲಿ ಪ್ರತ್ಯೇಕ ಬೆಲ್ಟ್‌ನಂತೆ ಬಳಸಿ ಟೈ ಮಾಡುವಂತೆಯೂ ಇರುತ್ತವೆ. ಕೆಲವು ತೆಗೆದು ಹಾಕಬಹುದಾದ ಬೆಲ್ಟ್ ಶೈಲಿಯಲ್ಲಿಯೂ ಉಡುಪಿನೊಂದಿಗೆ ಸಿಗುತ್ತವೆ. ನೋಡಲು ಸಿಂಪಲ್ ಲುಕ್ ನೀಡುವ ಈ ಔಟ್‌ಫಿಟ್ ಕಾನ್ಸೆಪ್ಟ್ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಹೆಚ್ಚು ಸೆಳೆದಿವೆ. ಇನ್ನು ಕೆಲವು ಉಡುಪುಗಳಲ್ಲಿ ಟೈಯಿಂಗ್ ಥ್ರೆಡ್‌ಗಳನ್ನು ಸೈಡ್, ಸೆಂಟರ್ ಮಿಡಲ್ ಹೀಗೆ ನಾನಾ ಕಡೆ ಕಾಣಬಹುದು.
ಗ್ಲಾಮರಸ್ ಲುಕ್ ಸಿಗದು
ನಿಮ್ಮ ಬಿಎಂಐಗೆ ತಕ್ಕಂತೆ ಟೈಯಿಂಗ್ ಡಿಸೈನರ್‌ವೇರ್ ಇದ್ದರೆ ಉತ್ತಮ. ಇಲ್ಲವಾದಲ್ಲಿ ತೀರಾ ನೋಡಲು ದೊಗಲೆಯಾಗಿ ಕಾಣಬಹುದು. ಬಹುತೇಕ ಟೈಯಿಂಗ್ ಉಡುಪುಗಳು ಲೂಸಾಗಿರುತ್ತವೆ. ದೊಗಲೆಯಾಗಿರುತ್ತವೆ. ಎಕ್ಸ್‌ಪೋಸ್ ಮಾಡಲಾಗದು.
ಟೈಯಿಂಗ್ ಡ್ರೆಸ್ ಧರಿಸುವವರು ಈ ಕೆಳಗಿನ ಟಿಪ್ಸ್ ಪಾಲಿಸಬಹುದು.
- ಟೈಯಿಂಗ್ ಥ್ರೆಡ್ ಟೈಟಾಗಿ ಕಟ್ಟಿದಾಗ ಮಾತ್ರ ಫಿಟ್ ಆಗಿ ಕಾಣಬಹುದು.
- ವೆಸ್ಟರ್ನ್ ಲುಕ್‌ಗೆ ಮ್ಯಾಚ್ ಆಗುವುದು.
- ಕಾಲರ್ನ ಟೈಯಿಂಗ್ ಡ್ರೆಸ್ ರೆಟ್ರೊ ಲುಕ್ ನೀಡುತ್ತದೆ.
- ಫ್ಲಾಟ್ ಸ್ಯಾಂಡಲ್ಸ್ ಬಳಕೆ ಬೇಡ.
- ಉಡುಪಿಗೆ ಹೊಂದುವ ಹೇರ್ಸ್ಟೈಲ್ ಮಾಡಿ.