ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ತಾರೆ ರಾಧಿಕಾ ಆಪ್ಟೆಯ(Radhika Apte) ಸೌಂದರ್ಯದ ರಹಸ್ಯ ಸೆಲ್ಫ್ ಲವ್ ಅಂತೆ!
ಹೌದು. ಇದಕ್ಕೆ ಪೂರಕ ಎಂಬಂತೆ ಅವರು, ಸಾಮಾಜಿಕ ಜಾಲತಾಣದಲ್ಲಿ ಮಿರರ್ ಮುಂದಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ನಾನಾ ಬಗೆಯ ಸೆಲ್ಫ್ ಲವ್ ಥೀಮ್ ಇರುವ ಫೋಟೋಗಳನ್ನು ಹಂಚಿಕೊಳ್ಳುವ ನಟಿ ರಾಧಿಕಾ, ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು ಎಂದು ಪೋಸ್ಟ್‌ಗಳ ಮೂಲಕ ಹೇಳಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸೌಂದರ್ಯದ ಬಗ್ಗೆ ಮಾತನಾಡಿರುವ ಅವರು ”ನನಗಂತೂ ಹೊಳೆಯುವ ಪೊರ್ಸಲಿನ್ ಬ್ಯೂಟಿಯಂತಾಗಲು ಖಂಡಿತಾ ಇಷ್ಟವಿಲ್ಲ. ಬದಲಿಗೆ ಆದಷ್ಟೂ ನ್ಯಾಚುರಲ್ ಲುಕ್‌ನಲ್ಲೆ ಕಾಣಲು ಬಯಸುತ್ತೇನೆ. ನನ್ನ ಪ್ರಕಾರ, ನಮ್ಮ ಸೌಂದರ್ಯ ನಮ್ಮ ಐಡೆಂಟಿಟಿ. ಇದರೊಂದಿಗೆ ಮುಖದಲ್ಲಿ ನಗು ಇದ್ದರೇ ಸಾಕು ಅಂದ ಹೆಚ್ಚುತ್ತದೆ” ಎಂದಿದ್ದಾರೆ.
ಬ್ಯೂಟಿ ಮಂತ್ರ
”ಅವಶ್ಯವಿದ್ದಾಗ ಕ್ಲೆನ್ಸಿಂಗ್ ಮಾಡುತ್ತೇನೆ. ಮಾಯಿಶ್ಚರೈಸರ್ ಬಳಸುತ್ತೇನೆ. ತ್ವಚೆಯ ಸೌಂದರ್ಯ ಕಾಪಾಡಲು ಆಗಾಗ್ಗೆ ಅಮ್ಮ ಹೇಳಿ ಕೊಟ್ಟ ಅಲೋವೆರಾ ಫೇಸ್‌ಪ್ಯಾಕ್ ಹಾಕುತ್ತೇನೆ. ಇದು ತ್ವಚೆಯನ್ನು ಕಾಂತಿಯುಕ್ತವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ಜತೆಗೆ ಪ್ರತಿದಿನ ಎಳನೀರು ಕುಡಿಯುತ್ತೇನೆ. ಇದು ನನ್ನ ಸಿಂಪಲ್ ಬ್ಯೂಟಿ ಸೀಕ್ರೇಟ್” ಎನ್ನುತ್ತಾರೆ ರಾಧಿಕಾ.
ಸ್ಟೈಲ್ ಸ್ಟೇಟ್‌ಮೆಂಟ್
”ಹೊರಗೆ ಹೋಗುವಾಗ ಬ್ಯಾಂಗಲ್ ಜತೆಗೆ ವಾಚ್ ಧರಿಸುವುದು ನನ್ನ ಯೂನಿಕ್ ಸ್ಟೈಲ್” ಎನ್ನುವ ರಾಧಿಕಾಗೆ ಡಿಸೈನರ್‌ಗಳಾದ ಅನಾವಿಲಾ, ಪಾಯಲ್ ಖಂಡೇವಾಲ್ ಹಾಗೂ ಸಪ್ನಿಲ್ ಶಿಂಧೆಯವರ ಡಿಸೈನರ್ ವೇರ್‌ಗಳೆಂದರೆ ಪ್ರಿಯವಂತೆ. ಇವುಗಳ ಜತೆ ಚಂಕಿ ಫ್ಯಾನ್ಸಿ ಹೀಲ್ಸ್, ಲಾಂಗ್ ಚೈನ್ ನೆಕ್ಲೇಸ್ ಧರಿಸುವುದು ಫೇವರಿಟ್ ಲಿಸ್ಟ್‌ನಲ್ಲಿದೆಯಂತೆ. ಇನ್ನು ಬ್ರೈಟ್ ಲಿಪ್‌ಸ್ಟಿಕ್ ಹಚ್ಚದೆ ಹೊರ ಹೋಗುವುದೇ ಇಲ್ಲ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: ಆಕರ್ಷಕ ತ್ವಚೆಗಾಗಿ ಸೀಸನ್ ಮ್ಯಾಂಗೋ ಫೇಸ್‌ಪ್ಯಾಕ್