ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಸೋನಂ ಬಾಜ್ವಾ 3 ಡಿ ವೆಟ್ ಡ್ರೆಸ್ ಲುಕ್ (Sonam Bajwa Wet Look Dress) ಟ್ರೋಲ್‌ಗೊಳಗಾಗಿದೆ. ಹೌದು, ಸ್ಟೈಲ್ ಅವಾರ್ಡ್ ಸಮಾರಂಭವೊಂದರಲ್ಲಿ 3 ಡಿ ವೆಟ್ ಡ್ರೆಸ್ ಲುಕ್ (Wet Dress Look) ಕಾಣಿಸಿಕೊಂಡಿದ್ದ ಸೋನಂ ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಜತೆಗೆ ಉರ್ಫಿ ಜಾವೆದ್‌ರ ಸ್ಟೈಲಿಂಗ್ ಹೋಲುವಂತಿದೆ? ಅವರೇನಾ ಡಿಸೈನರ್ ಎಂದೆಲ್ಲಾ ಕೆಲವರು ಅವರನ್ನು ಮುಲಾಜಿಲ್ಲದೇ ಕಾಲೆಳೆದಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೋನಂ, ಇದು ನನ್ನ ಫ್ಯಾಷನ್ ಚಾಯ್ಸ್ ಎಂದಿದ್ದಾರೆ.
ಯಾರಿದು ಸೋನಂ ಬಾಜ್ವಾ
ಕಳೆದ 2012ರಲ್ಲಿ ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕ ಪ್ರವೇಶಿಸಿದ ಸೋನಂ, ಫೆಮಿನಾ ಇಂಡಿಯಾ 2012ರಲ್ಲಿ ಸ್ಪರ್ಧಿಸಿದ್ದರು. ನಂತರ ಪಂಜಾಬಿ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೂ ಕಾಲಿಟ್ಟರು. ನಂತರ ತಮಿಳು ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಅಷ್ಟೇ ಏಕೆ? ಇತ್ತೀಚೆಗೆ ನಟ ಅಕ್ಷಯ್ ಕುಮಾರ್, ನೋರಾ ಅವರೊಂದಿಗೆ ದಿ ಎಂಟರ್‌ಟೈನರ್ಸ್ ಟೂರ್‌ನಲ್ಲಿ ಅಮೆರಿಕದಲ್ಲೆಲ್ಲ ಸುತ್ತಾಡಿ ಕಾರ್ಯಕ್ರಮ ನೀಡಿದ್ದರು.
ಏನಿದು 3 ಡಿ ವೆಟ್ ಡ್ರೆಸ್?
ತಕ್ಷಣಕ್ಕೆ ನೋಡಲು ಇಡೀ ಉಡುಪು ಒದ್ದೆಯಾದಂತೆ ಕಾಣಿಸುವ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಲಾದ ಗೌನ್ ಇದು. ಇದು ಸಿಂಡಿಕಲ್ ಚೇಬರ್ 3 ಡಿ ಪ್ರಿಂಟೆಡ್ ಡ್ರೆಸ್ ಎನ್ನಬಹುದು. ನೆಕ್‌ಲೈನ್ ಸುತ್ತಮುತ್ತ ಕಟೌಟ್ ವಿನ್ಯಾಸವಿರುವ ಈ ಗೌನ್ ನೋಡಲು ದೇಹಕ್ಕೆ ಅಂಟಿಕೊಂಡಂತಿರುತ್ತದೆ. ದೇಹದ ಭಾಗಗಳನ್ನು ಹೈಲೈಟ್ ಮಾಡುತ್ತದೆ. ಹಾಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸೋನಂ ಸೆಲ್ಫ್ ಸ್ಟೈಲಿಂಗ್
ಈ ಗೌನ್‌ಗೆ ಸೋನಂ ಮ್ಯಾಚ್ ಮಾಡಿದ್ದ ಪಂಪ್ ಹೀಲ್ಸ್ ಹಾಗೂ ಮಿನಿಮಲ್ ಜ್ಯುವೆಲರಿ ಪರ್ಫೆಕ್ಟ್ ಲುಕ್ ನೀಡಿತ್ತು. ಇನ್ನು ಇದಕ್ಕೆ ಮ್ಯಾಚ್ ಆದ ಗ್ಲಾಮ್ ಲುಕ್ ನೀಡುವ ಗ್ಲೋಸಿ ಮೇಕಪ್ , ಸೈಡ್‌ನಲ್ಲಿ ಕರ್ಲಿ ಹೇರ್ ಲಾಕ್ಸ್, ಶೈನಿಂಗ್ ಚೀಕ್ಸ್ ಬ್ಲಶ್, ಮೋಹಕ ಐ ಮೇಕಪ್ ಅವರನ್ನು ಮತ್ತಷ್ಟು ಹಾಟ್ ಆಗಿ ಬಿಂಬಿಸಿತ್ತು. ಅಂದಹಾಗೆ, ಮೇಕಪ್ ಮಾಡಿದ್ದು ಬೇರ್ಯಾರೂ ಅಲ್ಲ, ಸೋನಂ ಖುದ್ದು ತಮ್ಮ ಮೇಕಪ್ ಹಾಗೂ ಸ್ಟೈಲಿಂಗ್ ಮಾಡಿಕೊಂಡಿದ್ದರು. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ ಕೂಡ.
ಇನ್ನು ಸೋನಂ ಪ್ರಕಾರ, ಫ್ಯಾಷನ್ ಎಂಬುದು ಅವರವರ ಚಾಯ್ಸ್ ಮೇಲೆ ಡಿಪೆಂಡ್ ಆಗಿರುತ್ತದೆ. ಟ್ರೋಲ್ ಮಾಡಿರುವುದಕ್ಕೆ ಬೇಸರವಿಲ್ಲ! ಬದಲಿಗೆ ನನ್ನ ಫ್ಯಾಷನ್ ಸ್ಟೇಟ್‌ಮೆಂಟ್ ಯೂನಿಕ್ ಆಗಿದೆಯಲ್ಲ ಎಂದು ಖುಷಿಯಾಗುತ್ತದೆ ಎಂದು ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Zebra Strips Print Fashion: ಮತ್ತೆ ಮರಳಿದ ಇಲ್ಯೂಷನ್ ಕ್ರಿಯೇಟ್ ಮಾಡುವ ಆಕರ್ಷಕ ಜೀಬ್ರಾ ಪ್ರಿಂಟ್ಸ್ ಫ್ಯಾಷನ್