Site icon Vistara News

Star Fashion: ಸ್ಟೈಲಿಶ್‌ ಕಿರುತೆರೆ ನಟಿ ದೀಪಿಕಾ ದಾಸ್‌ ಬಿಂದಾಸ್‌ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ

Star Fashion deepika das

Star Fashion deepika das

ಶೀಲಾ ಸಿ. ಶೆಟ್ಟಿ. ಬೆಂಗಳೂರು

ಸದಾ ಆಕರ್ಷಕ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ದೀಪಿಕಾ ದಾಸ್‌, ಈ ವೀಕೆಂಡ್‌ನಲ್ಲಿ ಗ್ರೀನ್‌ ಕಾಂಬೀನೇಷನ್‌ಗೆ ಲೆಮನ್‌ ಯೆಲ್ಲೋ ಬಾರ್ಡರ್‌ ಇರುವಂತಹ ಟ್ಯಾಂಕ್‌ ಟಾಪ್‌- ಡ್ರಾಸ್ಟ್ರಿಂಗ್‌ ಸ್ಲ್ಪಿಟ್‌ ಮಿನಿ ಸ್ಕರ್ಟ್‌ನಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಬಿಂದಾಸ್‌ ಫ್ಯಾಷನ್‌ ಫೋಟೂಶೂಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಚಿತ್ರಗಳು : ದೀಪಿಕಾ ದಾಸ್‌ , ಕಿರುತೆರೆ ನಟಿ

ಟ್ರೆಂಡಿ ವರ್ಣದ ಆಕರ್ಷಕ ಔಟ್‌ಫಿಟ್‌

ಮಾನೋಕ್ರೋಮ್‌ನ ಈ ಔಟ್‌ಫಿಟ್‌ ಸದ್ಯಕ್ಕೆ ಟ್ರೆಂಡಿ ವರ್ಣಗಳಲ್ಲಿದ್ದು, ಸದ್ಯಕ್ಕೆ ಬಾಲಿವುಡ್‌ಗರ ವಾರ್ಡ್ರೋಬ್‌ಗೂ ಸೇರಿದೆ. ಇದೀಗ ದೀಪಿಕಾ ದಾಸ್‌ ಧರಿಸಿರುವುದು ಸ್ಥಳೀಯ ಫ್ಯಾಷನ್‌ನಲ್ಲಿ ಸದ್ದು ಮಾಡಿದೆ. ಇನ್ನು ಈ ಔಟ್‌ಫಿಟ್‌ಗೆ ಅವರ ರಿಂಗ್ಲೇಟ್ಸ್‌ ಹೇರ್‌ಸ್ಟೈಲ್‌ ಪರ್ಫೆಕ್ಟ್‌ ಮ್ಯಾಚ್‌ ಆಗಿದೆ. ಕಿವಿಗೆ ಧರಿಸಿರುವ ಹೂಪ್‌ ರಿಂಗ್‌, ಹಾರ್ಟ್ ಶೇಪ್‌ ಸನ್‌ಗ್ಲಾಸ್‌, ಕಲರ್‌ಫುಲ್‌ ಸ್ಯಾಂಡಲ್ಸ್‌ , ಸ್ಲಿಂಗ್‌ ಬ್ಯಾಗ್‌ ಎಲ್ಲವೂ ಸ್ಟೈಲಿಂಗ್‌ಗೆ ಸಾಥ್‌ ನೀಡಿದೆ. ಸದ್ಯಕ್ಕೆ ಬಾಲಿವುಡ್‌ ಸ್ಟಾರ್‌ಗಳ ಸ್ಟೈಲ್‌ ಸ್ಟೇಟ್‌ಮೆಂಟನ್ನು ನೆನಪಿಸುವಂತಿದೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ.

ಸ್ಟೈಲಿಶ್‌ ಕಿರುತೆರೆ ನಟಿ ದೀಪಿಕಾ ದಾಸ್‌

ಅಂದಹಾಗೆ, ದೀಪಿಕಾ ದಾಸ್‌ ಖ್ಯಾತ ಕಿರುತೆರೆ ನಟಿ. ನಾಗಿಣಿ ಸೀರಿಯಲ್‌ ಹಾಗೂ ಬಿಗ್‌ಬಾಸ್‌ನಲ್ಲಿ ಪಾಲ್ಗೊಂಡ ನಂತರ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಯಾವುದೇ ಇವೆಂಟ್‌ಗಳಾಗಲಿ, ಸಮಾರಂಭಗಳಾಗಲಿ ಆಕರ್ಷಕವಾಗಿ ಕಾಣಿಸಿಕೊಳ್ಳುವ ದೀಪಿಕಾ ದಾಸ್‌ ಸಖತ್‌ ಫ್ಯಾಷೆನಬಲ್‌ ನಟಿ. ಆಯಾ ಸಂದರ್ಭಕ್ಕೆ ತಕ್ಕಂತೆ ಔಟ್‌ಫಿಟ್‌ ಧರಿಸುವ ಕಿರುತೆರೆ ನಟಿಯರ ಪೈಕಿ ಇವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಎಕ್ಸ್‌ಕ್ಲೂಸೀವ್‌ ಡಿಸೈನ್‌ ಇಲ್ಲವೇ ವಿನ್ಯಾಸದ ಔಟ್‌ಫಿಟ್‌ಗಳನ್ನು ಆದಷ್ಟೂ ಪ್ರಿಫರ್‌ ಮಾಡುತ್ತಾರೆ. ಅದು ಟ್ರೆಡಿಷನಲ್‌ ಆಗಿರಬಹುದು ಅಥವಾ ವೆಸ್ಟರ್ನ್ ಔಟ್‌ಫಿಟ್‌ ಆಗಿರಬಹುದು.

“ನಾನು ಯಾವಾಗಲೂ ಟ್ರೆಂಡ್‌ ಸೆಟ್ಟರ್‌ ಆಗಲು ಬಯಸುತ್ತೇನೆ. ಆಯಾ ಸೀಸನ್‌ಗೆ ತಕ್ಕಂತೆ ಎಂಬುವುದಕ್ಕಿಂತ ನನ್ನದೇ ಆದ ಯೂನಿಕ್‌ ಫ್ಯಾಷನ್‌ ಸೆಟ್‌ ಮಾಡಲು ಇಷ್ಟಪಡುತ್ತೇನೆ” ಎಂದು ಖುದ್ದು ನಟಿ ದೀಪಿಕಾ ದಾಸ್‌ ಫ್ಯಾಷನ್‌ ಕುರಿತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇಂದಿಗೂ ಕೂಡ ಇದಕ್ಕೆ ಪೂರಕವಾಗುವಂತಹ ಅವರದ್ದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನು ಪಾಲಿಸುತ್ತಾ ಬಂದಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mrs universe Fashion News: ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ಗೆ ತೆರಳಿದ ಮೈಸೂರಿನ ಅಪೂರ್ವ ರೈ

Exit mobile version