ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವಿನ್ಯಾಸದ ಬೆಲ್ಟ್ ಡ್ರೆಸ್‌ಗಳು(Belt dress) ಯುವತಿಯರ ಮನ ಗೆದ್ದಿವೆ. ಹುಡುಗಿಯರ ಆಯ್ಕೆಗೆ ಅನುಗುಣವಾಗಿ ನಾನಾ ಶೈಲಿಯ ಬೆಲ್ಟ್ ಡ್ರೆಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
ಅದರಲ್ಲೂ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಬೆಲ್ಟ್‌ನೊಂದಿಗೆ ಬಿಡುಗಡೆಯಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಅದರಲ್ಲೂ ಹೆಚ್ಚು ಪ್ರಚಲಿತದಲ್ಲಿರುವ ಮಾನೋ ಕ್ರೋಮ್ ವರ್ಣದವು ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್‌ಗಳು ಟೀನೇಜ್ ಹುಡುಗಿಯರನ್ನು ಸೆಳೆದಿವೆ. ಇನ್ನು ಸ್ಟೇಟ್‌ಮೆಂಟ್ ಬೆಲ್ಟ್ ಡ್ರೆಸ್‌ಗಳು ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರಿಗೆ ಪ್ರಿಯವಾಗತೊಡಗಿವೆ. ನೋಡಲು ಫಿಟ್ ಲುಕ್ ನೀಡುವಂತೆ ಕಾಣುವ ಬೆಲ್ಟ್ ಡ್ರೆಸ್‌ಗಳು(Belt dress) ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಎಂಟ್ರಿ ನೀಡಿದ್ದು, ಈ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.
ಮಾನೋಕ್ರೋಮ್ ಬೆಲ್ಟ್ ಡ್ರೆಸ್
ಈ ಉಡುಪಿನಲ್ಲಿ ಅಟ್ಯಾಚ್ ಆಗಿರುವ ಬೆಲ್ಟ್ ಸೇಮ್ ಟು ಸೇಮ್ ಉಡುಪಿನ ಬಣ್ಣದ್ದಾಗಿರುತ್ತವೆ. ಒಂದೇ ಶೇಡ್ ಹೊಂದಿರುತ್ತವೆ. ಸಿನಿಮಾ ತಾರೆಯರು ಈ ಶೈಲಿಯ ಡ್ರೆಸ್ ಪ್ರಿಯರು.
ಸ್ಟೇಟ್‌ಮೆಂಟ್ ಬೆಲ್ಟ್ ಡ್ರೆಸ್
ಇವು ಉಡುಪಿನ ಥೀಮ್‌ಗೆ ತಕ್ಕಂತೆ ವಿನ್ಯಾಸವನ್ನೊಳಗೊಂಡ ವಿಶೇಷ ರೀತಿಯ ಬೆಲ್ಟ್‌ಗಳು. ಡ್ರೆಸ್‌ನೊಂದಿಗೆ ಇವು ಕೂಡ ಬೋಲ್ಡ್ ಪ್ಯಾಟರ್ನ್ ನಲ್ಲಿರುತ್ತವೆ. ಔಟ್ ಫಿಟ್ ಜತೆ ಎದ್ದು ಕಾಣುತ್ತವೆ. ಇವುಗಳ ಬೆಲೆ ಕೊಂಚ ಹೆಚ್ಚು. ರಿಮೂವಬಲ್ ಬೆಲ್ಟ್ ಆಗಿದ್ದಲ್ಲಿ ಇತರೇ ಉಡುಪಿನೊಂದಿಗೂ ಧರಿಸಬಹುದು. ಇಂತಹ ಬೆಲ್ಟ್‌ಗಳನ್ನು ಇತರೇ ಡ್ರೆಸ್‌ಗಳೊಂದಿಗೆ ಧರಿಸುವುದಾದಲ್ಲಿ ಗಾಢ ಬಣ್ಣಗಳಿಗೆ ಲೈಟ್ ಶೇಡ್‌ನ ಟ್ರೌಸರ್‌ಗಳನ್ನುಮ್ಯಾಚ್ ಮಾಡಬಹುದು. ಮಾಡೆಲ್‌ಗಳು ಈ ಮಾದರಿಯ ಬೆಲ್ಟ್ ಡ್ರೆಸ್ ಹೆಚ್ಚು ಧರಿಸುತ್ತಾರೆ.
