ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಹು ಭಾಷಾ ತಾರೆ ಕಾವ್ಯಾ ಶೆಟ್ಟಿ ಕಂಪ್ಲೀಟ್ ವಿಂಟರ್ ಸೀಸನ್ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಸದ್ಯ ವಿದೇಶ ಪ್ರವಾಸದಲ್ಲಿರುವ ಕಾವ್ಯಾ, ಲಂಡನ್‌ನ ಪ್ರಿ ಕ್ರಿಸ್ಮಸ್ ಸೆಲೆಬ್ರೇಷನ್‌ಗಳನ್ನು ಎಂಜಾಯ್ ಮಾಡುತ್ತಿದ್ದು, ಸ್ನೋ ಫಾಲ್ ಟೈಮ್‌ನ ನಾನಾ ಬಗೆಯ ವಿಂಟರ್ ಸ್ಟ್ರೀಟ್ ಸ್ಟೈಲ್ ಡ್ರೆಸ್‌ಕೋಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಾವ್ಯಾ ಶೆಟ್ಟಿಯ ಲೇಯರ್‌ಲುಕ್
ಲಂಡನ್‌ನಲ್ಲಿ ಈಗಾಗಲೇ ಅತಿ ಕೊರೆಯುವ ಮೈನಸ್ ಡ್ರಿಗ್ರಿ ಹವಾಮಾನವಿದ್ದು, ಸ್ನೋ ಫಾಲ್ ಹೆಚ್ಚಾಗಿದೆ. ಇಲ್ಲಿನ ಕೊರೆಯುವ ಚಳಿಗೆ ನಟಿ ಕಾವ್ಯಾ ಮಾತ್ರವಲ್ಲ, ಎಲ್ಲರೂ ಲೇಯರ್ ಲುಕ್‌ಗೆ ಶರಣಾಗುತ್ತಾರೆ. ಈ ಚುಮು ಚುಮು ಚಳಿಗೆ ಬೆಚ್ಚಗಿಡುವ ಮನಮೋಹಕ ಹಾಗೂ ಆಕರ್ಷಕ ಲೇಯರ್ ಲುಕ್‌ಗಳಲ್ಲಿ ನಟಿ ಕಾವ್ಯಾ ಕಾಣಿಸಿಕೊಂಡಿದ್ದಾರೆ. ನಾನಾ ಡಿಸೈನರ್‌ಗಳ ಡಿಸೈನರ್‌ವೇರ್‌ಗಳ ಜತೆಗೆ ಡಿಫರೆಂಟ್ ಲುಕ್‌ಗಳನ್ನು ಪ್ರಯೋಗಿಸಿದ್ದಾರೆ.
“ಲಂಡನ್‌ನ ವಿಂಟರ್ ಸೀಸನ್‌ಗೆ ತಕ್ಕಂತೆ ಲೇಯರ್ ಲುಕ್ ನನ್ನ ಸದ್ಯದ ಫ್ಯಾಷನ್ ಸ್ಟೇಟ್‌ಮೆಂಟ್. ಅದಕ್ಕೆ ತಕ್ಕಂತೆ ನಾನು ನನ್ನ ಸ್ಟೈಲ್ ಬದಲಿಸಿದ್ದೇನೆ ” ಎನ್ನುವ ನಟಿ ಕಾವ್ಯಾ ಶೆಟ್ಟಿ, ಕನ್ನಡದ ಫ್ಯಾಷೆನಬಲ್ ನಟಿ. ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿರುವ ಕಾವ್ಯಾ, ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದಾರೆ. ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜತೆಜತೆಗೆ ಮಾಡೆಲಿಂಗ್‌ನಲ್ಲೂ ಬ್ಯುಜಿಯಾಗಿರುವ ಇವರ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಸದಾ ಫ್ಯಾಷನ್ ಪ್ರಿಯರಿಂದ ಪ್ರಶಂಸೆಗೊಳಗಾಗಿವೆ.
ಕಾವ್ಯಾ ಧರಿಸಿದ ಡಿಸೈನರ್‌ವೇರ್ಸ್
ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಟ್ರೆಂಚ್‌ಕೋಟ್ ಶೈಲಿಯ ಪಿಸ್ತಾ ಫ್ರಾಕ್‌ನಲ್ಲಿ ಲಂಡನ್ ಐ ಮುಂದೆ ಕಾಣಿಸಿಕೊಂಡಿರುವ ಕಾವ್ಯಾ ಶೆಟ್ಟಿಯವರ ಈ ಫ್ಯಾಷನ್ ಗ್ಲಾಮರಸ್ ಲುಕ್ ನೀಡಿದೆ. ಇನ್ನು ಪ್ರಿಶಾ ಹಾಗೂ ಕೃತಿಕಾ ಅವರ ಟೆಕ್ಸ್ಟ್ ಇರುವ ಸ್ವೆಟರ್ ಪುಲ್‌ಓವರ್ ಹಾಗೂ ಕ್ರೀಮಿಶ್ ಪ್ಯಾಂಟ್ ಅದಕ್ಕೆ ತಕ್ಕಂತೆ ಮ್ಯಾಚ್ ಆಗುವ ಬ್ಲಾಕ್ ಗ್ಲೌವ್ಸ್ ಹಾಗೂ ಬೂಟ್ಸ್ ಜತೆಗೆ ಬೂದು ಬಣ್ಣದ ಉಲ್ಲನ್ ಕ್ಯಾಪ್ ಧರಿಸಿರುವ ಕಾವ್ಯಾ, ಸ್ಟ್ರೀಟ್‌ಸ್ಟೈಲ್ ಸ್ಟೇಟ್‌ಮೆಂಟ್ ಸೀಸನ್‌ಗೆ ತಕ್ಕಂತಿದೆ. ಈಗಾಗಲೇ ಲಂಡನ್‌ನಲ್ಲಿ ಎಲ್ಲೆಡೆ ಪ್ರಿ ಕ್ರಿಸ್ಮಸ್ ಸೆಲೆಬ್ರೇಷನ್ ಇವೆಂಟ್‌ಗಳು ನಡೆಯುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಮತ್ತೊಂದು ದಿನ ಕಾವ್ಯಾ ಧರಿಸಿರುವ ರೆಡ್ ಪಫರ್ ಜಾಕೆಟ್, ಕತ್ತಿಗೆ ಸುತ್ತಿದ ಶಾಲು, ಬ್ಲ್ಯಾಕ್ ಪ್ಯಾಂಟ್, ಸ್ಲಿಂಗ್ ಬ್ಯಾಗ್ ಕಂಪ್ಲೀಟ್ ಬೆಚ್ಚಗಿನ ಲೇಯರ್ ಲುಕ್ ನೀಡಿದ್ದು, ಅಲ್ಲಿನ ಪ್ರಸ್ತುತ ಸನ್ನಿವೇಶಕ್ಕೆ ಸೂಟ್ ಆಗುವಂತಿದೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಕ್ರಿಸ್ಮಸ್ ಡಿಸೈನ್‌ವೇರ್ಸ್