Site icon Vistara News

South India Fashion Week News: ಸೌತ್‌ ಇಂಡಿಯಾ ಫ್ಯಾಷನ್‌ ವೀಕ್‌ಗೆ ಡಾ. ಸಂಜಯ್‌ ನೀಲನ್‌ ಚೇರಿ ಕೊರಿಯಾಗ್ರಫಿ

South India Fashion Week News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾಡೆಲ್‌ಗಳು ಒಬ್ಬೊಬ್ಬರು ತಮ್ಮದೇ ಆದ ಸ್ಟೈಲ್‌ನಲ್ಲಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಾ ನೋಡುಗರ ಮನ ಸೆಳೆದರು. ಹೌದು. ಉದ್ಯಾನನಗರಿಯಲ್ಲಿ ಈ ಸೀಸನ್‌ನಲ್ಲಿ ನಡೆದ ಸೌತ್‌ ಇಂಡಿಯಾ ಫ್ಯಾಷನ್‌ ವೀಕ್‌ (South India Fashion Week News) ಫ್ಯಾಷನ್‌ ಕ್ಷೇತ್ರದ  ಸೆಲೆಬ್ರೆಟಿಗಳು  ಹಾಗೂ ಮಾಡೆಲ್‌ಗಳ ಸಮಾಗಮಕ್ಕೆ ಸಾಕ್ಷಿಯಾಗಿತ್ತು.   

ಫ್ಯಾಷನ್‌ ಟೆರೆಕ್ಸ್ ವೆಂಚರ್‌, ಇಂಡಿಯನ್‌ ಫ್ಯೂಚರ್‌ ಫ್ಯಾಷನ್‌ ಐಕಾನ್‌ ಹಾಗೂ ಜಿಎಮ್‌ಎಸ್‌ ಎವಿಯೇಷನ್ ಇನ್ಸ್‌ಟಿಟ್ಯೂಟ್‌ ಸಂಯುಕ್ತಾಶ್ರಯದಲ್ಲಿ ನಡೆದ ಸೌತ್‌ ಇಂಡಿಯಾ ಫ್ಯಾಷನ್‌ ವೀಕ್‌, ನಿರ್ದೇಶಕರಾದ ಅಮೋಘ್‌ ಹರೀಶ್‌ ಹಾಗೂ ಅಶ್ವಿನಿ ನಾಯಕ್‌ ಹಾಗೂ ಶೋ ಡೈರೆಕ್ಟರ್‌ ಆದರ್ಶ್ ಜೈನ್‌ ಅವರ ನೇತೃತ್ವದಲ್ಲಿ ನಡೆಯಿತು.

ಡಾ. ಸಂಜಯ್‌ ನೀಲನ್‌ ಚೇರಿ  ಕೊರಿಯಾಗ್ರಫಿ

ಖುದ್ದು ಮಾಡೆಲ್‌ ಆಗಿರುವ ಡಾ. ಸಂಜಯ್‌ ನೀಲನ್‌ ಚೇರಿಯವರ ಕೊರಿಯಾಗ್ರಾಫಿಯಲ್ಲಿ ನಡೆದ ಈ ಫ್ಯಾಷನ್‌ ವೀಕ್‌ನಲ್ಲಿ ಮಾಡೆಲ್‌ಗಳ ಸ್ಟೈಲಿಂಗ್‌ ಅತ್ಯಾಕರ್ಷಕವಾಗಿತ್ತು. ಫ್ಯಾಷನ್‌ ಶೋನಲ್ಲಿ ಕೊರಿಯಾಗ್ರಫಿ ಮಾಡುವುದು ಉತ್ಸಾಹದ ಕೆಲಸ. ಇನ್ನು ಸ್ಟೈಲಿಂಗ್‌ ಮಾಡುವುದೆಂದರೇ ಖುಷಿಯಾಗುತ್ತದೆ ಎಂದು ಡಾ. ಸಂಜಯ್‌ ನೀಲನ್‌ಚೇರಿ  ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡರು.

ಪ್ರಿಯಾ ಪ್ರಶಾಂತ್‌ ಶೋ ಸ್ಟಾಪರ್‌ ವಾಕ್‌

ಈ ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ ಹಾಗೂ ಮಾಡೆಲ್‌ ಪ್ರಿಯಾ ಪ್ರಶಾಂತ್‌ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದರು. ಅವರ ಡಿಸೈನರ್‌ವೇರ್‌ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.  

ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ ಮಾತು

“ಫ್ಯಾಷನ್‌ ಎಂಬುದು ಎಂದಿಗೂ ಮರೆಯಾಗದ ಕ್ಷೇತ್ರ. ಆಯಾ ಪ್ರಸ್ತುತ ಪರಿಸ್ಥಿತಿಯೊಂದಿಗೆ ತನ್ನದೇ ಆದ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ” ಎಂದು ಸೂಪರ್‌ ಮಾಡೆಲ ಸಂತೋಷ್‌ ರೆಡ್ಡಿ ತಮ್ಮ ಮಾತುಗಳನ್ನು ಹಂಚಿಕೊಂಡರು.

ಇದನ್ನೂ ಓದಿ: Party Fashion: ಬಿಹೈವ್‌ ಹೈ ಪಾರ್ಟಿ ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ನಟಿ ನೇಹಾ ದುಪಿಯಾ

Exit mobile version