ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸುಪುತ್ರ ಆರ್ಯನ್ ಖಾನ್ ತಮ್ಮದೇ ಆದ ಡಿ ಯೋವಲ್ ಎಕ್ಸ್ ಬ್ರಾಂಡ್ (Star Brand) ಮೂಲಕ ಫ್ಯಾಷನ್ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಹೌದು, ಇದುವರೆಗೂ ವೆಬ್‌ಸೀರೀಸ್‌ವೊಂದರ ಸ್ಕ್ರಿಪ್ಟ್ ಹಾಗೂ ಡೈರೆಕ್ಷನ್‌ನಲ್ಲಿ ಬ್ಯುಸಿಯಾಗಿದ್ದ ಆರ್ಯನ್ ಖಾನ್ ಇದೀಗ ಸ್ವಂತ ಬ್ರಾಂಡ್ ಮೂಲಕ ಲಕ್ಷುರಿ ಸ್ಟ್ರೀಟ್‌ವೇರ್‌ಗಳನ್ನು ಪರಿಚಯಿಸಿ, ಒಂದೇ ದಿನದಲ್ಲಿ ತಮ್ಮ ಹೊಸ ಫ್ಯಾಷನ್ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಅಚ್ಚರಿ ಎಂದರೇ ಮೊದಲನೇ ದಿನವೇ ಆನ್‌ಲೈನ್‌ನಲ್ಲಿ ಬಿಡುಗಡೆಮಾಡಿದ್ದ ಜಾಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿದೆಯಂತೆ. ಆ ಮಟ್ಟಿಗೆ ಮೊದಲ ದಿನವೇ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಹಾಗೆಂದು ಈ ಸ್ಟ್ರೀಟ್‌ವೇರ್‌ಗಳು ಕೈಗೆಟಕುವ ಬೆಲೆಯಲ್ಲಿಲ್ಲ!
ಮಗನ ಬ್ರಾಂಡ್‌ಗೆ ಅಪ್ಪನೇ ರಾಯಭಾರಿ
ಇನ್ನು ಮಗನ ಫ್ಯಾಷನ್ ಬ್ರಾಂಡ್ ಉದ್ಯಮಕ್ಕೆ ಅಪ್ಪ ಶಾರುಖ್ ಖಾನ್ ಅವರೇ ಅಧಿಕೃತ ರಾಯಭಾರಿಯಂತೆ. ಈಗಾಗಲೇ ಈ ಕುರಿತ ಜಾಹೀರಾತುಗಳು ಕೂಡ ಬಿಡುಗಡೆಯಾಗಿವೆ. ವೈರಲ್ ಕೂಡ ಆಗಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಮಗನ ಶ್ರೇಯೋಭಿವೃದ್ಧಿ ಬಯಸುವುದು ಪ್ರತಿ ತಂದೆಯ ಕರ್ತವ್ಯ ಮಾತ್ರವಲ್ಲ, ಉದ್ಯಮದಲ್ಲೂ ಯಶಸ್ಸು ಕಾಣಬಯಸುವುದು ಸಾಮಾನ್ಯ. ಹಾಗಾಗಿ ಶಾರುಖ್, ಮಗನ ಈ ಉದ್ಯಮಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಆರ್ಯನ್ ಖಾನ್ ಬ್ರಾಂಡ್‌ನಲ್ಲಿ ಲಭ್ಯವಿರುವುದೇನು?
ಬಾಲಿವುಡ್ ತಾರೆಯರ ಮಕ್ಕಳು ಎಂದರೇ ಕೇಳಬೇಕೇ, ವಿದೇಶದಲ್ಲಿ ಓದಿರುತ್ತಾರೆ. ಹಾಗಾಗಿ ಫ್ಯಾಷನ್ ಸೆನ್ಸ್ ಹೆಚ್ಚು. ಅದರಲ್ಲೂ ಬಿಂದಾಸ್ ಸ್ಟ್ರೀಟ್‌ವೇರ್ ಇಷ್ಟಪಡುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಡಿ ಯೋವಲ್ ಫ್ಯಾಷನ್ ಬ್ರಾಂಡ್‌ನಲ್ಲಿ ಲಕ್ಷುರಿ ಸ್ಟ್ರೀಟ್‌ವೇರ್‌ಗಳನ್ನು ಪರಿಚಯಿಸಿದ್ದಾರೆ. ಜಾಕೆಟ್‌ಗಳು, ಟೀ ಶರ್ಟ್, ಆಕ್ಸೆಸರೀಸ್ ಸದ್ಯಕ್ಕೆ ಬಿಡುಗಡೆಮಾಡಲಾಗಿದೆ.
ಜೆನ್ ಝಿ ಗೆ ಆದ್ಯತೆ
ಡಿ ಯೋವಲ್ ಫ್ಯಾಷನ್ ಬ್ರಾಂಡ್‌ನಲ್ಲಿ ಜೆನ್ ಝಿಗೆ ಆದ್ಯತೆ ನೀಡಲಾಗಿದೆ. ಈ ಜನರೇಷನ್‌ನ ಚಾಯ್ಸ್‌ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿ ಟಿವಿ ಜಾಹೀರಾತುಗಳಿಗಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ಮೂಲಕ ಪ್ರಮೋಷನ್ ಮಾಡಲಾಗುತ್ತಿದೆಯಂತೆ. ಒಟ್ಟಾರೆ, ಶಾರುಖ್ ಮಗನ ಫ್ಯಾಷನ್ ಬ್ರಾಂಡ್ ಸದ್ಯಕ್ಕೆ ಹಿಟ್ ಲಿಸ್ಟ್ ಫ್ಯಾಷನ್‌ನಲ್ಲಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Travel Bag Fashion: ಟ್ರಾವೆಲ್ ಟೈಮ್‌ಗೆ ಸಾಥ್ ನೀಡುವ ಟ್ರೆಂಡಿ ಶೋಲ್ಡರ್ ಸ್ಲಿಂಗ್ ಬ್ಯಾಗ್