ಬಿಗ್ ಬಕಲ್ ಬೆಲ್ಟ್ ಡ್ರೆಸ್
ಟಮ್ಮಿಯ ಭಾಗವನ್ನು ಹೈಲೈಟ್ ಮಾಡುವ ಬಿಗ್ ಬಕಲ್ ಬೆಲ್ಟ್ ಡ್ರೆಸ್‌ಗಳು ರೆಟ್ರೋ ಲುಕ್ ನೀಡುತ್ತವೆ. ಇಂತಹ ಉಡುಪುಗಳನ್ನು ಹಳೆಯ ಸಿನಿಮಾಗಳಲ್ಲಿ ಕಾಣಬಹುದು. ಆದರೆ, ಈ ಉಡುಪಿಗೆ ಹೆಚ್ಚು ಆಕ್ಸೆಸರೀಸ್ ಧರಿಸಬಾರದು. ಬಿಗ್ ಬೆಲ್ಟ್ ಹಾಗೂ ದೊಡ್ಡ ಬಕಲ್ ಡ್ರೆಸ್‌ಗಳು ಮ್ಯಾಕ್ಸಿ ಶೈಲಿಯ ಡ್ರೆಸ್‌ನಲ್ಲಿ ಲಭ್ಯ.
ಟೈಯಿಂಗ್ ಬೆಲ್ಟ್ ಡ್ರೆಸ್
ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಬೆಲ್ಟ್ ಇದಾಗಿದ್ದು, ಟೈಯಿಂಗ್ ಮಾಡುವ ಅಪ್ಷನ್ ಇರುತ್ತದೆ. ಸೈಡ್, ಸೆಂಟರ್ ಹಾಗೂ ಹಿಂದೆ ಟೈಯಿಂಗ್ ಮಾಡುವ ವಿಧಾನವನ್ನು ಈ ಡ್ರೆಸ್‌ನಲ್ಲಿ ಅಳವಡಿಸಲಾಗಿರುತ್ತದೆ. ಈ ಉಡುಪಿನಲ್ಲಿನ ಬೆಲ್ಟ್ ಮೃದುವಾದ ಫ್ಯಾಬ್ರಿಕ್ ಒಳಗೊಂಡಿರುತ್ತದೆ. ಇತರೇ ಡ್ರೆಸ್‌ಗಳೊಂದಿಗೆ ಧರಿಸಲು ಆಗುವುದಿಲ್ಲ.
ಕ್ಯಾಶುವಲ್ ಬೆಲ್ಟ್ ಡ್ರೆಸ್
ಕ್ಯಾಶುವಲ್ ಬೆಲ್ಟ್‌ಗಳನ್ನು ಒಳಗೊಂಡ ಉಡುಪುಗಳು ನಾರ್ಮಲ್ ಲುಕ್ ಮಾತ್ರ ನೀಡುತ್ತವೆ.
ಫಾರ್ಮಲ್ ಬೆಲ್ಟ್ ಡ್ರೆಸ್
ಸ್ಲಿಮ್ ಹಾಗೂ ಸರಳವಾದ ಬೆಲ್ಟ್ ಡ್ರೆಸ್ ಈ ವಿಭಾಗಕ್ಕೆ ಸೇರುತ್ತದೆ. ಯಾವುದೇ ಫ್ಯಾನ್ಸಿ ಡಿಸೈನ್ ಇಲ್ಲದ ಸರಳ ಬಕಲ್‌ಗಳನ್ನು ಹೊಂದಿದ ಗೋಲ್ಡನ್ ಹಾಗೂ ಸಿಲ್ವರ್‌ನವು ಈ ವಿನ್ಯಾಸದಲ್ಲಿ ಚಾಲ್ತಿಯಲ್ಲಿವೆ. ಈ ಬೆಲ್ಟ್‌ಗಳನ್ನು ತೆಗೆದು ಇತರೇ ಉಡುಪುಗಳೊಂದಿಗೂ ಧರಿಸಬಹುದು.
ಯಾವುದೆಲ್ಲಾ ಲಭ್ಯ?
ಕಾಂಟ್ರಾಸ್ಟ್ ಶೇಡ್ಸ್ ನ ಪೇಟೆಂಟ್ ಬೆಲ್ಟ್ ಡ್ರೆಸ್, ಬೂಟ್ ಕಟ್ ಜೀನ್ಸ್‌ಗೆ ಹೊಂದುವ ಆರ್ನಾಟ್ ಬಕ್ಕಲ್ಸ್ ಬೆಲ್ಟ್‌ಡ್ರೆಸ್, ಹವರ್ ಗ್ಲಾಸ್ ಶೇಪ್ ನೀಡುವ ಡಬ್ಬಲ್ ಬಕ್ಕಲ್ ಡ್ರೆಸ್, ಸ್ಕಿನ್ನಿ ಬೆಲ್ಟ್ ಡ್ರೆಸ್, ಬ್ಲೇಜರ್ ಹಾಗೂ ಕೋಟ್‌ನಂತಹ ಉಡುಪುಗಳಲ್ಲಿನ ಇಕ್ವೆಟೇರಿಯನ್, ವ್ರಾಪ್, ಕ್ಲೊಶರ್, ಫ್ರಿಂಝ್, ಲೂಪ್ ಲೆಯರ್, ಕೆವ್ ಬಕ್ಕಲ್ ಬೆಲ್ಟ್ ಡ್ರೆಸ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಬಿಸಿಲಲ್ಲಿ ಮೇಕಪ್ ಕಾಪಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
…………