Site icon Vistara News

Star Dress Shopping : ಮಾರಾಟಕ್ಕಿವೆ ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಡಿಸೈನರ್‌ವೇರ್ಸ್‌

Star Dress Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ನಟಿ ಕತ್ರೀನಾ ಕೈಫ್‌ (Katrina Kaif) ಧರಿಸಿದ ಬ್ರಾಂಡೆಡ್‌ ಡ್ರೆಸ್ಸನ್ನು (Branded dress) ನೀವೂ ಧರಿಸಬಹುದು. ಅದು ರಿಪ್ಲೀಕಾ ಅಲ್ಲ. ಖುದ್ದು ಕತ್ರೀನಾ ಧರಿಸಿದ್ದ ಒರಿಜಿನಲ್‌ ಉಡುಪನ್ನೇ ಧರಿಸಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು! ಹೌದು. ಅದು ಹೇಗೆ ಸಾಧ್ಯ ಅಂತಿರಾ? ಇನ್ನು ಇದು ಸಾಧ್ಯ. ನಟಿ ಕತ್ರೀನಾ ಕೈಫ್‌ ತಮ್ಮ ವಾರ್ಡ್ರೋಬ್‌ನಲ್ಲಿರುವ ಆಯ್ದ ಕೆಲವು ಉಡುಪುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಲಕ್ಷುರಿ ಉಡುಪುಗಳನ್ನು ಮಾರಾಟ ಮಾಡುವ ಸರಿಟೊರಿಯಾ ಹೆಸರಿನ ಆನ್‌ಲೈನ್‌ ಬ್ರಾಂಡ್‌ನೊಂದಿಗೆ ಪಾರ್ಟ್‌ನರ್‌ಶಿಪ್‌ ಮಾಡಿಕೊಂಡಿದ್ದು, ನಟಿಯ ಅಭಿಮಾನಿಗಳು ನೇರವಾಗಿ ಅಲ್ಲಿಂದಲೇ ಬೇಕಾದ ಉಡುಪನ್ನು ಸುಲಭವಾಗಿ ಖರೀದಿಸಬಹುದು.

ಇ-ಕಾಮರ್ಸ್ ವೆಬ್‌ಸೈಟ್‌ ಮೂಲಕ ಮಾರಾಟ ಆರಂಭ

ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ ನಟಿ ಕತ್ರೀನಾ ಕೈಫ್‌ ಸಿನಿಮಾ, ಆವಾರ್ಡ್ ಸಮಾರಂಭ, ಪಬ್ಲಿಕ್‌ ಪ್ರೋಗ್ರಾಂ, ಸೆಲೆಬ್ರಿಟಿ ಕಾರ್ಯಕ್ರಮಗಳು… ಹೀಗೆ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಒಮ್ಮೆ ಧರಿಸಿದ ಉಡುಪನ್ನು ಮತ್ತೆ ಧರಿಸುವುದಿಲ್ಲ. ರಿಪೀಟ್‌ ಮಾಡುವುದಿಲ್ಲ. ಪರಿಣಾಮ, ಕತ್ರೀನಾ ಬಳಿ ವಾರ್ಡ್ರೋಬ್‌ಗಳು ತುಂಬಿ ತುಳುಕುತ್ತಿವೆಯಂತೆ. ಕೆಲವು ಉಡುಪುಗಳು ನಾನಾ ನೆನಪನ್ನು ತಳುಕು ಹಾಕಿಕೊಂಡಿವೆಯಂತೆ. ಅಂತಹವನ್ನು ಮಾತ್ರ ಇರಿಸಿಕೊಂಡು, ಇನ್ನುಳಿದ ಕೆಲವು ಡಿಸೈನರ್‌ ಉಡುಪುಗಳನ್ನು ಕತ್ರೀನಾ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಮಾಧ್ಯಮದ ಸಂದರ್ಶನವೊಂದರಲ್ಲೂ ಹೇಳಿಕೊಂಡಿದ್ದರು. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ, ಈ ವೆಬ್‌ಸೈಟ್‌ನಲ್ಲಿ ಮಾರಾಟ ಈಗಾಗಲೇ ಆರಂಭಗೊಂಡಿದೆ.

