ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್, (Star Fashion) ಈ ಸಮ್ಮರ್‌ನಲ್ಲೂ, ಮಲ್ಟಿ ಕಲರ್ ಫ್ಲೋರಲ್ ಸ್ಕರ್ಟ್ ಜತೆಗೆ ಟ್ರೆಂಡ್‌ನಲ್ಲಿರದ ಬ್ಲ್ಯಾಕ್ ಶೇಡ್ ಟಾಪ್ ಧರಿಸಿ ಪ್ರಯೋಗತ್ಮಾಕ ಫ್ಯಾಷನ್‌ಗೆ ನಾಂದಿ ಹಾಡಿದ್ದಾರೆ.
ಸ್ಟೈಲಿಸ್ಟ್‌ಗಳ ಅಭಿಪ್ರಾಯ
ನಟಿ ರಾಧಿಕಾ, ಮಲ್ಟಿ ಕಲರ್ ಫ್ಲೋರಲ್ ಪ್ರಿಂಟೆಡ್ ಸ್ಕರ್ಟ್‌ಗೆ ಮ್ಯಾಚ್ ಮಾಡುವ ಸಲುವಾಗಿ ಬ್ಲ್ಯಾಕ್ ಟಾಪ್ ಧರಿಸಿರಬಹುದು. ಇಲ್ಲವೇ ಪ್ರಯೋಗಾತ್ಮಕ ಫ್ಯಾಷನ್ ಯೋಚನೆಯಿಂದಾಗಿ ಬ್ಲ್ಯಾಕ್ ಟಾಪ್ ಧರಿಸಿರಬಹುದು ಎಂದಿದ್ದಾರೆ ಫ್ಯಾಷನ್ ವಿಮರ್ಶಕರು. ಅಂದಹಾಗೆ, ಈ ಸಮ್ಮರ್‌ನಲ್ಲಿ ಎಲ್ಲೆಡೆ ಫ್ಲೋರಲ್ ಪ್ರಿಂಟ್ಸ್‌ಗಳ ಔಟ್‌ಫಿಟ್‌ಗಳದ್ದೇ ಕಾರುಬಾರು.
ಇವು ಊಹೆಗೂ ಮೀರಿದ ನಾನಾ ಬಗೆಯ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿವೆ. ಆದರೆ, ಬ್ಲ್ಯಾಕ್ ಶೇಡ್ ಮಾತ್ರ ಸಮ್ಮರ್ ಸೀಸನ್‌ನ ಟ್ರೆಂಡ್‌ನಲ್ಲಿ ಇಲ್ಲ, ಸೀಸನ್‌ನಲ್ಲೂ ಇಲ್ಲ!ಹೌದು. ಸ್ಟೈಲಿಸ್ಟ್‌ಗಳ ಪ್ರಕಾರ, ಬ್ಲ್ಯಾಕ್ ಶೇಡ್, ಬೇಸಿಗೆಯ ಫ್ಯಾಷನ್‌ನಲ್ಲಿ ಮರೆಯಾಗುತ್ತದೆ. ಫ್ಯಾಷನ್ ಫಾಲೋ ಮಾಡದವರು ಮಾತ್ರ ಬ್ಲ್ಯಾಕ್ ಬಣ್ಣದ ಔಟ್‌ಫಿಟ್‌ಅನ್ನು ಈ ಸೀಸನ್‌ನಲ್ಲಿ ಧರಿಸುತ್ತಾರೆ. ಇನ್ನು ಪ್ಲಂಪಿಯಾಗಿರುವವರು ತಮ್ಮ ಪರ್ಫೆಕ್ಟ್ ಅಲ್ಲದ ಬಾಡಿ ಮಾಸ್ ಇಂಡೆಕ್ಸ್ ಮರೆಮಾಚಲು ಬ್ಲ್ಯಾಕ್ ಉಡುಪುಗಳನ್ನು ಧರಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಬ್ಲ್ಯಾಕ್ ಸೂರ್ಯನ ಕಿರಣಗಳನ್ನು ಹೀರುತ್ತದೆ. ಶಾಖ ಉತ್ಪತ್ತಿ ಮಾಡುತ್ತದೆ. ಇದು ಸೆಕೆಯನ್ನುಂಟು ಮಾಡುತ್ತದೆ. ಹಾಗಾಗಿ ಸಮ್ಮರ್‌ನಲ್ಲಿ ಬ್ಲ್ಯಾಕ್ ಶೇಡ್‌ನ ಹೆಚ್ಚು ಡಿಸೈನರ್‌ವೇರ್‌ಗಳು ಆಗಮಿಸುವುದಿಲ್ಲ. ಬಂದರೂ ಮಿಕ್ಸ್ ಮ್ಯಾಚ್ ಕಾಂಬಿನೇಷನ್ ಅಥವಾ ನೈಟ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ.
ಇನ್ನು ಇವನಿಂಗ್‌ವೇರ್‌ಗಳಲ್ಲಿ ಬ್ಲ್ಯಾಕ್ ಧರಿಸಬಹುದು. ಕೆಲವರು ಮಿಕ್ಸ್ ಮ್ಯಾಚ್ ಮಾಡುವಾಗ ಧರಿಸುತ್ತಾರೆ. ಆದರೆ, ಫ್ಯಾಷನ್ ಟ್ರೆಂಡ್ ಫಾಲೋ ಮಾಡಿರುವುದಿಲ್ಲ ಎನ್ನುವ ಫ್ಯಾಷನಿಸ್ಟಾ ರೇಷ್ಮಾ ಅವರ ಪ್ರಕಾರ, ನಟಿ ರಾಧಿಕಾ ನಾರಾಯಣ್ ಇದೇ ರೀತಿ ಮಿಕ್ಸ್ ಮ್ಯಾಚ್ ಮಾಡಿರಬಹುದು. ಹಾಗಾಗಿ ಸೀಸನ್‌ನಲ್ಲಿ ಈ ಶೇಡ್ ಇಲ್ಲದಿದ್ದರೂ ಫೋಟೋಶೂಟ್‌ಗಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಸಿಂಪಲ್ ಲುಕ್
ಇನ್ನು ಯಾವುದೇ ಜ್ಯುವೆಲರಿ ಧರಿಸದೆ, ಹೇರ್‌ಸ್ಟೈಲ್‌ನಲ್ಲೂ ವಿಭಿನ್ನವಾಗಿ ಕಾಣಿಸದೇ, ಸಿಂಪಲ್ ಔಟ್‌ಫಿಟ್‌ನಲ್ಲೂ ಆಕರ್ಷಕವಾಗಿ ಕಾಣಿಸುವುದು ಕೆಲವು ತಾರೆಯರು ಮಾತ್ರ. ಅದೇ ರೀತಿ ನಟಿ ರಾಧಿಕಾ ನಾರಾಯಣ್ ಆಡಂಬರವಿಲ್ಲದ ಔಟ್‌ಫಿಟ್‌ನಲ್ಲಿ ಸಿಂಪಲ್ ಆಗಿ ಆಕರ್ಷಕವಾಗಿ ಕಾಣಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Streetwear Fashion: ಅಲ್ಟ್ರಾ ಮಾಡರ್ನ್ ಯುವತಿಯರ ವಾರ್ಡ್‌ರೋಬ್ ಸೇರಿದ ರಿವರ್ಸ್ ಪ್ಯಾಚ್‌ವರ್ಕ್ ಜೀನ್ಸ್ ಪ್ಯಾಂಟ್