ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗಿಯರ ಫೆವರೇಟ್ ಕಲರ್ ಕ್ಯಾಂಡಿ ಪಿಂಕ್ ಶೇಡ್‌ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಹೌದು, ಬಾಲಿವುಡ್‌ನ ಆಕ್ಷನ್ ಹೀರೋ ಎಂದೇ ಖ್ಯಾತಿ ಗಳಿಸಿರುವ ನಟ ಅಕ್ಷಯ್ ಕುಮಾರ್ ತಮ್ಮ ಎಂದಿನ ಫಾರ್ಮಲ್ ಸೂಟ್ ಹಾಗೂ ಡೀಸೆಂಟ್ ಔಟ್‌ಫಿಟ್‌ಗಳಿಗೆ ಸದ್ಯಕ್ಕೆ ಇತಿಶ್ರೀ ಹಾಕಿ, ಫಂಕಿ ಲುಕ್ ಹಾಗೂ ಫೆಮಿನೈನ್ ಶೇಡ್ ಎಂದೇ ಗುರುತಿಸಲಾಗುವ ಕ್ಯಾಂಡಿ ಪಿಂಕ್ ಶೇಡ್‌ನ ಪ್ಯಾಂಟ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ಮಾತ್ರವಲ್ಲ, ಸಿನಿ ಫ್ಯಾಷನ್ ಪ್ರಿಯರ ಹುಬ್ಬನ್ನು ಏರಿಸಿದೆ.
ಪ್ರಯೋಗಾತ್ಮಕ ಪಿಂಕ್ ಶೇಡ್‌ಗೆ ಸೈ ಎಂದ ಅಕ್ಷಯ್
ಅಂದಹಾಗೆ, ನಟ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಹೊರತುಪಡಿಸಿ, ಇದುವರೆಗೂ ಯಾವುದೇ ಬಗೆಯ ಪಿಂಕ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದರಲ್ಲೂ ಫೆಮಿನೈನ್ ಲುಕ್ ನೀಡುವಂತಹ ಕಲರ್ ಶೇಡ್‌ಗಳನ್ನು ಯಾವತ್ತೂ ಬಳಸಿರಲಿಲ್ಲ. ಇದೀಗ ಹೊಸ ಹಿಂದಿ ಸಿನಿಮಾ ʼಸೆಲ್ಫಿʼಯ ಪ್ರಮೋಷನ್‌ನಲ್ಲಿ ಈ ಕಲರ್‌ನ ಪ್ಯಾಂಟ್‌ಸೂಟ್ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಪರಿಣಾಮವಾಗಿ, ಚಿತ್ರದ ಇಡೀ ಟೀಮ್‌ನಲ್ಲಿ ಕೇವಲ ಅಕ್ಷಯ್ ಕುಮಾರ್ ಅವರು ಎದ್ದು ಕಾಣುವಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಸ್ಟಾರ್‌ಗಳು ವಿಭಿನ್ನವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲೂ ಔಟ್‌ಫಿಟ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸಾಮಾನ್ಯವಾದ ಸೂಟ್ ಧರಿಸಿದಲ್ಲಿ ಗುಂಪಲ್ಲಿ ಒಬ್ಬರಾಗಬಹುದು ಎಂಬ ಭಾವನೆ ಈಗಾಗಲೇ ಹಿರಿಯ ತಾರೆಯರಲ್ಲಿ ಮೂಡಿದೆ. ಹಾಗಾಗಿ ಸ್ಟೈಲಿಸ್ಟ್‌ಗಳ ಸಹಾಯ ಪಡೆದು ಡಿಫರೆಂಟ್ ಲುಕ್ ನೀಡುವಂತಹ ಪ್ರಯೋಗಾತ್ಮಕ ವರ್ಣದ ಔಟ್‌ಫಿಟ್‌ಗಳನ್ನು ಧರಿಸಿ, ಹೈಲೈಟಾಗಲಾರಂಭಿಸಿದ್ದಾರೆ. ಇದು ಇಂದಿನ ಸ್ಟಾರ್‌ಗಳ ಸ್ಟೈಲ್ ಟ್ರೆಂಡ್ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಜನರೇಷನ್‌ಗೆ ತಕ್ಕಂತೆ ಸ್ಟೈಲಿಂಗ್ ಅಪ್‌ಡೇಟ್
ಇನ್ನು ನಟರು ಸೀನಿಯರ್ ಆದ ತಕ್ಷಣ ಅವರ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಸಿರಿಯಸ್ ಆಗುತ್ತವೆ ಎಂಬ ಮಾತಿದೆ. ಅದನ್ನು ಸೈಡಿಗೆ ಸರಿಸಿರುವ ನಟ ಅಕ್ಷಯ್ ಇದೀಗ ಪಿಂಕ್ ಪ್ಯಾಂಟ್‌ಸೂಟ್‌ಗೂ ಸೈ ಎಂದು ಧರಿಸಿ ತಾವೇ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.
