ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ನೇಹಾ ದೂಪಿಯಾ ಅವರಿಗೆ ಬ್ಲೇಝರ್ ಮೇಲಿನ ಪ್ರೇಮ ಹೆಚ್ಚಾಗಿದೆ. ಹಾಗೆನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು. ಹೌದು, ವಿಂಟರ್ ಸೀಸನ್‌ಗೆ ಸೂಟ್ ಆಗುವಂತೆ ಲೇಯರ್ ಲುಕ್‌ಗೆ ಮೊರೆ ಹೋಗಿರುವ ನಟಿ ನೇಹಾ ದೂಪಿಯಾ, ಬ್ಯಾಕ್ ಟು ಬ್ಯಾಕ್ ಲೈಟ್ ಬಣ್ಣಗಳ ನಾನಾ ವಿನ್ಯಾಸದ ಬ್ಲೇಝರ್‌ಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಇದು ಸದ್ಯಕ್ಕೆ ಅವರ ಗ್ಲಾಮರಸ್ ಲುಕ್‌ನಿಂದ ದೂರ ಸರಿಸಿದೆ.
ಗ್ಲಾಮರ್ ಲುಕ್‌ನಿಂದ ಬ್ಲೇಝರ್ ಕಡೆಗೆ
ಅಂದಹಾಗೆ, ನಟಿ ನೇಹಾ ದೂಪಿಯಾ ಮೊದಲಿನಿಂದಲೂ ಗ್ಲಾಮರಸ್ ನಟಿ ಎಂದೇ ಎಲ್ಲರಿಗೂ ಪರಿಚಿತರು. ಮಿಸ್ ಇಂಡಿಯಾ ವಿಜೇತೆ ಕೂಡ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ವೆಬ್ ಸೀರೀಸ್‌ನಲ್ಲೂ ಕಾಣಿಸಿಕೊಂಡರು. ರಿಯಾಲಿಟಿ ಶೋನಲ್ಲೂ ತೊಡಗಿಸಿಕೊಂಡರು. ಈ ಮಧ್ಯೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾದರು. ಎರಡನೇ ಮಗುವಿನ ನಂತರ ಮೊದಲಿಗಿಂತ ಕೊಂಚ ತೂಕ ಹೆಚ್ಚಾಗಿದ್ದರಿಂದಲೋ ಏನೋ ಒಂದಿಷ್ಟು ತಿಂಗಳ ತನಕ ಫ್ರೀ ಸೈಝ್ ಉಡುಪಿನಲ್ಲೆ ಕಾಣಿಸಿಕೊಳ್ಳತೊಡಗಿದರು. ಈ ಮಧ್ಯೆ ಅವರು ಡಿಸೈನರ್‌ವೇರ್‌ಗಳಲ್ಲಿ ಅತಿ ಹೆಚ್ಚು ಆಯ್ಕೆ ಮಾಡಿದ್ದು ಡಿಸೈನರ್ ಬ್ಲೇಝರ್‌ಗಳು. ಇದು ಅವರ ಲುಕ್‌ಗೆ ಸಾಥ್ ನೀಡಿತಲ್ಲದೇ ಅಕರ್ಷಕವಾಗಿಯೂ ಬಿಂಬಿಸತೊಡಗಿತು. ಸಾದಾ ಬ್ಲೇಝರ್, ಶೈನಿಂಗ್ ಕೋಟ್ ಶೈಲಿಯ ಬ್ಲೇಝರ್, ಪ್ರಿಂಟೆಡ್, ಪ್ಯಾಚ್ ವರ್ಕ್ ಬ್ಲೇಝರ್ ಸೇರಿದಂತೆ ಬ್ರೈಟ್ ಕಲರ್‌ನವನ್ನು ಧರಿಸಿ, ಬ್ಲೇಝರ್ ಟ್ರೆಂಡ್‌ಗೆ ಮತ್ತೊಮ್ಮೆ ನಾಂದಿ ಹಾಡಿದರು ಎನ್ನುತ್ತಾರೆ ಸ್ಟೈಲಿಸ್ಟ್ ಚೈತನ್ಯ.
ಧ್ರುವ ಕಪೂರ್ ಬ್ರಾಂಡ್‌ನ ಬ್ಲೇಝರ್
ಯೂನಿ ಸೆಕ್ಸ್ ಡಿಸೈನ್ಸ್, ಜಾಕೆಟ್ ಲುಕ್ ಬ್ಲೇಝರ್, ಫಂಕಿ ಲುಕ್ ಬ್ಲೇಝರ್, ಕಂಟೆಂಪರರಿ ಸ್ಟೈಲ್‌ಗೆ ಸಾಥ್ ನೀಡುವ ಬ್ಲೇಝರ್ ಸೇರಿದಂತೆ ನಾನಾ ಶೈಲಿಯವು ಧ್ರುವ ಕಪೂರ್ ಲೆಬೆಲ್‌ನಲ್ಲಿ ಲಭ್ಯವಿದ್ದು, ಸದ್ಯಕ್ಕೆ ನಟಿ ನೇಹಾ ದೂಪಿಯಾ ವಾರ್ಡ್‌ರೋಬ್‌ಗೆ ಇವು ಲಗ್ಗೆ ಹಾಕಿವೆ. ಪರಿಣಾಮ, ಈ ಬ್ಲೇಝರ್‌ಗಳಲ್ಲೆ ಅವರು ಕಾಣಿಸಿಕೊಳ್ಳತೊಡಗಿದ್ದಾರೆ. ಇವುಗಳನ್ನು ಧರಿಸಿ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇನ್ನು ಸ್ಟೈಲಿಸ್ಟ್ ಪ್ರಿಯಾ ಪ್ರಕಾರ, ಸದ್ಯಕ್ಕೆ ನೇಹಾ ದೂಪಿಯಾ ಟ್ರೆಂಡ್ ಹುಟ್ಟುಹಾಕಿರುವುದು, ಬ್ಲೇಝರ್ ಪ್ರಿಯರು ಹೆಚ್ಚಾಗುವಂತೆ ಮಾಡಿದೆ. ಜಾಕೆಟ್‌ಗಿಂತ ಬ್ಲೇಝರ್‌ಗಳು ಕೊಂಚ ಉದ್ದನಾಗಿರುವುದರಿಂದ ಪ್ಲಂಪಿಯಾಗಿರುವವರಿಗೆ ಇದು ಸೂಟ್ ಆಗುತ್ತದೆ. ಆದರೆ, ಲೈಟ್‌ವೇಟ್ ಹಾಗೂ ಫ್ಯಾಬ್ರಿಕ್ ತೆಳುವಾಗಿರುವುದನ್ನು ಚೂಸ್ ಮಾಡುವುದು ಅಗತ್ಯ ಎಂದು ಬ್ಲೇಝರ್ ಪ್ರಿಯರಿಗೆ ಸಲಹೆ ಕೂಡ ನೀಡುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ Bollywood Stars Fashion | ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ತಾರೆಯರ ಹೈ ಫ್ಯಾಷನ್|