ರಿಸೇಲ್‌ ಮಾಡುತ್ತಿರುವ ಮೊದಲ ಬಾಲಿವುಡ್‌ ನಟಿ

ನಟಿ ಮಾತ್ರವಲ್ಲ, ತಮ್ಮ ಕಾಸ್ಮೆಟಿಕ್‌ ಉತ್ಪನ್ನವನ್ನು ಬಿಡುಗಡೆ ಮಾಡುವ ಮೂಲಕ ಇದೀಗ ಉದ್ಯಮಿಯೂ ಆಗಿರುವ ಕತ್ರೀನಾ, ಸರಿಟೋರಿಯಾ ಆನ್‌ಲೈನ್‌ ಬ್ರಾಂಡ್‌ ಮುಖಾಂತರ ಆಯ್ದ ಉಡುಪುಗಳನ್ನು ರಿಸೇಲ್‌ ಮಾಡುತ್ತಿರುವ ಮೊದಲ ನಟಿ. ಈ ಮಾರಾಟದಿಂದ ಬರುವ ಹಣವನ್ನು ಕತ್ರೀನಾ ಮಧುರೈನಲ್ಲಿರುವ ಮೌಂಟೇನ್‌ ವ್ಯೂ ಶಾಲೆಯ ಅಭಿವೃದ್ಧಿ ಹಾಗೂ ಅಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಿದ್ದಾರಂತೆ.

ವಾರ್ಡ್ರೋಬ್‌ನಿಂದ ನೇರ ರಿಸೇಲ್‌

ವಾರ್ಡ್ರೋಬ್‌ ಕ್ಲೆನ್ಸಿಂಗ್‌ ಎಂದರೂ ತಪ್ಪಿಲ್ಲ! ಒಮ್ಮೆ ಧರಿಸಿದ ಉಡುಪುಗಳು ಹಾಗೆಯೇ ಇಟ್ಟು ಹಾಳಾಗುವುದಕ್ಕಿಂತ ಅದು ಮರು ಉಪಯೋಗ ಮಾಡುವುದು ಉತ್ತಮ. ಇದರಿಂದ ಬರುವ ಹಣದಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ. ಇದು ನನಗೆ ತೃಪ್ತಿ ತಂದಿದೆ ಎಂದು ಹೇಳಿಕೊಂಡಿದ್ದಾರೆ ನಟಿ ಕತ್ರೀನಾ ಕೈಫ್‌.

ಫ್ಯಾಷನ್‌ ವಿಮರ್ಶಕರ ಪ್ರಶಂಸೆ

ಇದು ಸೆಕೆಂಡ್‌ ಹ್ಯಾಂಡ್‌ ಶಾಪಿಂಗ್‌ ಎಂದೆನಿಸಿಕೊಂಡರೂ ಬಹಳಷ್ಟು ಅಭಿಮಾನಿಗಳು ಉತ್ಸಾಹದಿಂದ ಕೊಳ್ಳುತ್ತಾರೆ. ಉಡುಪುಗಳು ರಿಸೈಕಲ್‌ ಆಗುತ್ತವೆ. ಮತ್ತೊಬ್ಬರಿಗೆ ಉಪಯೋಗ ಆಗುವುದರೊಂದಿಗೆ ಸಮಾಜಮುಖಿ ಕೆಲಸಕ್ಕೆ ನಾಂದಿಯಾದಂತೆ ಆಗುತ್ತದೆ. ಇದೊಂದು ಉತ್ತಮ ಬೆಳವಣಿಗೆ. ಇತರೆ ನಟಿಯರು ಈ ಮಾರ್ಗದಲ್ಲೆ ನಡೆಯಬೇಕು. ಕತ್ರೀನಾ ಕೆಲಸ ಮಾದರಿಯಾಗುವಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Stars Fashion | ಅಂಬಾನಿ ಫ್ಯಾಮಿಲಿ ಸಮಾರಂಭದಲ್ಲಿ ಗ್ರ್ಯಾಂಡ್‌ ಎಥ್ನಿಕ್‌ ವೇರ್ಸ್‌ನಲ್ಲಿ ಎಂಟ್ರಿ ಕೊಟ್ಟ ತಾರೆಯರು

Exit mobile version