ಡಿಸೈನರ್ ಸರಬ್‌ಕನಿಜ್ ಅವರ ಲೆಬೆಲ್‌ನ ಸೂಟ್ ಇದಾಗಿದ್ದು, ಸುಕ್ರಿತಿ ಗ್ರೋವರ್ ಸ್ಟೈಲಿಂಗ್ ಇದಕ್ಕಿದೆ. ವಾಣಿ ಗುಪ್ತಾ, ಸಿಮ್ರಾನ್ ಕುಮಾರ್, ನಿಧಿ ಜೈನ್ ಈ ಸ್ಟೈಲಿಂಗ್‌ಗೆ ಸಾಥ್ ನೀಡಿದ್ದಾರೆ. ಒಪಿಯಮ್ ಐವೇರ್, ಬ್ಯಾಲಿ ಬ್ರಾಂಡ್‌ನ ಶೂಗಳನ್ನು ಈ ಔಟ್‌ಫಿಟ್‌ಗೆ ಅಕ್ಷಯ್ ಮ್ಯಾಚ್ ಮಾಡಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
FAQ
- ಅಕ್ಷಯ್ ಕುಮಾರ್ ಯಾವಾಗ ಮಲಗುತ್ತಾರೆ, ಏಳುವುದು ಎಷ್ಟು ಹೊತ್ತಿಗೆ?
ಉತ್ತರ: ರಾತ್ರಿ 9 ಗಂಟೆಗೆ ಮಲಗುತ್ತಾರೆ. ಬೆಳಗ್ಗೆ 5.30ಕ್ಕೆ ಏಳುತ್ತಾರೆ. - ಅಕ್ಷಯ್ ಕುಮಾರ್ ಅವರ 100ನೇ ಚಿತ್ರ ಯಾವುದು?
ಉತ್ತರ: 1991ರಲ್ಲಿ ಅವರ ಮೊದಲ ಚಲನಚಿತ್ರ ಸೌಘಂದ್. ಅವರ 100ನೇ ಚಿತ್ರ ಜೋಕರ್. - ಅಕ್ಷಯ್ ಕುಮಾರ್ ವಿಶ್ವದ ಅತ್ಯಂತ ಶ್ರೀಮಂತ ನಟ?
ಉತ್ತರ: ಅಕ್ಷಯ್ ಕುಮಾರ್ ಅವರು ವಿಶ್ವದ 6ನೇ ಶ್ರೀಮಂತ ನಟ.
ಇದನ್ನೂ ಓದಿ: Wedding Bridal Fashion : ಮದುವೆಯಲ್ಲಿ ಸೆಲೆಬ್ರೆಟಿ ಬ್ರೈಡ್‌ನಂತೆ ಕಾಣಿಸಬೇಕೆ? ಇಲ್ಲಿದೆ 5 ಐಡಿಯಾ