Site icon Vistara News

Sequence Blouse Fashion: ಸೆಲೆಬ್ರೆಟಿ ಲುಕ್‌ಗಾಗಿ ಬೇಡಿಕೆ ಹೆಚ್ಚಿಸಿಕೊಂಡ ಮಿನುಗುವ ಸಿಕ್ವಿನ್ಸ್ ಬ್ಲೌಸ್‌

Sequence Blouse Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಧರಿಸಿದರೇ ಮಿರ ಮಿರ ಮಿನುಗುವ ಸಿಕ್ವಿನ್ಸ್ ಬ್ಲೌಸ್‌ಗಳು (Sequence Blouse Fashion) ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೌದು, ಫೆಸ್ಟಿವ್‌ ಸೀಸನ್‌ ಸಂಭ್ರಮವನ್ನು ಹೆಚ್ಚಿಸಲು ಸೀರೆ, ಲೆಹೆಂಗಾದೊಂದಿಗೆ ಮಿಕ್ಸ್‌ ಮ್ಯಾಚ್‌ ಮಾಡಬಹುದಾದ ಬಗೆಬಗೆಯ ಮಿನುಗುವ ಸಿಕ್ವಿನ್ಸ್‌ ಬ್ಲೌಸ್‌ಗಳು ಮಾರುಕಟ್ಟೆಗೆ ಆಗಮಿಸಿವೆ.

“ಈ ಮೊದಲು ಸಿಕ್ವಿನ್ಸ್‌ ಬ್ಲೌಸ್‌ಗಳನ್ನು ಪಾರ್ಟಿವೇರ್‌ನಲ್ಲಿ ಬಳಸಲಾಗುತ್ತಿತ್ತು. ಇದೀಗ, ಈ ಬ್ಲೌಸ್‌ಗಳು ಗ್ರ್ಯಾಂಡ್‌ ಲುಕ್‌ ನೀಡುವ ಸಲುವಾಗಿ ಹಾಗೂ ಕಾಂಟ್ರಾಸ್ಟ್‌ ಮ್ಯಾಚಿಂಗ್‌ಗಾಗಿ ಬಳಸಲಾಗುತ್ತಿದೆ. ಸಾದಾ ಸೀರೆಗಳೊಂದಿಗೆ ಈ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಇನ್ನು ಲೆಹೆಂಗಾಗಳಿಗೂ ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸಲು ನಾನಾ ಶೇಡ್‌ನ ಸಿಕ್ವಿನ್ಸ್‌ ಬ್ಲೌಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಅಷ್ಟು ಮಾತ್ರವಲ್ಲ, ಸಿಕ್ವಿನ್ಸ್‌ ಕ್ರಾಪ್‌ ಟಾಪ್‌ನಂತಿರುವ ಬ್ಲೌಸ್‌ಗಳು ಈ ಜನರೇಷನ್‌ ಹುಡುಗಿಯರ ಸೀರೆ ಹಾಗೂ ಲಾಂಗ್‌ ಸ್ಕರ್ಟ್‌ನೊಂದಿಗೆ ಕಾಣಿಸಿಕೊಳ್ಳುತ್ತಿವೆ. ಟ್ರೆಂಡಿಯಾಗಿವೆ” ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ರಾಣಿ. ಅವರ ಪ್ರಕಾರ, ಸಿಕ್ವಿನ್ ಬ್ಲೌಸ್‌ಗಳು ಈ ಸೀಸನ್‌ನಲ್ಲಿ ಊಹೆಗೂ ಮೀರಿದ ವಿನ್ಯಾಸಗಳಲ್ಲಿ ಲಗ್ಗೆ ಇಟ್ಟಿವೆಯಂತೆ.

ಟ್ರೆಂಡ್‌ನಲ್ಲಿರುವ ಸಿಕ್ವೀನ್ಸ್‌ ಬ್ಲೌಸ್‌ಗಳು

ಈ ಸೀಸನ್‌ನಲ್ಲಿ ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಸಿಕ್ವಿನ್‌ ಬ್ಲೌಸ್‌ಗಳು ಕಾಲಿಟ್ಟಿವೆ. ಶಿಮ್ಮರ್‌ನಂತೆ ಕಾಣುವ ಈ ಸಿಕ್ವಿನ್ಸ್ ಬ್ಲೌಸ್‌ಗಳಲ್ಲಿ ಇದೀಗ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಅದರಲ್ಲೂ ಬ್ಯಾಕ್‌ ಟೈಯಿಂಗ್‌ ಹಾಗೂ ಬ್ಯಾಕ್‌ ಡಿಸೈನ್‌ ಇರುವಂತವು ಯುವತಿಯರನ್ನು ಸೆಳೆದಿವೆ. ಇನ್ನು ಕೆಲವು ವಿ ನೆಕ್‌, ಬೋಟ್‌ ನೆಕ್‌ ಹಾಗೂ ಬ್ರಾಡ್‌ ನೆಕ್‌ ಡಿಸೈನ್‌ನಲ್ಲಿ ರೆಡಿಮೇಡ್‌ ಡಿಸೈನ್‌ನಲ್ಲಿ ದೊರೆಯುತ್ತಿವೆ.

ಲೆಹೆಂಗಾ ಜೊತೆ ಮಿಕ್ಸ್‌ ಮ್ಯಾಚ್‌

ಸೀರೆಗೆ ಖರೀದಿಸಿದ ಸಿಕ್ವಿನ್ಸ್‌ ಬ್ಲೌಸನ್ನು ಹಳೆಯ ಅಥವಾ ಯಾವುದೇ ಲೆಹೆಂಗಾ ಜೊತೆಯೂ ಮಿಕ್ಸ್‌ ಮ್ಯಾಚ್‌ ಮಾಡಿ ಹೊಸ ಲುಕ್‌ ನೀಡಬಹುದು. ಅದಕ್ಕಾಗಿ ಕಾಮನ್‌ ಕಲರ್‌ ಇಲ್ಲವಾದಲ್ಲಿ ಪಾಸ್ಟೆಲ್‌ ಶೇಡ್‌ ಇಲ್ಲವೇ ಲೆಹೆಂಗಾದಲ್ಲಿರುವ ವಿನ್ಯಾಸದ ಯಾವುದೆ ಶೇಡ್‌ನದ್ದನ್ನು ಆಯ್ಕೆ ಮಾಡಬಹುದು.

ಸಿಕ್ವಿನ್ಸ್‌ ಬ್ಲೌಸ್‌ ಪ್ರಿಯರ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant News: ಮಿಸ್‌ ಕ್ವೀನ್‌ ಆಫ್‌ ಕರ್ನಾಟಕ ಪೇಜೆಂಟ್‌ನಲ್ಲಿ ಕಿರೀಟ ತೊಟ್ಟವರಾರು?

Exit mobile version