ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೈರೋದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ಸ್ವರ ಭಾಸ್ಕರ್ ಸೀರೆಯಲ್ಲಿನ ಗಾಡ್ ಮದರ್ ಲುಕ್ ಎಲ್ಲರ ಪ್ರಶಂಸೆಗೊಳಗಾಗಿದೆ. ಹೌದು. ಕೆಂಪು ಬಣ್ಣದ ಡಿಸೈನರ್ ಸೀರೆಗೆ ಕಂಪ್ಲೀಟ್ ಡಿಫರೆಂಟ್ ಡ್ರೇಪಿಂಗ್ ಮಾಡಿರುವುದು ಹಾಗೂ ಹೆಡ್ ಜ್ಯುವೆಲರಿ ಬಳಸಿರುವುದು ಗಾಡ್ ಮದರ್ ಲುಕ್‌ಗೆ ಸಾಥ್ ನೀಡಿದೆ ಎಂದಿದ್ದಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳು.
ಅಬುಜಾನಿ ಸಂದೀಪ್‌ಕೋಸ್ಲಾ ಡಿಸೈನರ್ ಸೀರೆ
ಈಜಿಪ್ಟ್‌ನ ಕೈರೋದಲ್ಲಿ ನಡೆಯುತ್ತಿರುವ ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ, ನಟಿ ಸ್ವರ ಭಾಸ್ಕರ್, ಭಾರತವನ್ನು ಪ್ರತಿನಿಧಿಸಿದ್ದು, ಸೆಲೆಬ್ರಿಟಿ ಡಿಸೈನರ್ ಅಬುಜಾನಿ ಸಂದೀಪ್ ಕೋಸ್ಲಾ ಲೆಬೆಲ್‌ನ ಡಿಸೈನರ್ ಸೀರೆಯಲ್ಲಿ ಮಿಂಚಿದ್ದಾರೆ.
ಸಾಂಪ್ರದಾಯಿಕ ಕಲರ್ ಆದ ಕೆಂಪು ಡಿಸೈನರ್ ಸೀರೆಗೆ ವನ್ಯಾ ಶರ್ಮಾ ಫ್ಯಾಷನ್ ಅಸಿಸ್ಟಂಟ್ ಮಾರ್ಗದರ್ಶನದಂತೆ, ಸ್ಟೈಲಿಸ್ಟ್ ಪ್ರಿಯಾಂಕಾ ಯಾದವ್ ಸ್ಟೈಲಿಂಗ್ ಮಾಡಿದ್ದಾರೆ. ಸೀರೆಗೆ ಮ್ಯಾಚ್ ಆಗುವಂತಹ ಅಮಾಮಾ ಜ್ಯುವೆಲ್ಸ್‌ನ ಹೆಡ್ ಜ್ಯುವೆಲರಿ, ಕರೀಶ್ಮಾ ಜ್ಯುರ್ಲಿ ಡಿಸೈನ್‌ನ ಬಳೆಗಳನ್ನು ಸ್ವರ ಧರಿಸಿದ್ದಾರೆ. ಯಾರಾ ಮಝಿದ್ ಮೇಕಪ್ ಮತ್ತಷ್ಟು ಇವರನ್ನು ಸುಂದರವಾಗಿಸಿದೆ. ಸ್ವರ ಸೀರೆಯನ್ನು ನಾರ್ಮಲ್ ಸ್ಟೈಲ್‌ನಲ್ಲಿ ಡ್ರೆಪ್ ಮಾಡುವ ಬದಲು ದುಪಟ್ಟಾದಂತೆ ಹೊದ್ದಿರುವುದು ಡಿಫರೆಂಟ್ ಲುಕ್ ನೀಡಲು ಕಾರಣವಾಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ರಚಿತಾ ವರ್ಮಾ.
ಏನಿದು ಗಾಡ್ ಮದರ್ ಲುಕ್ ?
ಮಹಾರಾಣಿಯಂತೆ ಕಾಣುವ ಲುಕ್ ಅನ್ನು ಗಾಡ್ ಮದರ್ ಲುಕ್ ಎನ್ನಲಾಗುತ್ತದೆ. ಅದು ಆಯಾ ಪ್ರಾಂತ್ಯ ಅಥವಾ ಕಾನ್ಸೆಪ್ಟ್ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ., ಭಾರತದಲ್ಲಾದರೆ ರಾಯಲ್ ಫ್ಯಾಮಿಲಿಯ ಮಹಾರಾಣಿಯರನ್ನು ಗಾಡ್ ಮದರ್ ಎಂದು ಬಿಂಬಿಸಲಾಗುತ್ತಿತ್ತು. ಹಾಗೆಯೇ, ಈಜಿಪ್ಟ್‌ನಲ್ಲೂ ಕೂಡ ರಾಣಿಯರನ್ನು ಗಾಡ್ ಮದರ್ ಎನ್ನಲಾಗುತ್ತಿತ್ತು. ಇವೆರಡಕ್ಕೂ ಮ್ಯಾಚ್ ಆಗುವಂತಹ ಕಾನ್ಸೆಪ್ಟನ್ನು ಸ್ವರ, ತಮ್ಮ ಸ್ಟೈಲಿಂಗ್‌ನಲ್ಲಿ ಅಳವಡಿಸಿಕೊಂಡಿರುವುದು ಗಾಡ್ ಮದರ್ ಲುಕ್ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಅರ್ಜುನ್.
ಅವರ ಪ್ರಕಾರ, ಮಹಿಳೆಯರು ಧರಿಸುವ ಯಾವುದೇ ಉಡುಪಾಗಬಹುದು ಅದು ನೋಡಲು ರಾಯಲ್ ಲುಕ್ ನೀಡಿದಲ್ಲಿ ಅದನ್ನು ಗಾಡ್ ಮದರ್ ಲುಕ್ ಎನ್ನಬಹುದು ಎನ್ನುತ್ತಾರೆ.
ಒಟ್ಟಿನಲ್ಲಿ, ನಟಿ ಸ್ವರ ಭಾಸ್ಕರ್, ಸೀರೆಯಲ್ಲಿನ ಗಾಡ್ ಮದರ್ ಲುಕ್, ಬಾಲಿವುಡ್ ಫ್ಯಾಷನ್ ಪ್ರಿಯರನ್ನು ಸೆಳೆದಿದೆ ಎನ್ನಲಡ್ಡಿಯಿಲ್ಲ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Kids Fashion | ಥೀಮ್‌ಗೆ ತಕ್ಕಂತೆ ಬದಲಾಗುವ ಇಂದಿನ ಮಕ್ಕಳ ಫ್ಯಾಷನ್