ಸಂದರ್ಶನ: ಶೀಲಾ ಸಿ. ಶೆಟ್ಟಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೊಲರ್ ಆಗಿರುವ ನಮ್ರತಾ ಜೈನ್ ಸಖತ್ ಕ್ರಿಯೇಟಿವ್ ಲೇಡಿ. ಸಿಕ್ಕ ಸಮಯದಲ್ಲಿ ಕಸದಲ್ಲೂ ಕಲಾತ್ಮಕ ವಸ್ತುಗಳನ್ನು ಸಿದ್ಧಪಡಿಸುವ ಚಾಣಾಕ್ಷೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸೆಸ್ ಇಂಡಿಯಾ ಕರ್ನಾಟಕ 3 ನೇ ರನ್ನರ್ ಅಪ್ ಜೊತೆಗೆ ಕ್ರಿಯೇಟಿವ್ ಕ್ವೀನ್ 2023, ವಿವಾಶಿಸಿಯಸ್ ಟೈಟಲ್ ವಿಜೇತರಾಗಿದ್ದಾರೆ. ಇವರು ಈ ಬಾರಿಯ ಮಾಡೆಲ್ ಫ್ಯಾಷನ್ ಲೈಫ್ (Model Fashion life) ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.
ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು ?
ನನಗೆ ಇಂಡಿಯನ್‌ವೇರ್ಸ್ ಇಷ್ಟ. ಹೈ ವೇಸ್ಟ್ ಪ್ಯಾಂಟ್ ಹಾಗೂ ಕ್ರಾಪ್ ಟಾಪ್ ಧರಿಸಲು ಇಷ್ಟಪಡುತ್ತೇನೆ. ಹಳೆಯ ಔಟ್‌ಫಿಟ್‌ಗಳಿಗೆ ಹೊಸ ಲುಕ್ ನೀಡಿ ಧರಿಸುವುದು ನನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲೊಂದು. ಇನ್ನು ಬ್ಲೇಝರ್ ಹಾಗೂ ಆಕ್ಸೆಸರೀಸ್ ಧರಿಸುವುದು ನನ್ನ ಚಾಯ್ಸ್‌ನಲ್ಲಿದೆ.
ವಿಂಟರ್ ಫ್ಯಾಷನ್‌ಗೆ ಏನು ಪ್ರಿಫರ್ ಮಾಡುತ್ತೀರಾ? ಯಾವ ಟಿಪ್ಸ್ ನೀಡುತ್ತೀರಾ?
ವಿಂಟರ್‌ನಲ್ಲಿ ನಾನಂತೂ ಕಂಫರ್ಟಬಲ್ ಉಡುಗೆಗಳನ್ನು ಧರಿಸುತ್ತೇನೆ. ಇತರರು ಕೂಡ ಇದನ್ನೇ ಫಾಲೋ ಮಾಡುವುದು ಉತ್ತಮ. ಹೊಸದಾಗಿ ಖರೀದಿಸಲಾಗದಿದ್ದಲ್ಲಿ ಸಮ್ಮರ್‌ನ ಔಟ್‌ಫಿಟ್‌ಗಳನ್ನೇ ಮಿಕ್ಸ್ ಮ್ಯಾಚ್ ಮಾಡಿ ಲೇಯರ್ ಲುಕ್ ನೀಡಬಹುದು.ಇನ್ನು ಸಂಜೆ ವೇಳೆ ಹೊರ ಹೋಗುವಾಗ ಔಟ್‌ಫಿಟ್ ಜೊತೆ ಸ್ಕಾರ್ಫ್ ಸ್ಟೈಲಿಂಗ್ ಮಾಡಬಹುದು. ಸ್ಕಟ್ರ್ಸ್ ಜೊತೆ ಸ್ಟಾಕಿಂಗ್ಸ್ ಧರಿಸಬಹುದು.
ವಿಂಟರ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಿಂಪಲ್ ಟಿಪ್ಸ್ ನೀಡಿ?
ಓವರ್‌ಕೋಟ್ ಧರಿಸಿ. ಹೈ ಬೂಟ್ಸ್ ಲಾಂಗ್ ಸ್ಕಟ್ರ್ಸ್ ಮಿಕ್ಸ್ ಮಾಡಿ. ಶಾಲ್ ಬಳಸಿ. ಜೀನ್ಸ್ ಜೊತೆ ಜಾಕೆಟ್ ಧರಿಸಿ. ಪುಲ್‌ಓವರ್ಸ್ ಆಯ್ಕೆ ಮಾಡಿ. ಟ್ರೆಂಡಿಯಾಗಿ ಕಾಣಿಸುವುದು.
ವಿಂಟರ್ ಬ್ಯೂಟಿ ಟಿಪ್ಸ್ ನೀಡುತ್ತೀರಾ?
ವೀಕೆಂಡ್‌ನಲ್ಲಿ ಕೂದಲಿಗೆ ಎಣ್ಣೆ ಹಚ್ಚಿ. ಸ್ನಾನಕ್ಕೆ ಹೆಚ್ಚು ಬಿಸಿ ನೀರು ಬೇಡ. ಸನ್‌ಸ್ಕ್ರೀನ್ ಇಲ್ಲದೇ ಹೊರ ನಡೆಯಬೇಡಿ. ಮಾಯಿಶ್ಚರೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಜೆನ್ ಜಿ ಹುಡುಗಿಯರ ವಿಂಟರ್ ಹಾಟ್ ಲುಕ್‌ಗೆ ಕ್ರಾಪ್ಡ್ ಉಲ್ಲನ್ ಸ್ಟೆಟರ್ಸ್ ಸಾಥ್